ಭಾರತದಲ್ಲಿ ಲಾಂಚ್ ಆಗಬೇಕಾಗಿರುವ ಟಾಪ್ 5 ಕಾರುಗಳು

By Nagaraja

ಬೆಳೆದು ಬರುತ್ತಿರುವ ಭಾರತೀಯ ಕಾರು ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಣ್ಣ ಬಜೆಟ್ ಕಾರುಗಳು ಹೆಚ್ಚು ಸದ್ದು ಮಾಡುತ್ತಿರುವುದನ್ನು ನಾವು ನೋಡಬಹುದು. ಇದರತ್ತ ಕಾರ್ಯಮಗ್ನವಾಗಿರುವ ಜಗತ್ತಿನ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ಭಾರತದಲ್ಲಿ ಬಜೆಟ್ ಕಾರುಗಳನ್ನು ಬಿಡುಗಡೆ ಮಾಡಲು ಕಾರ್ಯಮಗ್ನವಾಗಿದೆ.

ಈ ರೀತಿ ಪಟ್ಟಿ ಮಾಡಿ ಸಾಗಿದರೆ ಜಾಗತಿಕವಾಗಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ ಹೊರತಾಗಿಯೂ ಭಾರತದಲ್ಲಿ ಬಿಡುಗಡೆಯಾಗದಿರುವ ಹಲವಾರು ಕಾರುಗಳು ಕಾಣಸಿಗುತ್ತವೆ. ಪ್ರಯೋಗಿಕವಾಗಿ ಕೆಳಗೆ ಸೂಚಿಸಲಾದ ಕೆಲವೊಂದು ಮಾಡೆಲ್‌ಗಳನ್ನು ದೇಶದಲ್ಲಿ ಲಾಂಚ್ ಮಾಡಿದರೆ ಖಂಡಿತ ಇದರಿಂದ ಆ ನಿರ್ದಿಷ್ಟ ಕಾರು ಕಂಪನಿಗಳಿಗೆ ಲಾಭವನ್ನುಂಟು ಮಾಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ದರ ಹೋಲಿಸಿದರೂ ಇದು ಅಷ್ಟೊಂದು ದುಬಾರಿ ಕಾರುಗಳೇನಲ್ಲ. ಭಾರತದಲ್ಲಿ ಬಿಡುಗಡೆಯಾಗಲೇ ಬೇಕಾಗಿರುವ 10 ಲಕ್ಷ ಬಜೆಟ್‌ನೊಳಗಿನ ಟಾಪ್ 5 ಕಾರುಗಳು ಹಾಗೂ ಅವುಗಳ ವೈಶಿಷ್ಟ್ಯಗಳನ್ನು ಸ್ಲೈಡರ್ ಮೂಲಕ ತಿಳಿದುಕೊಳ್ಳಿರಿ...

ಹೋಂಡಾ ಎನ್ 1

ಹೋಂಡಾ ಎನ್ 1

ಜಪಾನ್ ಮಾರುಕಟ್ಟೆಯಲ್ಲಿ ಈಗಾಗಲೇ ಭರ್ಜರಿ ಯಶಸ್ಸನ್ನು ಕಂಡಿರುವ ಹೋಂಡಾ ಎನ್-ಒನ್ ಮಿನಿ ಹ್ಯಾಚ್‌ಬ್ಯಾಕ್, ಭಾರತೀಯರು ಅತ್ಯಂತ ಕುತೂಹದಿಂದ ಎದುರು ನೋಡುತ್ತಿರುವ ಕಾರಾಗಿದೆ. ಯಾಕೆಂದರೆ ಇದು ಭಾರತೀಯ ಮಾರುಕಟ್ಟೆಗೆ ಹೇಳಿ ಮಾಡಿಸಿದಂತಿದೆ.

ವ್ಯಾಗನಾರ್ ಪ್ರತಿಸ್ಪರ್ಧಿ

ವ್ಯಾಗನಾರ್ ಪ್ರತಿಸ್ಪರ್ಧಿ

ಒಂದು ವೇಳೆ ಹೋಂಡಾ ಎನ್-ಒನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೆ, ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ವ್ಯಾಗನಾರ್‌ಗೆ ನೇರ ಪ್ರತಿಸ್ಪರ್ಧಿ ಎನಿಸಲಿದೆ. ಇದು 660 ಸಿಸಿ ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿರಲಿದ್ದು, ಪ್ರತಿ ಲೀಟರ್‌ಗೆ 27 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು 3.5ರಿಂದ 4.5 ಲಕ್ಷ ಅಸುಪಾಸಿನಲ್ಲಿ ಆಗಮನವಾಗಲಿರುವ ಸಾಧ್ಯತೆಯಿದೆ.

ಸ್ಕೋಡಾ ಸಿಟಿಗೊ

ಸ್ಕೋಡಾ ಸಿಟಿಗೊ

ಸಿಟಿಗೊ, ಫೋಕ್ಸ್‌ವ್ಯಾಗನ್ ಅಪ್ ಆವೃತ್ತಿಯ ಸ್ಕೋಡಾ ವರ್ಷನ್ ಆಗಿದೆ. ಇದು ಮೂರು ಹಾಗೂ ಐದು ಡೋರ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ದರ ಮಾಹಿತಿ

ದರ ಮಾಹಿತಿ

ಇದರಲ್ಲಿ 1. ಲೀಟರ್ ಪೆಟ್ರೋಲ್ ಹಾಗೂ 1.2 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಇನ್ನು ದರ 4ರಿಂದ 6 ಲಕ್ಷ ಅಸುಪಾಸಿನಲ್ಲಿರಲಿದೆ.

