10 ಅತ್ಯುತ್ತಮ ಕಾರು ಇಂಟಿರಿಯರ್‌ಗಳು; ನಿಮ್ಮ ಆಯ್ಕೆ ಯಾವುದು?
ವಾಹನೋದ್ಯಮದಲ್ಲಿ ಕಾರ ತಯಾರಕರ ಸಂಸ್ಥೆಗಳ ವಿಶೇಷ ಸಾಧನೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಒಂದು ಕಾರಿನ ದೃಷ್ಟಿಕೋನದಲ್ಲಿ ಅದು ಹೊರಗಿನಿಂದ ಎಷ್ಟು ಸುಂದರವಾಗಿ ಗೋಚರಿಸುತ್ತದೆಯೇ ಅಷ್ಟೇ ಅಂದವಾದ ಒಳಮೈ ಪಡೆದುಕೊಳ್ಳುವುದು ಸಹ ಅತಿ ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಬಹುತೇಕ ಎಲ್ಲ ವಾಹನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಇಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಪಯಣದ ಜತೆಗೆ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇವೆಲ್ಲದರ ಜತೆಗೆ ಐಷಾರಾಮಿ ಸೌಲಭ್ಯಗಳು ಸೇರಿದಾಗ ನಿಮ್ಮ ಪಯಣವು ಇನ್ನಷ್ಟು ಆರಾಮದಾಯಕವಾಗುತ್ತದೆ. ಅಮೆರಿಕದಲ್ಲಿ 41 ಕಾರುಗಳನ್ನು ತುಲನೆ ಮಾಡಿರುವ ವಾರ್ಡ್ಸ್‌ಆಟೋ (WardsAuto), 2014ನೇ ಸಾಲಿನ 10 ಅತ್ಯುತ್ತಮ ಒಳಮೈ ಹೊಂದಿರುವ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಚಾಲಕ ಮಾಹಿತಿ, ದೇಹರಚನೆ, ಫಿಟ್ ಆಂಡ್ ಫಿನಿಶ್, ಬಿಡಿಭಾಗ, ಮೌಲ್ಯ, ಸುರಕ್ಷತೆ, ಆರಾಮ ಹಾಗೂ ವಿನ್ಯಾಸ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಲ್ಲಿ ಕಾರಿನ ಬೆಲೆ ಎಷ್ಟು ಎಂಬುದು ಮುಖ್ಯವಲ್ಲ. ಸದ್ಯ ವಿಜೇತ ಕಾರುಗಳ ಪ್ರಶಸ್ತಿ ವಿತರಣೆ ಸಮಾರಂಭವು ಮೇ 21ರಂದು ನಡೆಯಲಿದೆ.

2014 ಷೆವರ್ಲೆ ಕೊರ್ವೆಟ್ ಸ್ಟ್ರೀಂಗ್ರೇ ($71,960)
ವಿಶೇಷತೆ: ಕಸ್ಟಮೈಸ್ಡ್ ಮಾಡಬಹುದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾರ್ಬನ್ ಫೈಬರ್ ಟ್ರಿಮ್, ಸೀಟುಗಳಿಗೆ ವ್ಯತಿರಿಕ್ತ ಬಿಳಿ ಹೋಳಿಗೆ, ವೈಕ್ರೊಫೈಬರ್ ಹೆಡ್‌ಲೈನರ್.

2015 ಕ್ಲೈಸ್ಲರ್ 200ಸಿ
ಆಂಬಿಯಂಟ್ ಲೈಟಿಂಗ್, ಲೆಥರ್ ಸೀಟುಗಳಿಗೆ ವ್ಯತಿರಿಕ್ತ ಪೈಪಿಂಗ್, ಆಕರ್ಷಕ ಬಿಳಿ ಮೆರಗು, ಸೆಂಟ್ರಲ್ ಕನ್ಸೋಲ್, ಕಪ್ ಹೋಲ್ಡರ್, ಹೆಚ್ಚು ಸ್ಥಳಾವಕಾಶ ಹೊಂದಿರುವ ಕ್ಯಾಬಿನ್, ಸೆಲ್ಫ್ ಪಾರ್ಕಿಂಗ್ ತಂತ್ರಜ್ಞಾನ

