ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

By Nagaraja

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಪಾಲಿಗೆ ಸಿಹಿ-ಕಹಿ ಎರಡೂ ಅನುಭವವನ್ನು ನೀಡಿದ ಕಾರೆಂದರೆ ಅದುವೇ ನ್ಯಾನೋ. ಒಂದೆಡೆ ವಿಶ್ವದ ಅಗ್ಗದ ಕಾರೆಂಬ ಪಟ್ಟ ಗಿಟ್ಟಿಸಿಕೊಂಡರೆ ಇನ್ನೊಂದೆಡೆ ಗುಣಮಟ್ಟ ವೈಫಲ್ಯ ನ್ಯಾನೋ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಹಾಗಿದ್ದರೂ ಇವೆಲ್ಲದರರಿಂದ ಎದೆಗುಂದದ ಟಾಟಾ, ನ್ಯಾನೋ ಸಿಎನ್‌ಜಿ ವೆರಿಯಂಟನ್ನು ಲಾಂಚ್ ಮಾಡಿಯೇ ಬಿಟ್ಟಿತ್ತು. ಇಲ್ಲಿಗೂ ನಿಲ್ಲದ ಟಾಟಾ ಛಲ ಡೀಸೆಲ್ ವರ್ಷನ್ ಲಾಂಚ್ ಮಾಡುವುದರತ್ತಲೂ ಕಣ್ಣಾಯಿಸಿದೆ.

ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

ಈ ಎಲ್ಲದರ ನಡುವೆ ಹೊಸತೊಂದು ನ್ಯಾನೋ ಪ್ಲಸ್ ವೆರಿಯಂಟ್ ಲಾಂಚ್ ಮಾಡಲು ಟಾಟಾ ಮೋಟಾರ್ಸ್ ಯೋಜನೆ ಹಾಕಿಕೊಳ್ಳಲಿದೆ. ಇದು ಡೀಸೆಲ್ ಮಾದರಿಯ ಬೆನ್ನಲ್ಲೇ ಆಗಮನವಾಗಲಿದೆ.

ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

ಸಹಜವಾಗಿಯೇ ಹೊಸ ವೆರಿಯಂಟ್ ಹಳೆ ಮಾದರಿಗಿಂತಲೂ ಹೇಗೆ ಭಿನ್ನವಾಗಿರಲಿದೆಯೆಂಬ ಪ್ರಶ್ನೆ ಗ್ರಾಹಕರಲ್ಲಿ ಕುತೂಹಲಕ್ಕೆ ಕಾರಣವಾಗಿರಬಹುದು. ನೂತನ ನ್ಯಾನೋ ಪ್ಲಸ್ ಡಿಸ್ಕ್ ಬ್ರೇಕ್, ಸುಧಾರಿತ ಎಸಿ, ಬಕೆಟ್ ಸೀಟ್, ಹೊಸ ಡ್ಯಾಶ್‌ಬೋರ್ಡ್, ಎಲ್‌ಇಡಿ ಹೆಡ್‌ಲ್ಯಾಂಪ್, ಫಾಗ್ ಲೈಟ್ಸ್, ಪರಿಷ್ಕೃತ ಬೊನೆಟ್ ಮತ್ತು ತೆರೆಯಬಹುದಾದ ಟೈಲ್ ಪಡೆದುಕೊಳ್ಳಲಿದೆ.

ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

ಈ ಎಲ್ಲ ನೂತನ ಯೋಜನೆ ಮೂಲಕ ಗ್ರಾಹಕರನ್ನು ಆಕರ್ಷಿಸುವುದರತ್ತ ಟಾಟಾ ದಿಟ್ಟ ಹೆಜ್ಜೆಯನ್ನಿಡಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಜನ ಸಾಮಾನ್ಯರ ಕಾರು ಎನಿಸಿಕೊಂಡಿರುವ ನ್ಯಾನೋ, ಗುಣಮಟ್ಟದಲ್ಲೂ ಜನಮನಗೆಲ್ಲುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

ನ್ಯಾನೋ ಯಶಸ್ಸಿಗಾಗಿ ಟಾಟಾ ಮಾಡಿದ ಎಲ್ಲ ಪ್ರಯತ್ನಗಳು ಮಿಶ್ರಫಲ ಕಂಡಿದ್ದವು. ಆದರೆ ಸೋಲೊಪ್ಪಿಕೊಳ್ಳಲು ಮಾತ್ರ ಟಾಟಾ ತಯಾರಿಲ್ಲ. ಈ ಹೊಸ ಅವತಾರ ಗ್ರಾಹಕರ ನಿರೀಕ್ಷೆಯನ್ನು ಮುಟ್ಟಲಿದೆ ಎಂಬುದು ಸಂಸ್ಥೆಯ ನಂಬಿಕೆಯ ಮಾತು.

ನ್ಯಾನೋ ಆಯ್ತು; ಟಾಟಾ ವರ್ಚಸ್ಸು ಹೆಚ್ಚಿಸಿತೇ ನ್ಯಾನೋ ಪ್ಲಸ್?

ಪ್ರಸ್ತುತ ದೇಶದ ಅತಿ ಅಗ್ಗದ ಕಾರೆನಿಸಿಕೊಂಡಿರುವ ಟಾಟಾ ನ್ಯಾನೋ, ಸ್ಟಾಂಡರ್ಡ್, ಸಿಎಕ್ಸ್, ಎಲ್‌ಎಕ್ಸ್, ಸಿಎನ್‌ಜಿ ಸಿಎಕ್ಸ್ ಮತ್ತು ಸಿಎನ್‌ಜಿ ಎಲ್‌ಎಕ್ಸ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ ವೆರಿಯಂಟ್ 0.6 ಲೀಟರ್ ಎಂಪಿಎಫ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 37.4 ಬಿಎಚ್‌ಪಿ ಪವರ್ (51 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡಿದಿದೆ.

More from DriveSpark

Article Published On: Thursday, January 2, 2014, 6:02 [IST]
English summary
It is now being said that besides Nano Diesel, Tata Nano Plus, a new variant is also launch soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+