ಬ್ರಿಟನ್‌ಗೆ ಲಗ್ಗೆಯಿಟ್ಟ ಸುಜುಕಿ ಸ್ವಿಫ್ಟ್ 4X4; ಭಾರತಕ್ಕೆ ಯಾವಾಗ?
ಭಾರತವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಸುಜುಕಿ ಆಲ್ ವೀಲ್ ಡ್ರೈವ್ ಮಾಡೆಲ್‌ಗಳಿಗೆ ಉತ್ತಮ ಬೇಡಿಕೆಯಿದೆ. ಈ ಹಿಂದೆ ದೇಶಕ್ಕೆ ಸುಜುಕಿ ಗ್ರಾಂಡ್ ವಿಟರಾ ಎಸ್‌ಯುವಿ ಫೋರ್ ವೀಲ್ ಡ್ರೈವ್ ಪರಿಚಯವಾಗಿದ್ದರೂ ನಿರೀಕ್ಷಿತ ಯಶ ಗಳಿಸಲು ಸಾಧ್ಯವಾಗಿರಲಿಲ್ಲ.
ಆದರೆ ಭಾರತವನ್ನು ಹೊರತುಪಡಿಸಿ ಯುರೋಪ್ ರಾಷ್ಟ್ರಗಳಲ್ಲಿ ಸುಜುಕಿ ಫೋರ್ ವೀಲ್ ಡ್ರೈವ್ ಹೆಚ್ಚಿನ ಯಶಸ್ಸನ್ನು ಗಳಿಸಿದೆ. ಇದರ ಮುಂದುವರಿದ ಭಾಗವೆಂಬಂತೆ ಸುಜುಕಿ ಸ್ವಿಫ್ಟ್ 4x4 ಕಾರು ಬ್ರಿಟನ್ ಮಾರುಕಟ್ಟೆ ಪ್ರವೇಶಿಸಿದೆ.
ಸುಜುಕಿಯಿಂದ ಯಾವುದೇ ಮಾಡೆಲ್ ವಿದೇಶದಲ್ಲಿ ಪರಿಚಯವಾದರೂ ಆ ನಿರ್ದಿಷ್ಟ ಮಾದರಿ ಭಾರತಕ್ಕೆ ಆಗಮನವಾಗಲಿದೆಯೇ ಎಂಬುದನ್ನು ತಿಳಿಯುವ ಕುತುಹೂಲ ನಮ್ಮ ಗ್ರಾಹಕರಲ್ಲಿರುತ್ತದೆ. ಆದರೆ ಸುಜುಕಿ ಫೋರ್ ವೀಲ್ ಡ್ರೈವ್ ಸದ್ಯ ಭಾರತಕ್ಕೆ ಆಗಮನವಾಗುವ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸುಜುಕಿ ಸ್ವಿಫ್ಟ್ 4x4 ಸಂಪೂರ್ಣ ಆಟೋಮ್ಯಾಟಿಕ್ ಕಾರಾಗಿದ್ದು, 4ಡಬ್ಲ್ಯು ಸಿಸ್ಟಂ ಹೊಂದಿದೆ.

ನೂತನ ಸ್ವಿಫ್ಟ್ 4x4, ಎಸ್‌ಝಡ್3 ಹಾಗೂ ಎಸ್‌ಝಡ್4 ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

ನೂತನ ಎಸ್‌ಝಡ್4 ವೆರಿಯಂಟ್ ಪವರ್ ಫೋಲ್ಡಿಂಗ್ ಡೋರ್ ಮಿರರ್, ಇಂಟೆಗ್ರೇಟಡ್ ಇಂಟಿಕೇಟರ್ ಹಾಗೂ ಡೇಟೈಮ್ ರನ್ನಿಂಗ್ ಲೈಟ್ಸ್ ಪಡೆಯಲಿದೆ. ಹಾಗೆಯೇ ಕೆಲವು ಆಫ್ ರೋಡ್ ಪ್ಯಾಕೇಜ್ ಇರಲಿದೆ.

ಸುಜುಕಿ ಸ್ವಿಫ್ಟ್ 4x4 ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಕಂಪನಿಯ ಪ್ರಕಾರ ನೂತನ ಸ್ವಿಫ್ಟ್ 4x4 ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಯುವಿ ಬದಲು ಸಣ್ಣ ಕಾರು ಬಯಸುವ ಗ್ರಾಹಕರಿಗೆ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ ಎಂದಿದೆ.

ದರ ಮಾಹಿತಿ
ಸುಜುಕಿ ಸ್ವಿಫ್ಟ್ 4x4 ಎಸ್‌ಝುಡ್3 ವೆರಿಯಂಟ್ ದರ 10 ಲಕ್ಷ ಅಸುಪಾಸಿನಲ್ಲಿರಲಿದೆ. ಹಾಗೆಯೇ ಎಸ್‌ಝಡ್4 ಆವೃತ್ತಿ 12 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಪ್ರಸ್ತುತ ಸ್ವಿಫ್ಟ್ 4x4 ಭಾರತಕ್ಕೆ ಆಗಮನವಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತ ಖರ್ಚು ಮಾಡಿ ಸ್ವಿಫ್ಟ್ ಖರೀದಿಸುವ ಸಾಧ್ಯತೆಗಳು ವಿರಳವಾಗಿದೆ. ಇದರ ಬದಲು ಗ್ರಾಹಕರು ಎಸ್‌ಯುವಿಗಳ ಮೊರೆ ಹೋಗಲು ಬಯಸುತ್ತಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.


Click it and Unblock the Notifications








