ಮೋಡಿ ಮಾಡಲಿದೆಯೇ ಟಾಟಾ ಇಂಡಿಕಾ ವಿಸ್ಟಾ?
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಅತಿ ನೂತನ ಟಾಟಾ ಇಂಡಿಕಾ ವಿಸ್ಟಾ ಡಿ90 (Tata Indica Vista D90) ಕಾರನ್ನು ಲಾಂಚ್ ಮಾಡಿದೆ.
ಟಾಟಾದ ಪೈಕಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಚ್‌ಬ್ಯಾಕ್ ಕಾರು ಇದಾಗಿದ್ದು, ನೋಯ್ಡಾದಲ್ಲಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅನಾವರಣಗೊಳಿಸಲಾಗಿತ್ತು.
ದರ ಮಾಹಿತಿ: 5.99 ಲಕ್ಷ ರು.
2011ರಲ್ಲಿ ಟಾಟಾ ವಿಸ್ಟಾ ಆವೃತ್ತಿಯನ್ನು ಪರಿಷ್ಕೃತಗೊಳಿಸಲಾಗಿತ್ತು. ಇದೀಗ ನೂತನ ವಿಸ್ಟಾ ಸೆಡಾನ್ ಕ್ಲಾಸ್ ಕಾರನ್ನು ಟಾಟಾ ಹೆಮ್ಮೆಯಿಂದ ಮಾರುಕಟ್ಟೆಗೆ ಪರಿಚಯಿಸಿದೆ.
ವಿಸ್ಟಾದ ಡಿ90 ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಸಾಮಾನ್ಯ ಆವೃತ್ತಿಯಲ್ಲಿರುವ 1.3 ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಉಳಿಸಿಕೊಳ್ಳಲಾಗಿದೆ. ಆದರೆ ತಂತ್ರಗಾರಿಕೆಯಲ್ಲಿ ಏಕಮಾತ್ರ ಬದಲಾವಣೆ ಮಾತ್ರ ತರಲಾಗಿದ್ದು, ಇದರ ವೆರಿಯಬಲ್ ಜಿಯೋಮೆಟ್ರಿ ಟರ್ಬೊಚಾರ್ಜರ್ (ವಿಜಿಟಿ) ಎಂಜಿನ್ 90 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಈ ಮೂಲಕ ಪ್ರಸ್ತುತ ಇರುವ ಟಾಟಾ ಹ್ಯಾಚ್‌ಬ್ಯಾಕ್ ಸಗ್ಮೆಂಟ್‌ಗಳ ಪೈಕಿ ಪವರ್‌ಫುಲ್ ಎನಿಸಿಕೊಂಡಿದೆ.
ನೂತನ ಫ್ರಂಟ್ ಹಾಗೂ ರಿಯರ್ ಬಂಪರ್, ಡ್ಯುಯಲ್ ಟೋನ್ ಅಲಾಯ್ ವೀಲ್, ರೂಫ್ ಮೌಂಟೆಡ್ ಸ್ಪಾಯ್ಲರ್ ಹಾಗೂ ರೂಫ್ ಆಕರ್ಷಣೆಗೆ ಕಾರಣವಾಗಿದೆ. ಒಟ್ಟು ಐದು ಕಲರ್ ವೆರಿಯಂಟ್‌ಗಳಲ್ಲಿ ಆಗಮನವಾಗಿದೆ.
ನೂತನ ವಿಸ್ಟಾ ಡಿ90 ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ವಿಎಕ್ಸ್ ವೆರಿಯಂಟ್ ಹಾಗೂ ಟಾಪ್ ಆಂಡ್ ಝಡ್‌ಎಕ್ಸ್+ ವೆರಿಯಂಟ್ ಅನುಕ್ರಮವಾಗಿ 5.99 ಹಾಗೂ 6.83 ಲಕ್ಷ ರು.ಗಳಿಗೆ ಲಭ್ಯವಾಗಲಿದೆ.

ತಂತ್ರಜ್ಞಾನ ವೈಶಿಷ್ಟ್ಯ
1.3 ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಜತೆ ವೆರಿಯಬಲ್ ಜಿಯೋಮೆಟ್ರಿ ಟರ್ಬೋಚಾರ್ಜ್ಡ್ (ವಿಜಿಟಿ) ತಂತ್ರಜ್ಞಾನ
ಟಚ್‌ಸ್ಕ್ರೀನ್ ಮಲ್ಟಿಮೀಡಿಯಾ ಸಿಸ್ಟಂ, ಜಿಪಿಎಸ್ ನೇವಿಗೇಷನ್
ಬ್ಲ್ಯು5 ತಂತ್ರಜ್ಞಾನ- ಬ್ಲ್ಯುಟೂತ್ ಕನೆಕ್ಟಿವಿಟಿ ಮೂಲಕ 5 ಫೋನ್ ವರೆಗೆ ಜೋಡಿಸಬಹುದು.
ಸಂಪೂರ್ಣ ಸ್ವಯಂಚಾಲಿತ ಕ್ಲೈಮೆಟ್ ಕಂಟ್ರೋಲ್

ತಂತ್ರಜ್ಞಾನ ವೈಶಿಷ್ಟ್ಯ
ಸುಧಾರಿತ ಚಾಲಕ ಮಾಹಿತಿ ಸಿಸ್ಟಂ
ನೆಕ್ಸ್ಟ್ ಜನರೇಷನ್ ಇನ್ಟ್ರುಮೆಂಟ್ ಕ್ಲಸ್ಟರ್
ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
ಎಲೆಕ್ಟ್ರಿಕ್ ಒಆರ್‌ವಿಎಂ
ರಿಯರ್ ಚಾರ್ಜಿಂಗ್ ಪಾಯಿಂಟ್
ಇಂಟೆಲಿಜೆಂಟ್ ರಿಯರ್ ವೈಪರ್

ಮೈಲೇಜ್: 21.2 kmpl
ವೇಗವರ್ಧನೆ: 0-100 (kmph) - 15.5 ಸೆಕೆಂಡು
ಗರಿಷ್ಠ ವೇಗತೆ: 158 kmph

ಕಲರ್ ವೆರಿಯಂಟ್
Ultra Violet (new),
Porcelain White,
Spice Red,
Cavern Grey,
Jet Silver
ಸುರಕ್ಷತೆ
ಹೊಸ ಟಾಟಾ ಇಂಡಿಕಾ ವಿಸ್ಟಾ ಡಿ90 ಸುಧಾರಿತ ಹಾಗೂ ಡೈನಾಮಿಕ್ ಕಾರಿನಲ್ಲಿ ಸುರಕ್ಷತೆ ಖಾತ್ರಿಪಡಿಸುವ ಎಬಿಎಸ್, ಇಬಿಡಿ ಹಾಗೂ ಡ್ಯುಯಲ್ ಎಸ್‌ಆರ್‌ಎಸ್ ಏರ್‌ಬ್ಯಾಗ್ ಸೌಲಭ್ಯವಿದೆ. ಹಾಗೆಯೇ ಎರಡು ವರ್ಷ ಅಥವಾ 75000 ಕೀ.ಮೀ. ತನಕದ ವಾರಂಟಿ ಸೌಲಭ್ಯವಿದೆ.


Click it and Unblock the Notifications








