ಯುರೋಪ್‌ನಲ್ಲೂ ಅಬ್ಬರಿಸಲಿದೆಯೇ ಸೆಲೆರಿಯೊ?
ಭಾರತದಲ್ಲಿನ ಸೆಲೆರಿಯೊ ಜ್ವರ ಯುರೋಪ್‌ಗೂ ಪಸರಿಸಲು ಶುರುವಾಗಿದೆ. ಹೌದು, ಬಹುನಿರೀಕ್ಷಿತ 2014 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಸೆಲೆರಿಯೊ ಆಟೋಮ್ಯಾಟಿಕ್ ಕಾರು ಪ್ರದರ್ಶನಗೊಂಡಿದೆ.
ಈ ಹಿಂದೆ ನವದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಿದ್ದ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿಗೆ ಭಾರತದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಮ್ಯಾನುವಲ್ ಕಾರಿಗಿಂತಲೂ ಹೆಚ್ಚು ಆಟೋಮ್ಯಾಟಿಕ್ ವೆರಿಯಂಟ್ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಅಂಗಸಂಸ್ಥೆಯಾಗಿರುವ ಸುಜುಕಿ ಸೆಲೆರಿಯೊ ಆವೃತ್ತಿಯನ್ನು ಜಿನೆವಾದಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಇದು ಬ್ರಿಟನ್‌ನಲ್ಲಿ ಆಲ್ಟೊ ಹಾಗೂ ಸ್ಪ್ಲಾಶ್ ಬದಲಿ ಕಾರಾಗಿರಲಿದೆ. ನಿಮ್ಮ ಮಾಹಿತಿಗಾಗಿ ಸೆಲೆರಿಯೊ ಭಾರತದಲ್ಲಿ ಎಸ್ಟಾರ್ ಹಾಗೂ ಎಸ್ಟಿಲೊ ಬದಲಿ ಕಾರಾಗಿತ್ತು. ಪ್ರಸ್ತುತ ಸೆಲೆರಿಯೊ ಆವೃತ್ತಿಯು ಹ್ಯುಂಡೈ ಐ10 ಹಾಗೂ ಟೊಯೊಟಾದ ನೂತನ ಕಾರುಗಳಿಗೆ ಪ್ರತಿಸ್ಪರ್ಧೆ ಒಡ್ಡಲಿದೆ.

ಭಾರತೀಯ ಮಾದರಿಯನ್ನು ಪರಿಗಣಿಸಿದರೆ ಸೆಲೆರಿಯೊ ಯುರೋಪ್ ವರ್ಷನ್ ಅತ್ಯಧಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು ಆಟೋ ಎಂಜಿನ್ ಸ್ಟಾರ್ಟ್/ಸ್ಟಾಪ್ ಹೊಂದಿರಲಿದ್ದು, ಗರಿಷ್ಠ ಇಂಧನ ಕ್ಷಮತೆ ನೀಡಲು ಯಶಸ್ವಿಯಾಗಲಿದೆ.

ಬ್ರಿಟನ್ ಸೆಲೆರಿಯೊ ಆವೃತ್ತಿಯು ಆಟೋ ಗೇರ್ ಶಿಫ್ಟ್ ಕೂಡಾ ಹೊಂದಿರಲಿದ್ದು, ಇದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಹೋಲಿಸಿದರೆ ಹೆಚ್ಚು ಇಂಧನ ಕ್ಷಮತೆ ನೀಡಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಇನ್ನು ಯುರೋಪಿಯರ್ ಸ್ಟಾಂಡರ್ಡ್‌ಗೆ ಅನುಸಾರವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸ್ಟೈಲಿಷ್ ಅಲಾಯ್ ವೀಲ್ ಜತೆ ಕಪ್ಪು ವರ್ಣದ ಇಂಟಿರಿಯರ್ ಪಡೆದುಕೊಂಡಿದೆ.

ಅಷ್ಟಕ್ಕೂ ಪ್ರಸಕ್ತ ಸಾಲಿನ ವರ್ಷಾಂತ್ಯದಲ್ಲಷ್ಟೇ ಬ್ರಿಟನ್‌ನಲ್ಲಿ ಸೆಲೆರಿಯೊ ಮಾರಾಟ ಪ್ರಾರಂಭವಾಗಲಿದೆ. ಅಲ್ಲದೆ ಯುರೋ ಎನ್‌ಸಿಎಪಿ ಅಪಘಾತ ಪರೀಕ್ಷೆಯಲ್ಲೂ ಭಾಗವಹಿಸಲಿದ್ದು, 4 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಅಂತಿಮವಾಗಿ ಭಾರತ ಆವೃತ್ತಿ ಹೋಲಿಸಿದಾಗ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಯುರೋಪ್ ವರ್ಷನ್ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸೆಲೆರಿಯೊ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.


Click it and Unblock the Notifications








