ಸ್ಯಾಗ್ಯೊಂಗ್ ಟಿವೊಲಿ ಕಾಂಪಾಕ್ಟ್ ಎಸ್‌ಯುವಿ ಭಾರತಕ್ಕೆ ಬರುತ್ತಾ?
ದಕ್ಷಿಣ ಕೊರಿಯಾದ ಪ್ರಖ್ಯಾತ ಕಾರು ಬ್ರಾಂಡ್ ಆಗಿರುವ ಸ್ಯಾಂಗ್ಯೊಂಗ್ ತವರೂರಲ್ಲಿ ಹೊಚ್ಚ ಹೊಸ ಟಿವೊಲಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆ ಮಾಡಿದೆ. ನಾವೀನ್ಯತೆಯ ವಿನ್ಯಾಸ ಹಾಗೂ ಗಮನಾರ್ಹ ಶೈಲಿಯು ಇತರ ಮಾದರಿಗಿಂತ ಟಿವೊಲಿ ಕಾರನ್ನು ವಿಭಿನ್ನವಾಗಿಸಲಿದೆ.
ಭಾರತದ ಪಾಲಿಗೆ ಸ್ಯಾಂಗ್ಯೊಂಗ್ ಹೊಸ ಕಾಂಪಾಕ್ಟ್ ಎಸ್‌ಯುವಿ ಅತಿ ಮಹತ್ವದೆನಿಸಿದೆ. ಏಕೆಂದರೆ ಸ್ಯಾಂಗ್ಯೊಂಗ್ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಒಡೆತನದಲ್ಲಿದೆ. ಈ ನಿಟ್ಟಿನಲ್ಲಿ ಟಿವೊಲಿ ತಳಹದಿಯಲ್ಲಿ ಮಹೀಂದ್ರ ಹೊಸ ಕಾಂಪಾಕ್ಟ್ ಎಸ್‌ಯುವಿ ಭಾರತಕ್ಕೆ ಪರಿಚಯವಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಇನ್ನೊಂದೆಡೆ ಭಾರತದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆ ಇರುವುದು ಸಹ ಇಲ್ಲಿ ಗಮನಾರ್ಹವೆನಿಸಿದೆ.

ಎಂಜಿನ್
ಸ್ಯಾಂಗ್ಯೊಂಗ್‌ನ ಚೊಚ್ಚ ಕಾಂಪಾಕ್ಟ್ ಎಸ್‌ಯುವಿ ಆಗಿರುವ ಟಿವೊಲಿ, 1.6 ಲೀಟರ್ ಎಂಜಿನ್ ಪಡೆದುಕೊಂಡಿದೆ. ಈ ಜಾಗತಿಕ ಮಾದರಿಯು ಒಂದು ವರ್ಷದೊಳಗೆ ಒಂದು ಲಕ್ಷ ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದೆ. ಈ ಪೈಕಿ ತವರೂರಾದ ದಕ್ಷಿಣ ಕೊರಿಯಾದಲ್ಲೇ 40,000 ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದೆ.
ನಿರ್ವಹಣೆ
1.6 ಲೀಟರ್ ಎಂಜಿನ್, 126 ಅಶ್ವಶಕ್ತಿ, 16.0 ಕೆಜಿಎಂ ಟಾರ್ಕ್

ಒಳಮೈ
- ಕಾಂಪಾಕ್ಟ್ ಡಿಲಕ್ಸ್ ಶೈಲಿ,
- ಬಾರ್ ಟೈಪ್ ಸ್ವಿಚ್,
- ಟಚ್ ಸ್ಕ್ರೀನ್ ಕಟ್ರೋಲರ್,
- ಒಟ್ಟು ಅಗಲ 1.795 ಎಂಎಂ,
- ಹೆಚ್ಚಿನ ಸ್ಥಳಾವಕಾಶ,
- 423 ಲೀಟರ್ ಸ್ಟೋರೆಜ್,
- ಏಳು ಇಂಚಿನ ಡಿಸ್‌ಪ್ಲೇ ಸ್ಕ್ರೀನ್,
- ರಿಯರ್ ಕ್ಯಾಮೆರಾ,
- ಸಿಕ್ಸ್ ಸ್ಪೀಕರ್ ಸೌಂಡ್ ಸಿಸ್ಟಂ
- ಡ್ರೈವರ್ ಸೀಟ್ ವೆಂಟಿಲೇಷನ್,
- ಬಿಸಿಯಾದ ಎರಡನೇ ಸಾಲಿನ ಸೀಟು,
- ಸೆಮಿ ಬಕೆಟ್ ಸೀಟು,
- ಸಂಪೂರ್ಣ ಆಟೋಮ್ಯಾಟಿಕ್ ಡ್ಯುಯಲ್ ಎಸಿ ಸಿಸ್ಟಂ,
- ಅಡಚಣೆ ಪತ್ತೆ ವ್ಯವಸ್ಥೆ ಜೊತೆ ಆರು ಸೆನ್ಸಾರ್,
- ಲಗ್ಗೇಜ್ ಸ್ಕ್ರೀನ್,
- ಆಟೋಮ್ಯಾಟಿಕ್ ವಾಶರ್ ಸ್ವಿಚ್ ಮತ್ತು ಆಟೋಮ್ಯಾಟಿಕ್ ಹಜಾರ್ಡ್ ಲೈಟ್ಸ್,
- ಡಿ ಕಟ್ ಸ್ಟೀರಿಂಗ್ ವೀಲ್,
- ಆರು ಬಣ್ಣದ ಕ್ಲಸ್ಟರ್ ಜೊತೆ 3.5 ಇಂಚು ಡಿಸ್‌ಪ್ಲೇ
- ಪ್ರತಿ ಲೀಟರ್‌ಗೆ 12.0 ಕೀ.ಮೀ. (ಆಟೋಮ್ಯಾಟಿಕ್)
- ಪ್ರತಿ ಲೀಟರ್‌ಗೆ 12.3 ಕೀ.ಮೀ. (ಮ್ಯಾನುವಲ್)
- ಅಲ್ಟ್ರಾ ಶಕ್ತಿಶಾಲಿ ಉಪಕರಣ ಬಳಕೆ,
- ಏಳು ಏರ್ ಬ್ಯಾಗ್,
- ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್,
- ಬಹು ಕ್ರಿಯಾತ್ಮಕ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,
- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
- ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್.

ಹೊಸತನವೇನು?

ಮೈಲೇಜ್



Click it and Unblock the Notifications








