ನ್ಯಾನೋ 'ಅತ್ಯಂತ ವಿಶ್ವಾಸಾರ್ಹ ಬ್ರಾಂಡ್'; ನಂಬ್ತೀರಾ?
'ನಂಬಿದ್ರೆ ನಂಬಿ ಇಲ್ಲಂದ್ರೆ ಬಿಟ್ಟುಬಿಡಿ'...ಹೌದು 'ಅತ್ಯಂತ ವಿಶ್ವಾಸಾರ್ಹ ಕಾರು ಬ್ರಾಂಡ್' ಎಂಬ ಗೌರವಕ್ಕೆ ವಿಶ್ವದ ಅತಿ ಅಗ್ಗದ ಕಾರು ನ್ಯಾನೋ ಪಾತ್ರವಾಗಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ
2013 ಬ್ಯಾಂಡ್ ಟ್ರಸ್ಟ್ ರಿಪೋರ್ಟ್ ಸ್ಟಡಿಯಲ್ಲಿ ಅತ್ಯಂತ ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಕಾರೆಂಬ ಖ್ಯಾತಿಗೆ ನ್ಯಾನೋ ಪಾತ್ರವಾಗಿದೆ. ಒಟ್ಟು 19,000 ಯೂನಿಕ್ ಬ್ರಾಂಡ್‌ಗಳಲ್ಲಿ 211 ವಿಭಾಗಗಳಿಂದಾಗಿ 1,100 ವಿಶ್ವಾಸಾರ್ಹ ಕಾರುಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅತಿ ಶೀಘ್ರದಲ್ಲಿ ಉತ್ಪನ್ನ ವರ್ಷನ್ ಪಡೆಯುವ ನ್ಯಾನೋ ಯುವ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ ವಿಶ್ವಾಸಾರ್ಹ ಕಾರು ಮಾತ್ರವಲ್ಲ. ಹ್ಯಾಚ್‌ಬ್ಯಾಕ್‌ನಲ್ಲಿ 'ಅತ್ಯಂತ ಆಕರ್ಷಕ ಬ್ರಾಂಡ್' ಎಂಬ ಹಿರಿಮೆಗೂ ನ್ಯಾನೋ ಪಾತ್ರವಾಗಿದೆ ಎಂದು ವರದಿ ತಿಳಿಸುತ್ತದೆ.

ಇದು ನ್ಯಾನೋ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದವರಿಗೆ ತಕ್ಕ ಉತ್ತರ ನೀಡಿದಂತಾಗಿದೆ. ಅಲ್ಲದೆ ದೇಶದಲ್ಲಿ ನ್ಯಾನೋ ಬ್ರಾಂಡನ್ನು ಇನ್ನಷ್ಟು ಬಲಪಡಿಸುವಂತಾಗಿದೆ.

ಭಾರತದ ನಗರಗಳಲ್ಲಿ ನಡೆಸಲಾಗಿರುವ ಅಧ್ಯಯನದ ಬಳಿಕ ವಿಶ್ವಾಸಾರ್ಹ ಬ್ರಾಂಡ್‌ಗಳನ್ನು ಆರಿಸಲಾಗಿದೆ.

ಟ್ರಸ್ಟ್ ರಿಸರ್ಚ್ ಅಡೈಸರಿ (ಟಿಆರ್‌ಎ) ಬಿಡುಗಡೆಗೊಳಿಸಿದ ಇಂಡಿಯಾ ಸ್ಟಡಿ 2013ರಲ್ಲಿ ಇದು ದಾಖಲಾಗಿದೆ. ಇದು ದೇಶದ ವಾಹನೋದ್ಯಮದ ಮುಂಚೂಣಿಯ ಅಧ್ಯಯನ ಸಂಸ್ಥೆಯಾಗಿದೆ.

ಇನ್ನೊಂದೆಡೆ ಯಾವ ಮಾನದಂಡಗಳಲ್ಲಿ ನ್ಯಾನೋಗೆ ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಕಾರೆಂಬ ಪಟ್ಟ ನೀಡಲಾಗಿದೆ ಎಂಬುದು ಟೀಕಾಗಾರರಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ...


Click it and Unblock the Notifications








