ಎರ್ಟಿಗಾ ಆಟೋಮ್ಯಾಟಿಕ್ ವರ್ಷನ್ ಲಾಂಚ್
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಲೈಫ್ ಯುಟಿಲಿಟಿ ವೆಹಿಕಲ್ (ಎಲ್‌ಪಿವಿ) ಎರ್ಟಿಗಾ ಆಟೋಮ್ಯಾಟಿಕ್ ವರ್ಷನ್ ಥೈಲಾಂಡ್‌ನಲ್ಲಿ ಲಾಂಚ್ ಆಗಿದ್ದು, ಭಾರಿ ಯಶ ಸಾಧಿಸುವ ನಿರೀಕ್ಷೆ ಹೊಂದಿದೆ.
ಮುಂದಿನ ವಾರದ ಬ್ಯಾಂಕಾಂಕ್ ಮೋಟಾರ್ ಶೋದಲ್ಲಿ ಎರ್ಟಿಗಾ ವರ್ಷನ್ ಅನಾವರಣಗೊಳ್ಳಲಿರುವಂತೆಯೇ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭಿಸಿವೆ.
ಎರ್ಟಿಗಾ ವೈಶಿಷ್ಟ್ಯಗಳು
- ಲೈಫ್ ಯುಟಿಲಿಟಿ ವೆಹಿಕಲ್ (ಭಾರತಕ್ಕೆ ಸಮಾನ)
- ಉತ್ತಮ ಹ್ಯಾಂಡ್ಲಿಂಗ್, ಆರಾಮದಾಯಕ, ಯುಟಿಲಿಟಿ ಸ್ಪೇಸ್
- ಭಾರತೀಯ ಮಾದರಿಯಲ್ಲಿರುವಂತೆ ಸಮಾನ 1.4 ಲೀಟರ್ ವಿವಿಟಿ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಬಳಕೆ
- ಬೇಸ್ ವೆರಿಯಂಟ್ ಎರ್ಟಿಗಾ ಜಿಎನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್
- ಮಿಡ್ ವೆರಿಯಂಟ್ ಎರ್ಟಿಗಾ ಜಿಎಲ್ ಹಾಗೂ ಟಾಪ್ ವೆರಿಯಂಟ್ ಎರ್ಟಿಗಾ ಜಿಎಕ್ಸ್‌ನಲ್ಲಿ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
- ಚಾಲಕ ಹಾಗೂ ಪ್ರಯಾಣಿಕ ಏರ್‌ಬ್ಯಾಗ್ ಸೌಲಭ್ಯ ಲಭ್ಯ, ಎಬಿಎಸ್ (ಜಿಎಕ್ಸ್)
- ಅಲ್ಯೂಮಿನಿಯಂ ಅಲಾಯ್ ವೀಲ್ಸ್

ಮಾರುತಿ ಡಿಜೈರ್ ಹಾಗೂ ರಿಟ್ಸ್ ಮಾದರಿಗಳಲ್ಲಿ ಕಂಡುಬಂದಿರುವಂತೆಯೇ 4 ಸ್ಪೀಡ್ ಯುನಿಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಇಂಡೋನೇಷ್ಯಾದಿಂದ ಥಾಲೈಂಡ್‌ಗೆ ಎರ್ಟಿಗಾ ರಫ್ತು ಮಾಡಲಾಗುತ್ತಿದೆ. ಆದರೆ ಇದು ಭಾರತದಿಂದ ಜೋಡಣೆ ಮಾಡಲಾದ ಸಿಕೆಡಿ ಯುನಿಟ್ ಆಗಿರಲಿದೆ. ಹಾಗಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಭಾರತ ಅಥವಾ ಇಂಡೋನೇಷ್ಯಾದಿಂದ ಆಗಮನವಾಗಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ದರ ಮಾಹಿತಿ
ಇನ್ನು ಬೇಸ್ ವೆರಿಯಂಟ್ ದರ 10.33 ಲಕ್ಷ ರು.ಗಳಾಗಿದ್ದು ಟಾಪ್ ಎಂಡ್ ವೆರಿಯಂಟ್ ದರ 13 ಲಕ್ಷ ಅಸುಪಾಸಿನಲ್ಲಿರಲಿದೆ.

ಫರ್ಫೆಟ್ ಫ್ಯಾಮಿಲಿ ವೆಹಿಕಲ್ ಎಂದೇ ಖ್ಯಾತಿ ಪಡೆದಿರುವ ಎರ್ಟಿಗಾ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದೀಗ ಆಟೋಮ್ಯಾಟಿಕ್ ವರ್ಷನ್ ಭಾರತಕ್ಕೆ ಯಾವಾಗ ಆಗಮಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ

ಸುಜುಕಿ ಎರ್ಟಿಗಾ



Click it and Unblock the Notifications