ಫಿಯೆಟ್ ಪಂಡಾ (Fiat Panda)

ಫಿಯೆಟ್ ಪಂಡಾ (Fiat Panda)

ಯುರೋಪ್ ಖಂಡದ ಯಶಸ್ಸಿನ ಮಾಡೆಲ್ ಫಿಯೆಟ್ ಪಂಡಾ ಭಾರತಕ್ಕೆ ಆಗಮಿಸಿದ್ದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹೆಚ್ಚಿನ ಬದಲಾವಣೆಗೆ ಕಾರಣವಾಗಲಿದೆ.

ಗರಿಷ್ಠ ಸ್ಥಳಾವಕಾಶ

ಗರಿಷ್ಠ ಸ್ಥಳಾವಕಾಶ

ಗರಿಷ್ಠ ಇಂಟಿರಿಯರ್ ಸ್ಥಳಾವಕಾಶ ಹೊಂದಿರುವ ಫಿಯೆಟ್ ಪಂಡಾದಲ್ಲಿ 6 ಎಂಜಿನ್ ಆಯ್ಕೆಗಳಿವೆ. ಈ ಪೈಕಿ ಇಂಡಿಯನ್ ಆವೃತ್ತಿಯಲ್ಲಿ 1 ಲೀಟರ್ ಹಾಗೂ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಗಳಿವೆ. ಅಂದರೆ ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಐ10 ಆವೃತ್ತಿಗಳಿಗೆ ನಿಕಟ ಸ್ಪರ್ಧೆ ಒಡ್ಡಲಿದೆ. ಇದರ ದರ 5.5ರಿಂದ 7 ಲಕ್ಷ ಅಸುಪಾಸಿನಲ್ಲಿರಲಿದೆ.

ಸುಜುಕಿ ಎಪಿವಿ

ಸುಜುಕಿ ಎಪಿವಿ

ದೇಶದಲ್ಲಿ ಈಗಾಗಲೇ ನೆಲೆಯೂರಿರುವ ಮಾರುತಿ ಸುಜುಕಿಗೆ, ಎಪಿವಿ ಮಲ್ಟಿ ಪರ್ಪಸ್ ವೆಹಿಕಲ್ ಬಿಡುಗಡೆ ಮಾಡುವುದರಿಂದ ದೊಡ್ಡ ಸಮಸ್ಯೆಯಾಗಲ್ಲ. ಮಿಗಿಲಾಗಿ ಮಹೀಂದ್ರ ಕ್ಸೈಲೋ ಹಾಗೂ ನಿಸ್ಸಾನ್ ಇವಾಲಿಯಾಗೆ ಪ್ರತಿಸ್ಪರ್ಧಿ ಸೃಷ್ಟಿಯಾಗಲಿದೆ.

ಏಳು ಸೀಟು

ಏಳು ಸೀಟು

ಏಳು ಸೀಟಿನ ಸುಜುಕಿ ಎಪಿವಿ, ಹೆಚ್ಚಿನ ಸ್ಥಳಾವಕಾಶ ಹೊಂದಿದ್ದು, ಎಸ್‌ಎಕ್ಸ್4 ನಲ್ಲಿರುವ 1.6 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದರ ದರ 7ರಿಂದ 9 ಲಕ್ಷ ಅಸುಪಾಸಿನಲ್ಲಿರಲಿದೆ.

ಮಿಟ್ಸುಬಿಸಿ ಮಿರಾಜ್

ಮಿಟ್ಸುಬಿಸಿ ಮಿರಾಜ್

ಥಾಯ್ಲೆಂಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿರುವ ಮಿಟ್ಸುಬಿಸಿ ಮಿರಾಜ್ ಸಹ ಭಾರತ ಮಾರುಕಟ್ಟೆಗೆ ಆಗಮಿಸಿದ್ದಲ್ಲಿ ಹೆಚ್ಚಿನ ಯಶ ಸಾಧಿಸಲು ನೆರವಾಗಲಿದೆ.

ಸ್ವಿಫ್ಟ್ ಪ್ರತಿಸ್ಪರ್ಧಿ

ಸ್ವಿಫ್ಟ್ ಪ್ರತಿಸ್ಪರ್ಧಿ

ಮಿಟ್ಸುಬಿಸಿ ಮಿರಾಜ್ ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಾರುತಿ ಸ್ವಿಫ್ಟ್‌ಗೆ ಪ್ರತಿಸ್ಪರ್ಧಿ ಆಗಿರಲಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ ದರವು 4.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

More from DriveSpark

Article Published On: Thursday, August 1, 2013, 11:17 [IST]
English summary
The Indian car market is slowly getting populated by more and more models, but there are still some models that are sold abroad that have not yet made it to India. We take a look at some practical cars for India that if launched here, will likely catch the fancy of buyers in the volume segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+