ಮಿಸ್ ಮಾಡದಿರಿ ಟಾಟಾ ಮೋಟಾರ್ಸ್ 'ಮೇ ಆಫರ್'

Written By:

ದೇಶದ ಅತ್ಯಂತ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಆವೃತ್ತಿಗಳಿಗೆ ವಿಶೇಷ 'ಮೇ ಆಫರ್' ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಗ್ರಾಹಕರು ಗರಿಷ್ಠ ಸೌಲಭ್ಯ ಗಿಟ್ಟಿಸಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

ಮಾರುಕಟ್ಟೆಯಲ್ಲಿ ಕುಸಿದಿರುವ ಮಾರಾಟಕ್ಕೆ ಉತ್ತೇಜನ ನೀಡುವಲ್ಲಿ ಮುಂದಾಗಿರುವ ಟಾಟಾ, ತನ್ನ ಜನಪ್ರಿಯ ಆವೃತ್ತಿಗಳಾದ ಟಾಟಾ ಸಫಾರಿ, ವಿಸ್ಟಾ, ನ್ಯಾನೋ, ಇಂಡಿಗೋ ಹಾಗೂ ಸುಮೋ ಆವೃತ್ತಿಗಳಿಗೆ ವಿಶೇಷ ಆಫರುಗಳನ್ನು ಮುಂದುವರಿಸಿದೆ. ಇದರಲ್ಲಿ ಮೂರು ವರ್ಷಗಳ ವರೆಗಿನ ಉಚಿತ ವಿಮೆ, ಎಕ್ಸ್‌ಚೇಂಜ್ ಆಫರ್ ಹಾಗೂ ನಗದು ಆಫರುಗಳು ಸೇರಿವೆ.

ಟಾಟಾ ಸಫಾರಿ ಡಿಕೊರ್ ಎಲ್‌ಎಕ್ಸ್

ಟಾಟಾ ಸಫಾರಿ ಡಿಕೊರ್ ಎಲ್‌ಎಕ್ಸ್

ಸಂಸ್ಥೆಯ ಪ್ರಕಾರ ಟಾಟಾ ಸಫಾರಿ ಡಿಕೊರ್ ಎಲ್‌ಎಕ್ಸ್ ವೆರಿಯಂಟ್ ಖರೀದಿಸುವ ವೇಳೆ ರು. 90,000 ವರೆಗೂ ಉಳಿತಾಯ ಮಾಡಬಹುದಾಗಿದೆ.

ಟಾಟಾ ವಿಸ್ಟಾ ಟೆಕ್

ಟಾಟಾ ವಿಸ್ಟಾ ಟೆಕ್

ಅದೇ ರೀತಿ ಟಾಟಾ ವಿಸ್ಟಾ ಟೆಕ್ ಖರೀದಿ ವೇಳೆ ರು. 80,000 ವರೆಗೂ ಉಳಿತಾಯ ಮಾಡಬಹುದಾಗಿದೆ.

ಟಾಟಾ ನ್ಯಾನೋ

ಟಾಟಾ ನ್ಯಾನೋ

ಜಗತ್ತಿನ ಅತಿ ಅಗ್ಗದ ನ್ಯಾನೋ ಖರೀದಿಯಲ್ಲಿ ರು. 55,000 ವರೆಗೂ ಉಳಿತಾಯ ಮಾಡಬಹುದು ಎಂಬುದಾಗಿ ಸಂಸ್ಥೆಯು ಸೂಚಿಸುತ್ತದೆ.

ಟಾಟಾ ಇಂಡಿಗೊ ಇಸಿಎಸ್

ಟಾಟಾ ಇಂಡಿಗೊ ಇಸಿಎಸ್

ಹಾಗೆಯೇ ಟಾಟಾ ಇಂಡಿಗೊ ಇಸಿಎಸ್ ಖರೀದಿಯಲ್ಲಿ ರು. 58,000 ವರೆಗೂ ಪ್ರಯೋಜನ ಪಡೆಯಬಹುದಾಗಿದೆ.

ಟಾಟಾ ಸುಮೋ

ಟಾಟಾ ಸುಮೋ

ಅಂತಿಮವಾಗಿ ಟಾಟಾ ಸುಮೋ ಖರೀದಿ ವೇಳೆ ಗ್ರಾಹಕರು ಗರಿಷ್ಠ ರು. 72,000 ವರೆಗೆ ಲಾಭ ಪಡೆಯಬಹುದಾಗಿದೆ.

ಪವರ್ ಪ್ಲೇ ಆಫರ್

ಪವರ್ ಪ್ಲೇ ಆಫರ್

ಇದೇ ಸಂದರ್ಭದಲ್ಲಿ 'ಪವರ್ ಪ್ಲೇ ಆಫರ್' ಎಂಬ ವಿಶೇಷ ಸ್ಕೀಮ್ ಸಂಸ್ಥೆ ಆರಂಭಿಸಿದ್ದು, ವಿಜೇತರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಸದಸ್ಯರನ್ನು ಭೇಟಿಯಾಗುವ ಸುವರ್ಣಾವಕಾಶ ಲಭ್ಯವಾಗಲಿದೆ. ಆದರೆ ಈ ಸ್ಪರ್ಧೆಯು ತಮಿಳುನಾಡಿನವರಿಗೆ ಅನ್ವಯವಾಗುವುದಿಲ್ಲ.

English summary
The scheme will be applicable on only five Tata models: Safari, Vista Tech, Nano, Indigo and Sumo
Story first published: Monday, May 26, 2014, 14:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark