ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಮಾರಾಟವನ್ನು ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಕಾರು ತಯಾರಕ ಸಂಸ್ಥೆಗಳು ನಾನಾ ರೀತಿಯ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿರುವುದು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿ. ಈ ಮೂಲಕ ತಮ್ಮ ಬ್ರೌಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸುತ್ತವೆ.

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಇದರಿಂದ ಹೊರತಾಗಿಲ್ಲ. ಆದರೆ ಟಾಟಾ ಅನುಸರಿಸುತ್ತಿರುವ ಕೆಲವೊಂದು ಆಕ್ರಮಣಕಾರಿ ನೀತಿಗಳು ತನ್ನದೇ ಬ್ರಾಂಡ್ ಮೌಲ್ಯಕ್ಕೆ ಧಕ್ಕೆ ನೀಡುತ್ತಿದೆಯೇ ಎಂಬುದು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.

ತಮ್ಮ ಮಾಡೆಲ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇತರ ಸ್ಪರ್ಧಿಗಳೊಂದಿಗೆ ಹೋಲಿಸುತ್ತಿರುವುದು ಸಹಜ ಪ್ರವೃತ್ತಿ. ಆದರೆ ಇಲ್ಲಿ ಪ್ರತಿಸ್ಪರ್ಧಿಗಳ ಸಂಪೂರ್ಣ ಮಾಹಿತಿ ನೀಡುವ ಮೂಲಕ ಟಾಟಾ ತನ್ನ ವರ್ಚಸ್ಸನ್ನೇ ಕುಗ್ಗಿಸಿಕೊಳ್ಳುತ್ತಿದೆ. ಸಂಪೂರ್ಣ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಚಿತ್ರದಲ್ಲಿ ತೋರಿಸಿರುವಂತೆಯೇ ದೇಶದ ಜನಪ್ರಿಯ ಬ್ರಾಂಡ್‌ಗಳಾದ ಮಾರುತಿ ಅಲ್ಟೊ 800 ಹಾಗೂ ಹ್ಯುಂಡೈ ಇಯಾನ್ ಡಿಲೈಟ್ ಜತೆ ಟಾಟಾ ನ್ಯಾನೋ ಕಾರು ಹೋಲಿಸಲಾಗಿದೆ. ಹಾಗೆಯೇ ಎಕ್ಸ್‌ ಶೋ ರೂಂ ದರ, ಎಂಜಿನ್ ಹಾಗೂ ನಿರ್ವಹಣೆ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಇಲ್ಲಿ ಎಂಜಿನ್‌ನಿಂದ ಆರಂಭಿಸಿ, ಟ್ರಾನ್ಸ್‌ಮಿಷನ್, ಬೂಟ್ ಸ್ಪೇಸ್, ಸ್ಟೀರಿಂಗ್ ಹಾಗೂ ಇಂಧನ ವಿಧ ಸೇರಿದಂತೆ ಮೈಲೇಜ್ ಬಗ್ಗೆಯೂ ಸಂಪೂರ್ಣ ವಿವರ ಕೊಡಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಹಾಗೆಯೇ ಕಲರ್ ವೆರಿಯಂಟ್ ಬಗ್ಗೆಯೂ ವಿವರಿಸುವ ಮೂಲಕ ಇತರ ಕಾರುಗಳಿಗೆ ನ್ಯಾನೋ ಎಷ್ಟು ವಿಭಿನ್ನವಾಗಿದೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಟಾಟಾ ನ್ಯಾನೋ ವಿವಿಧ ವೆರಿಯಂಟ್‌ಗಳಾದ ಎಸ್‌ಟಿಡಿ, ನ್ಯಾನೋ ಸಿಎಕ್ಸ್ ಮತ್ತು ನ್ಯಾನೋ ಎಲ್‌ಎಕ್ಸ್ ಮಾದರಿಗಳ ಬೆಲೆ ಬಗ್ಗೆಯೂ ವಿವರಣೆ ಕೊಡಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ನ್ಯಾನೋಗೆ ಸದ್ಯ ಲಭ್ಯವಿರುವ ಆಫರುಗಳ ಬಗ್ಗೆಯೂ ವಿವರಿಸಲಾಗಿದೆ. ನ್ಯಾನೋ ಖರೀದಿ ವೇಳೆ 35,000 ರು. ವರೆಗೆ ನಗದು ಉಳಿತಾಯ, 10,000 ರು. ವರೆಗೆ ಎಕ್ಸ್ ಚೇಂಜ್ ಬೋನಸ್ ಹೀಗೆ ಒಟ್ಟು ರು. 