2014 ಜಿಎಂಸಿ ಸಿಯೆರಾ ಡೆನಾಲಿ ($56,685)
ಅತ್ಯುತ್ತಮ ನಿರ್ಮಾಣ ಗುಣಮಟ್ಟ, ಅರ್ಬನ್ ಫ್ಲೇರ್, ಮೆಟ್ಯಾಲಿಕ್ ಟ್ರಿಮ್, ಎಲೆಕ್ಟ್ರಿಕ್ ಸಾಕೆಟ್, ಯುಎಸ್‌ಬಿ ಪ್ಲಗ್, ಸೆಂಟರ್ ಕನ್ಸೋಲ್, ಹೀಟಡ್ ಆಂಡ್ ಕೂಲ್ಡ್ ಫ್ರಂಟ್ ಸೀಟ್, ಹೀಟಡ್ ಸ್ಟೀರಿಂಗ್ ವೀಲ್

2014 ಹ್ಯುಂಡೈ ಈಕ್ವಸ್ ಅಲ್ಟಿಮೇಟ್ ($68,920)
ಸೂಪರ್ಬ್ ಬಿಲ್ಡ್ ಗುಣಮಟ್ಟ, ಲಿಮೊಸಿನ್ ತರಹಲ ಐಷಾರಾಮಿ ಸೌಲಭ್ಯ, ಕಡಿಮೆ ದರದಲ್ಲಿ ಉತ್ತಮ ಸ್ಥಳಾವಕಾಶ

ಜೀಪ್ ಕೆರೊಕಿ ಲಿಮಿಟೆಡ್ ($37,525)
ನಗರ ಹಾಗೂ ಆಫ್ ರೋಡ್ ಡ್ರೈವಿಂಗ್‌ಗೆ ಹೊಂದಿಕೆಯಾಗುವ ಕ್ಯಾಬಿನ್, ನಿಯಂತ್ರಣ, ಮಲ್ಟಿ ಪರ್ಪಸ್ ಸೆಂಟ್ರಲ್ ಡಿಸ್‌ಪ್ಲೇ ಟಚ್‌ಸ್ಕ್ರೀನ್

2014 ಕಿಯಾ ಸೋಲ್ ಪ್ಲಸ್ ($24,010)
ಸೌಂದರ್ಯ, ಪ್ರೀಮಿಯಂ ಸೌಲಭ್ಯ, 8 ಇಂಚಿನ ನೇವಿಗೇಷನ್ ಸ್ಕ್ರೀನ್, ಬ್ಯಾಕಪ್ ಕ್ಯಾಮೆರಾ, ಪ್ಯಾನರಾಮಿಕ್ ರೂಫ್, ಆಡಿಯೋ ಸಿಸ್ಟಂ

2014 ಮಾಜ್ದಾ3 ($30,415)
ಆಡಿ ರೀತಿಯ ಸಂಟ್ರಲ್ ಕಂಟ್ರೋಲ್, ಸೇಫ್ಟಿ ಫೀಚರ್ಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ನಿರ್ಗಮನ ಎಚ್ಚರಿಕೆ, ಕಾರ್ಬನ್ ಫೈಬರ್ ಟ್ರಿಮ್

2014 ಮರ್ಸಿಡಿಸ್ ಬೆಂಝ್ ಎಸ್550 ($122,895)
ಸೆವೆನ್ ಕಲರ್ ಆಂಬಿಯಂಟ್ ಲೈಟ್, ಹಾಟ್ ಸ್ಟೋನ್ ಮೆಸೇಜ್ ಟ್ರೀಟ್ಮೆಂಟ್, ರಿಯರ್ ಸೀಟ್, ಲೆಥರ್, ಹೆಚ್ಚುವರಿ ಸುರಕ್ಷತೆ

2014 ರೋಲ್ಸ್ ರಾಯ್ಸ್ ವ್ರೈತ್ ($372,800)
ಐಷಾರಾಮಿ ಸೌಲಭ್ಯ, ಎಲ್‌ಇಡಿ

2015 ಫೋಕ್ಸ್‌ವ್ಯಾಗನ್ ಜಿಟಿಐ ($30,695)
ಸ್ಪೋರ್ಟಿ, ದಕ್ಷ ಇಂಟಿರಿಯರ್, ದರಕ್ಕೆ ತಕ್ಕ ಮೌಲ್ಯ


Click it and Unblock the Notifications








