ಜಗತ್ತಿನ ಅತ್ಯಂತ ಕೆಟ್ಟ 10 ಕಾರುಗಳು
ಕೆಲವು ದಿನಗಳ ಹಿಂದೆಯಷ್ಟೇ ಬ್ರಿಟನ್‌ನ ಪ್ರಖ್ಯಾತ ವೆಬ್ ಸೈಟ್ ಆಟೋ ಎಕ್ಸ್‌ಪ್ರೆಸ್ ಬಿಡುಗಡೆ ಮಾಡಿರುವ ಕಳೆದ 25 ವರ್ಷಗಳಲ್ಲೇ ಅತ್ಯಂತ ಕೆಟ್ಟ ಕಾರುಗಳ ಪಟ್ಟಿಯಲ್ಲಿ ಟಾಟಾ ಇಂಡಿಕಾದ ತದ್ರೂಪ ಸಿಟಿ ರೋವರ್ ಸ್ಥಾನ ಪಡೆದಿರುವುದರ ಬಗ್ಗೆ ನಾವು ವರದಿ ಮಾಡಿದ್ದೆವು.
ಈ ಪಟ್ಟಿಯಲ್ಲಿ ಸೇರಿರುವ ಇತರ ಕಾರುಗಳ ಬಗ್ಗೆಯೂ ನಾವಿಂದು ವಿವರಣೆ ಕೊಡಲಿದ್ದೇವೆ. ಟಾಟಾ ಇಂಡಿಕಾ ಬ್ರಿಟನ್ ಬ್ಯಾಡ್ಜ್ ಪಡೆದುಕೊಂಡಿರುವ ರೋವರ್ ಸಿಟಿ ರೋವರ್ ಅತ್ಯಂತ ಕೆಟ್ಟ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ನಿರೀಕ್ಷಿತವಾಗಿತ್ತು.
ಕಾರಿನ ವಿನ್ಯಾಸ, ಚಲನೆ, ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಸುರಕ್ಷತೆ ಆಧಾರದಲ್ಲಿ ಕಳೆದ 25 ವರ್ಷಗಳಲ್ಲಿ ಕೆಟ್ಟ ಮಾನದಂಡಗಳನ್ನು ಹೊಂದಿರುವ 10 ಕಾರುಗಳ ಪಟ್ಟಿಯನ್ನು ಆಟೋ ಎಕ್ಸ್‌ಪ್ರೆಸ್ ಬಿಡುಗಡೆ ಮಾಡಿದೆ.

ಸಿಟಿ ರೋವರ್ (2003)
ಗುಣಮಟ್ಟದ ಕೊರತೆ ಹಾಗೂ ಕಳಪೆ ಮಟ್ಟದ ಹ್ಯಾಂಡ್ಲಿಂಗ್‌ನಿಂದಾಗಿ ಸಿಟಿ ರೋವರ್ ಬ್ರಿಟನ್ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು. ನಿಮ್ಮ ಮಾಹಿತಿಗಾಗಿ ಟಾಟಾ ಇಂಡಿಕಾ ಮಾರಾಟ ಇದೀಗಲೂ ದೇಶದ ಮಾರುಕಟ್ಟೆಯಲ್ಲಿದೆ. ಆದರೆ ಸಿಟಿ ರೋವರ್ ಉತ್ಪಾದನೆಯನ್ನು 2005ರಲ್ಲೇ ಸ್ಥಗಿತಗೊಳಿಸಲಾಗಿತ್ತು.

ದೈಹಟ್ಸು ಮೂವ್ (1997)
1997ನೇ ಇಸವಿಯಲ್ಲಿ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಿದ್ದ ಜಪಾನ್ ಮೂಲದ ದೈಹಟ್ಸು ಅಗ್ಗದ ದರಗಳಲ್ಲಿ ಲಭ್ಯವಾಗಿದ್ದರೂ ಸರಿಯಾದ ವಿನ್ಯಾಸದ ಕೊರತೆಯಿಂದಾಗಿ ಹಿನ್ನಡೆ ಅನುಭವಿಸಿತ್ತು.

ಮಿಟ್ಸುಬಿಸಿ ಕರಿಶ್ಮಾ (1995)
ಮೋಜಿನ ಬ್ಯಾಡ್ಜ್ ಪಡೆದುಕೊಂಡಿದ್ದ ಮಿಟ್ಸುಬಿಸಿ ಕರಿಶ್ಮಾ ಯುರೋಪ್ ಕಾರು ಖರೀದಿಗಾರರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿತ್ತು. ಇದು ಪ್ರಾಯೋಗಿಕವಾಗಿ ಅನಿಸಿದರೂ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು.

ಸುಜುಕಿ ಎಕ್ಸ್-90 (1995)
1990ರ ದಶಕದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿದ್ದ ಸುಜುಕಿ, ಎಕ್ಸ್-90 ಮುಖಾಂತರ ಭಾರಿ ಹಿನ್ನಡೆಗೊಳಗಾಗಿತ್ತು. ಈ ಎರಡು ಸೀಟುಗಳ ಮಿನಿ ಎಸ್‌ಯುವಿ ಕಳಪೆ ಹ್ಯಾಂಡ್ಲಿಂಗ್, ಕಳಪೆ ಲುಕ್ ಹಾಗೂ ಆಫ್ ರೋಡ್‌ಗಳಿಗಷ್ಟೇ ಸೀಮಿತವಾಗಿರುವುದು ಎರಡು ವರ್ಷಗಳಲ್ಲೇ ಉತ್ಪಾದನೆ ಸ್ಥಗಿತಗೊಳಿಸಲು ಕಂಪನಿ ಪ್ರೇರಿತವಾಗಿತ್ತು.

