ಮತ್ತೆ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ನ್ಯಾನೋ ಡೀಸೆಲ್ ಕಾರು

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಟಾಟಾ ನ್ಯಾನೋ ಡೀಸೆಲ್ ವರ್ಷನ್ ಭಾರತ ರಸ್ತೆಗಿಳಿಯುವ ಕುರಿತಾಗಿ ನಾವು ಲೇಖನವೊಂದನ್ನು ಬರೆದಿದ್ದೆವು. ಇದಕ್ಕೆ ಪೂರಕವಾಗಿ ಟಾಟಾ ನ್ಯಾನೋ ಡೀಸೆಲ್ ಕಾರು ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಮತ್ತೆ ಸೆರೆ ಸಿಕ್ಕಿವೆ.

ಜಗತ್ತಿಗೆ ಅತಿ ಅಗ್ಗದ ಕಾರು ಪರಿಚಯಿಸಿದೆಂಬ ಖ್ಯಾತಿಗೆ ಪಾತ್ರವಾಗಿದ್ದ ಟಾಟಾ ಮೋಟಾರ್ಸ್ ಕಳೆದ ಕೆಲವು ಸಮಯಗಳಲ್ಲಿ ಮಾರಾಟ ಕುಸಿತ ಹಿನ್ನಲೆಯಲ್ಲಿ ಡೀಸೆಲ್ ಹಾಗೂ ಸಿಎನ್‌ಜಿ ಲಾಂಚ್ ಮಾಡುವ ಯೋಜನೆಯಲ್ಲಿದೆ. ಈ ಪೈಕಿ ಸಿಎನ್‌ಜಿ ವರ್ಷನ್ ಈಗಾಗಲೇ ಅನಾವರಣಗೊಂಡಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಹಾಗೆಯೇ ಡೀಸೆಲ್ ವರ್ಷನ್ 2014 ವರ್ಷಾರಂಭದಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

ಫ್ರಂಟ್ ಬಂಪರ್

ಫ್ರಂಟ್ ಬಂಪರ್

ಹಿಂದಿನ ಆವೃತ್ತಿಗೆ ಹೋಲಿಸಿದರೆ ನೂತನ ನ್ಯಾನೋ ಡೀಸೆಲ್ ಕಾರು ಮುಂದೆ ಹಾಗೂ ವಿಭಾಗದಲ್ಲಿ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಇದರ ಫ್ರಂಟ್ ಬಂಪರ್ ಡಿಸೈನ್ ಪ್ರಮುಖ ಆಕರ್ಷಣೆಯಾಗಿದೆ.

ಫೋಟೊ ಕೃಪೆ: ರಷ್‌ಲೇನ್
ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

2014ರಲ್ಲಿ ಡೀಸೆಲ್ ವರ್ಷನ್ ಬಿಡುಗಡೆಯಾಗುವುದರೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ವರ್ಷನ್‌ಗಳನ್ನು ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಲಭಿಸಲಿದೆ. ನ್ಯಾನೋ ಪೆಟ್ರೋಲ್ ವರ್ಷನ್ 624 ಸಿಸಿ ಟು ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 38 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಫೋಟೊ ಕೃಪೆ: ರಷ್‌ಲೇನ್

ಮೈಲೇಜ್

ಮೈಲೇಜ್

ಆದರೆ ಡೀಸೆಲ್ ವರ್ಷನ್ ಮಾತ್ರ 800 ಸಿಸಿ ತ್ರಿ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 48 ಪಿಎಸ್ ಪವರ್ ಉತ್ಪಾದಿಸಲಿದೆ. ಈ ಮೂಲದ ದೇಶದ ಅತ್ಯಂತ ಹೆಚ್ಚು ಇಂಧನ ದಕ್ಷತೆಯುಳ್ಳ ಖ್ಯಾತಿಗೆ ನ್ಯಾನೋ ಡೀಸೆಲ್ ಪಾತ್ರವಾಗಲಿದೆ. ಸದ್ಯ ಹೋಂಡಾ ಅಮೇಜ್ ಅತ್ಯಧಿಕ ಅಂದರೆ ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡುತ್ತಿದೆ.

ಫೋಟೊ ಕೃಪೆ: ರಷ್‌ಲೇನ್

ರಿಯರ್ ವ್ಯೂ ಕ್ಯಾಮೆರಾ

ರಿಯರ್ ವ್ಯೂ ಕ್ಯಾಮೆರಾ

ಇನ್ನು ಸಹಜವಾಗಿಯೇ ಡೀಸೆಲ್ ಎಂಜಿನ್ ನ್ಯಾನೋ ಕಾರಿನ ದರ ಹೆಚ್ಚಾಗಲಿರುವುದರಿಂದ ಎಡಬದಿಯ ರಿಯರ್ ವ್ಯೂ ಕನ್ನಡಿಗೆ ಟಾಟಾ ಮೋಟಾರ್ಸ್ ಕತ್ತರಿ ಪ್ರಯೋಗ ಮಾಡಿದೆ. ಅಂದರೆ ಚಾಲಕನ ಬಲಬದಿಯಲ್ಲಿ ಮಾತ್ರ ರಿಯರ್ ವ್ಯೂ ಕ್ಯಾಮೆರಾ ಸೌಲಭ್ಯ ಲಭ್ಯವಿರಲಿದೆ.

ಫೋಟೊ ಕೃಪೆ: ರಷ್‌ಲೇನ್

ಮಾರುತಿ ಪ್ರತಿಸ್ಪರ್ಧಿ

ಮಾರುತಿ ಪ್ರತಿಸ್ಪರ್ಧಿ

ಇನ್ನು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕೂಡಾ ಆಲ್ಟೊ 800ಸಿಸಿ ಡೀಸೆಲ್ ಕಾರು ಪರಿಚಯಿಸುವುದಾಗಿ ಘೋಷಿಸಿದೆ. ವೈಎಲ್‌7 ಕೋಡ್ ಪಡೆದುಕೊಂಡಿರುವ ಆಲ್ಟೊದ ಅಭಿವೃದ್ಧಿ ಕಾರ್ಯದಲ್ಲಿ ಮಾರುತಿ ತೊಡಗಿಸಿಕೊಂಡಿದೆ. ಹಾಗಾಗಿ ನ್ಯಾನೋ ಡೀಸೆಲ್ ಕಾರಿಗೆ ಇದು ಪ್ರಮುಖ ಸವಾಲಾಗಿರಲಿದೆ.

ಫೋಟೊ ಕೃಪೆ: ರಷ್‌ಲೇನ್

ನ್ಯಾನೋ ಇಮ್ಯಾಕ್ಸ್ ಸಿಎನ್‌ಜಿ ವರ್ಷನ್

ನ್ಯಾನೋ ಇಮ್ಯಾಕ್ಸ್ ಸಿಎನ್‌ಜಿ ವರ್ಷನ್

ಇತ್ತೀಚೆಗಷ್ಟೇ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್ಸ್' ಕಾರನ್ನು ಅನಾವರಣಗೊಳಿಸಿತ್ತು.

More from DriveSpark

Article Published On: Thursday, August 22, 2013, 8:03 [IST]
English summary
As we reported earlier about Tata Nano Diesel, Rushlane has captured new spy shots the car, while testing on Indian roads. It shows that 2014 model of Tata Nano will feature new bumper design on the front and rear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+