ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಲಾಂಚ್; ನೆಕ್ಸ್ಟ್ ಇಂಡಿಯಾ
ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮಾತೃ ಸಂಸ್ಥೆಯಾಗಿರುವ ಸುಜುಕಿ, ಜಪಾನ್‌ಗೆ ನೂತನ ಸ್ವಿಫ್ಟ್ ಫೇಸ್‌ಲಿಫ್ಟ್ ಪರಿಚಯಿಸಿದೆ. ಡ್ಯುಯಲ್ ಜೆಟ್ ಎಂಜಿನ್ (ಡಿಜೆಇ) ಜತೆಗೆ ಹಲವು ನವೀನ ಫೀಚರ್‌ಗಳೊಂದಿಗೆ ಆಗಮನವಾಗಿರುವ ಸ್ವಿಫ್ಟ್ ನಿಕಟ ಭವಿಷ್ಯದಲ್ಲೇ ಭಾರತ ಪ್ರವೇಶ ಪಡೆಯಲಿದೆ.
ಜಾಗತಿಕವಾಗಿಯೂ ಕಾರು ಮಾರುಕಟ್ಟೆ ಹಿನ್ನಡೆಯಲ್ಲಿರುವ ಈ ಹಂತದಲ್ಲಿ ಸ್ವಿಫ್ಟ್‌ನಿಂದ ಹೊಸ ಫೇಸ್‌ಲಿಫ್ಟ್ ಆಗಮನವಾಗಿದೆ. ಆಟೋ ವಿಶ್ಲೇಷಕರಿಂದ ಹೆಚ್ಚಿನ ಬದಲಾವಣೆಗಳಿಲ್ಲವೆಂಬ ಆರೋಪಕ್ಕೊಳಗಾಗಿದ್ದರೂ ಆಧುನಿಕ ತಂತ್ರಜ್ಞಾನಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುವಲ್ಲಿ ಸ್ವಿಫ್ಟ್ ಯಶಸ್ಸನ್ನು ಕಂಡಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ನೂತನ ಸ್ವಿಫ್ಟ್ ಎಕ್ಸ್‌ಟೀರಿಯರ್ ಭಾಗದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದಿದ್ದರೂ ಜಪಾನ್ ಗ್ರಾಹಕರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಇದರ ಡ್ಯುಯಲ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ನೂತನ ಸ್ವಿಫ್ಟ್ ಫೆಸ್‌ಲಿಫ್ಟ್ ವರ್ಷನ್ 1.2 ಲೀಟರ್ ಕೆ ಸಿರೀಸ್ ಎಂಜಿನ್ ಪಡೆದುಕೊಳ್ಳಲಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಇದು ಗರಿಷ್ಠ ಇಂಧನ ಕ್ಷಮತೆ ನೀಡಲು ನೆರವಾಗಲಿದ್ದು, ಪ್ರತಿ ಲೀಟರ್‌ಗೆ 26.4 ಕೀ.ಮೀ. ಮೈಲೇಜ್ ನೀಡಲಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ನೂತನ ಸ್ವಿಫ್ಟ್ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ. ಇದು ಪರಿಸರಾ ಚಾಲನೆಗೆ ಉತ್ತೇಜನ ನೀಡುತ್ತಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಜಪಾನ್‌ನಲ್ಲಿ ಸ್ಪೋರ್ಟ್ ಇಎಸ್‌ಪಿ ಸ್ಟಾಂಡರ್ಡ್ ವೆರಿಯಂಟ್ ಆಗಿರಲಿದೆ. ಹಾಗೆಯೇ ಸ್ವಿಫ್ಟ್ ಆರ್‌ಎಸ್ ವೆರಿಯಂಟ್ ಆಕ್ರಮಣಕಾರಿ ಲುಕ್ ಪಡೆದುಕೊಂಡಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಒಟ್ಟು ಏಳು ವೆರಿಯಂಟ್‌ಗಳಲ್ಲಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಆಗಮನವಾಗಿದೆ.

ಜಪಾನ್‌ನಲ್ಲಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್
ಅವುಗಳೆಂದರೆ XG-DJE, XL-DJE, XS-DJE, XG, XL, special edition Swift RS, and XS.

ದರ ಮಾಹಿತಿ
ಇನ್ನು ದರ ಬಗ್ಗೆ ಮಾತನಾಡುವುದಾದರೆ ನೂತನ ಸ್ವಿಫ್ಟ್ 7.5 ಲಕ್ಷ ರು.ಗಳಿಂದ 10.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

Click it and Unblock the Notifications