45,000ಗಳಷ್ಟು ವರೆಗೆ ಉಳಿತಾಯ ಮಾಡುವ ಅವಕಾಶವಿದೆ. ಇಲ್ಲಿ ಗ್ರಾಹಕರು ಇಎಂಐ ಮಾಸಿಕ ಕಂತುಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಆದರೆ ಇಲ್ಲಿ ಗಮನನಿಸಬೇಕಾದ ಅಂಶವೆಂದರೆ ಇತರ ಕಾರುಗಳಿಂದ ನ್ಯಾನೋ ಹೇಗೆ ಭಿನ್ನವಾಗಿದೆ ಎಂಬುದನ್ನು ಹೋಲಿಸುವ ತವಕದಲ್ಲಿ ಆಲ್ಟೊ ಕಾರನ್ನು ಅಟ್ಟಕ್ಕೇರಿಸಲಾಗಿದೆ. ಚಿತ್ರದಲ್ಲಿ ತೋರಿಸಿರುವಂತೆಯೇ 1983ರಲ್ಲಿ ಲಾಂಚ್ ಆಗಿದ್ದ ಮಾರುತಿ 800, 2006ರಲ್ಲಿ ಮಾರುತಿ ಆಲ್ಟೊ ಎಂದು ಗುರುತಿಸಿಕೊಂಡಿತ್ತು. ಆಲ್ಟೊ ಕಾರನ್ನು ಐಕಾನಿಕ್ ಎಂದು ಬೊಟ್ಟು ಮಾಡಿರುವ ಟಾಟಾ, ಈಗಾಗಲೇ 2.5 ದಶಲಕ್ಷಗಳಷ್ಟು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಮನೆ ಮಾತಗಿರುವ ಆಲ್ಟೊ, ಕಡಿಮೆ ದರ, ವಿಶ್ವಾಸಾರ್ಹತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚಕ್ಕಾಗಿ ಹೆಚ್ಚಿನ ಜನಪ್ರಿಯತೆಗೊಂಡಿದ್ದು, ಬಹುತೇಕ ಕುಟುಂಬಗಳು ತಮ್ಮ ಮೊದಲ ಕಾರಾಗಿ ಆಲ್ಟೊ ಖರೀದಿಸಲು ಬಯಸುವುದಾಗಿ ತಿಳಿಸಲಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಅದೇ ರೀತಿ ಎ2 ಸೆಗ್ಮೆಂಟ್‌ನಲ್ಲಿ ಅಧ್ಬುತವೆನಿಸಿರುವ ಹ್ಯುಂಡೈ ಇಯಾನ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದಾಗಿ ಉಲ್ಲೇಖಿಸಲಾಗಿದೆ. ಈ ಎಲ್ಲ ವಿಚಾರಗಳು ನ್ಯಾನೋಗೆ ಮುಳುವಾಗಿ ಪರಿಣಿಸಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಒಟ್ಟಿನಲ್ಲಿ ವಿಶ್ವದ ಅತಿ ಅಗ್ಗದ ಕಾರನ್ನು ಆಲ್ಟೊ ಹಾಗೂ ಇಯಾನ್ ಜತೆ ಹೋಲಿಸಲು ಮುಂದಾಗಿರುವ ಟಾಟಾ, ತನ್ನ ಹೊಂಡವನ್ನು ತಾನೇ ತೋಡಿದಂತಾಗಿದೆ.

ನ್ಯಾನೋಗೆ ಮುಳವಾಯಿತೇ ಟಾಟಾ ಹೊಸ ಗಿಮಿಕ್?

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Friday, September 20, 2013, 10:25 [IST]
English summary
Tata Motors is so confident about the features of the Nano car that it has directly taken on market leader Maruti Suzuki through an internet ad campaign and a specially created website that compares the Nano with Maruti alto 800 and Hyundai Eon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+