ರೆನೊ ಅವನ್‌ಟೈಮ್ (2001)
ರೆನೊ ಅವನ್‌ಟೈಮ್ ಕೂಪೆ ಅಥವಾ ಎಂಪಿವಿ ಕಾರಿಗೆ ಈಗಲೂ ಅನೇಕ ಅಭಿಮಾನಿಗಳಿರಬಹುದು. ಜಗತ್ತಿನ ಅತಿ ಕೆಟ್ಟ ಕಾರುಗಳಲ್ಲಿ ಇದು ಕಾಣಿಸಿಕೊಂಡಿರುವುದು ತರ್ಕಕ್ಕೆ ಎಡೆಮಾಡಿಕೊಡಬಹುದು. ಆದರೆ ಇದರ ಕಳಪೆ ಮಾರಾಟವು ಐಷಾರಾಮಿ ಕಾರು ಖರೀದಿಗಾರರಲ್ಲಿ ಇದರ ನಿರಾಸಕ್ತಿಗೆ ಕಾರಣವಾಗಿದೆ.

ಸ್ಕೋಡಾ ಎಸ್ಟೆಲೆ (1988)
1988ರಲ್ಲಿ ಬಿಡುಗಡೆಗೊಂಡಿದ್ದ ಸ್ಕೋಡಾ ಎಸ್ಟೆಲೆ ಪ್ರಾಯೋಗಿಕವಾಗಿ ಗ್ರಾಹಕರ ಕಾರು ಅಭಿಲಾಷೆಗಳನ್ನು ಮುಟ್ಟುವಲ್ಲಿ ವಿಫಲವಾಗಿತ್ತು ಎಂಬುದು ಕೂಡಾ ಅಷ್ಟೇ ಸತ್ಯ.

ಲೆಕ್ಸಸ್, ಎಸ್‌ಸಿ 430 (2001)
ಕೆಲವೊಮ್ಮೆ ಶ್ರೇಷ್ಠ ಬ್ರಾಂಡ್‌ಗಳೇ ತಲೆಕೆಳಗಾದ ಫಲಿತಾಂಶ ನೀಡುತ್ತದೆ. 2001 ಲೆಕ್ಸಸ್, ಎಸ್‌ಸಿ 430 ಇದಕ್ಕೊಂದು ಉದಾಹರಣೆಯಾಗಿದೆ.

ನಿಸ್ಸಾನ್ ಸೆರೆನಾ (1992)
ನಿರ್ವಹಣೆಗಾಗಿ ಯಾರೂ ಕೂಡಾ ಎಂಪಿವಿ ಖರೀದಿಸಲಾರರು. ಆದರೆ ಕಡಿಮೆ ವೇಗವರ್ಧನೆ ಹೊಂದಿರುವ 2.3 ಡೀಸೆಲ್ ಕಾರನ್ನು ನಿರ್ಮಿಸಲು ನಿಸ್ಸಾನ್ ಮುಂದೆ ಬಂದಿತ್ತು. ಇದು 100 ಕೀ.ಮೀ. ದೂರವನ್ನು ಕ್ರಮಿಕರಿಸಲು 27.8 ಸೆಕೆಂಡುಗಳಷ್ಟು ಸಮಯ ತಗಲುತ್ತಿತ್ತು.

ಸಿಟ್ರೊಯನ್ ಸಿ3 ಪ್ಲೂರಿಯೆಲ್ (2003)
ಸಿಟ್ರೆಯನ್ ಹೊರಮೈ ವಿನ್ಯಾಸ ವಿಮರ್ಶಕರ ಅವಕೃಪೆಗೆ ಒಳಗಾಗಿತ್ತು. ಇದರ ಕ್ಯಾಬಿನ್ ಸ್ಪೇಸ್ ಸಹ ಅಷ್ಟೊಂದು ತೃಪ್ತಿಕರವಾಗಿರಲಿಲ್ಲ.

ಕ್ರೈಸ್ಲರ್ ಪಿಟಿ ಕ್ರೂಸರ್ ಕನ್ವರ್ಟಿಬಲ್ (2005)
2005ನೇ ಸಾಲಿನಲ್ಲಿ ಮಾರುಕಟ್ಟೆ ಆಗಮನಿಸಿದ್ದ ಕ್ರೈಸ್ಲರ್ ಅತೀವ ನಿರೀಕ್ಷೆಗೆ ಕಾರಣವಾಗಿದ್ದರೂ ಗುಣಮಟ್ಟದ ಕೊರತೆ ಹಾಗೂ ಚಾಲಕ ಸೀಟಿನ ಹೊಂದಾಣಿಕೆ ಕೊರತೆಯಿಂದಾಗಿ ಹಿನ್ನಡೆ ಅನುಭವಿಸಿತ್ತು.


Click it and Unblock the Notifications