ಸ್ಯಾಂಗ್ಯೊಂಗ್‌ಗೆ ಮೆರಗು ತುಂಬಲಿರುವ ರೆಕ್ಸ್ಟಾನ್ ಆರ್‌ಎಕ್ಸ್6
ಇದೇ ವಾರದಲ್ಲಿ ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಯಾಂಗ್ಯೊಂಗ್ ತನ್ನ ನೂತನ ರೆಕ್ಸ್ಟಾನ್ ಎಸ್‌ಯುವಿ ವೆರಿಯಂಟ್ ಲಾಂಚ್ ಮಾಡಿತ್ತು. ನೂತನ ರೆಕ್ಸ್ಟಾನ್ ಆರ್‌ಎಕ್ಸ್6 ಮಿಡ್ ವೆರಿಯಂಟ್, ಆರ್‌ಎಕ್ಸ್5 ಹಾಗೂ ಟಾಪ್ ಎಂಡ್ ಆರ್‌ಎಕ್ಸ್7 ವೆರಿಯಂಟ್‌ಗಳ ನಡುವೆ ಗುರುತಿಸಿಕೊಳ್ಳಲಿದೆ.
ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಆರ್‌ಎಕ್ಸ್6 ದೆಹಲಿ ಎಕ್ಸ್ ಶೋ ರೂಂ ದರ 19.96 ಲಕ್ಷ ರು.ಗಳಾಗಿರಲಿದೆ. ಅಷ್ಟಕ್ಕೂ ನೂತನ ವೆರಿಯಂಟ್‌ನಲ್ಲಿರುವ ವಿಶಿಷ್ಟತೆಗಳೇನು? ಹೆಚ್ಚಿನ ವಿವರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಆರ್‌ಎಕ್ಸ್6 ಮಾದರಿಯಲ್ಲಿ ಮರ್ಸಿಡಿಸ್‌ನ 2.7 ಲೀಟರ್ 5 ಸಿಲಿಂಡರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, 162 ಬಿಎಚ್‌ಪಿ (340 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸಲಿದೆ.

ಅದೇ ರೀತಿ ಆರ್‌ಎಕ್ಸ್5 ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಅಂದರೆ 5 ಸ್ಪೀಡನ್ ಮ್ಯಾನುವಲ್ ಎಲ್ಲ ನಾಲ್ಕು ಚಕ್ರಗಳಲ್ಲಿ ಪವರ್ ವಿತರಿಸಲಿದೆ.

ಸ್ಟಾಂಡರ್ಡ್ ಫೀಚರ್ಸ್
ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್,
ಪ್ರೀಮಿಯಂ ಲೆಥರ್ ಅಪ್‌ಹೊಲ್‌ಸ್ಟ್ರೇ,
ಎಂಟು ರೀತಿಯಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟು,
ಮೆಮರಿ ಫಂಕ್ಷನ್,
ಎಲೆಕ್ಟ್ರಿಕ್ ಸನ್‌ರೂಫ್,

ಸ್ಟಾಂಡರ್ಡ್ ಫೀಚರ್ಸ್
ಆಟೋಮ್ಯಾಟಿಕ್ ಹೆಡ್‌ಲೈಟ್,
ರೈನ್ ಸೆನ್ಸಿಂಗ್ ವೈಪರ್,
ಮಾಹಿತಿ ಮನರಂಜನಾ ಸಿಸ್ಟಂ,
ನೇವಿಗೇಷನ್,
ಎಬಿಎಸ್,
ಹಿಲ್ ಡಿಸೆಂಟ್ ಆಂಡ್ ಅಸೆಂಟ್ ಕಂಟ್ರೋಲ್

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)
ಆರ್‌ಎಕ್ಸ್6 - 19.96 ಲಕ್ಷ ರು.
ಆರ್‌ಎಕ್ಸ್5 - 18.87 ಲಕ್ಷ ರು.
ಆರ್‌ಎಕ್ಸ್7- 21.11 ಲಕ್ಷ ರು.


Click it and Unblock the Notifications








