ನಿರ್ಮಾಣ ಹಂತ ತಲುಪಲಿರುವ ಟಾಪ್ 5 ಕಾನ್ಸೆಪ್ಟ್ ಕಾರುಗಳು
ಇತ್ತೀಚೆಗಷ್ಟೇ ನಡೆದ 2014 ಜಿನೆವಾ ಮೋಟಾರು ಶೋ ನಿರೀಕ್ಷೆಯಂತೆಯೇ ಹೆಚ್ಚಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಾಹನೋದ್ಯಮದ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳಗಳಲ್ಲಿ ಒಂದಾಗಿರುವ ಜಿನೆವಾದಲ್ಲಿ ಹಲವು ನೂತನ ಕಾರುಗಳ ಜತೆಗೆ ಕಾನ್ಸೆಪ್ಟ್ ಮಾದರಿಗಳು ಪ್ರದರ್ಶನಗೊಂಡಿದ್ದವು.
ಈ ಪೈಕಿ ಅತಿ ಶೀಘ್ರದಲ್ಲೇ ನಿರ್ಮಾಣ ಹಂತ ತಲುಪಲಿರುವ ಟಾಪ್ 5 ಕಾನ್ಸೆಪ್ಟ್ ಕಾರುಗಳನ್ನು ನಾವು ಪಟ್ಟಿ ಮಾಡಿ ತೋರಿಸಲಿದ್ದೇವೆ. ಭವಿಷ್ಯದ ಸಂಚಾರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಎಲ್ಲ ಪರಿಕಲ್ಪನೆಗಳು ಯಶಸ್ವಿಯಾಗುವ ನಿರೀಕ್ಷೆ ಹೊಂದಿದ್ದೇವೆ.

ಸಹಜವಾಗಿಯೇ ಕಾನ್ಸೆಪ್ಟ್ ಕಾರುಗಳು ನಾವೀನ್ಯತೆಯ ಪ್ರತೀಕವಾಗಿದೆ. ಇದು ನಿಜ ರಸ್ತೆ ಪರಿಸ್ಥಿತಿಯಲ್ಲೂ ಯಶಸ್ಸು ಸಾಧಿಸಲಿ ಎಂಬುದೇ ನಮ್ಮ ಆಶಯ. ಮುಂದಿನ ಒಂದೊಂದು ಸ್ಲೈಡರ್ ಕ್ಲಿಕ್ಕಿಸುತ್ತಾ ಟಾಪ್ 5 ಕಾನ್ಸೆಪ್ಟ್ ಮಾದರಿಗಳ ಬಗ್ಗೆ ಮಾಹಿತಿ ಪಡೆಯಿರಿ.

ನಂ. 5 - ಮಾಜ್ದಾ ಹಝುಮಿ
ನಮ್ಮ ಟಾಪ್ 5 ಕಾನ್ಸೆಪ್ಟ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮಾಜ್ದಾ ಹಝುಮಿ ಯಶಸ್ವಿಯಾಗಿದೆ. ಈ ಹ್ಯಾಚ್‌ಬ್ಯಾಕ್ ಕಾನ್ಸೆಪ್ಟ್ ಕಾರು ಸಮಕಾಲೀನ ಮಾಜ್ದಾ2 ಮಾದರಿಯ ಮುಂದುವರಿದ ಭಾಗವಾಗಿದೆ. ಇದು ಸದ್ಯದಲ್ಲೇ ನಿರ್ಮಾಣ ಹಂತ ತಲುಪುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ನಂ. 4 - ಫೋಕ್ಸ್‌ವ್ಯಾಗನ್ ಟಿ-ರಾಕ್
ಈ ನಡುವೆ ಫೋಕ್ಸ್‌ವ್ಯಾಗನ್ ತನ್ನ ಎರಡು ಬಾಗಿಲುಗಳ ಟಿ-ರಾಕ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶನಕ್ಕಿಟ್ಟಿತ್ತು. ಇದು 2.0 ಲೀಟರ್ ಡೀಸೆಲ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿದೆ. ಇದು ನಿರ್ಮಾಣ ಹಂತ ತಲುಪಿದರೆ ಕಿಯಾ ಸೋಲ್ ಮತ್ತು ನಿಸ್ಸಾನ್ ಜ್ಯೂಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ನಂ. 3 - ಸ್ಕೋಡಾ ವಿಷನ್ ಸಿ
ಫೋಕ್ಸ್‌ವ್ಯಾಗನ್ ಸಂಸ್ಥೆಯ ಭಾಗವಾಗಿರುವ ಸ್ಕೋಡಾರ್, ಪ್ರಮುಖವಾಗಿಯೂ ಯುರೋಪ್ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ವಿಷನ್ ಸಿ ಕಾನ್ಸೆಪ್ಟ್ ರಚಿಸಿದೆ. ಇದು ಸ್ಕೋಡಾ ಗತಕಾಲದ ವೈಭವವನ್ನು ಮರುಕಳಿಸುವ ಸಾಧ್ಯತೆಯಿದೆ.

ನಂ. 2 - ಆಡಿ ಟಿಟಿ ಕ್ವಾಟ್ರೊ ಸ್ಪೋರ್ಟ್ ಕಾನ್ಸೆಪ್ಟ್
ಆಡಿ ಟಿಟಿ ಕ್ವಾಟ್ರೊ ಸ್ಪೋರ್ಟ್ ಕಾನ್ಸೆಪ್ಟ್ ಪರಿಚಯಿಸುವ ಮೂಲಕ ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತ್ತು. ಇದರಲ್ಲಿ 2.0 ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಹೊಂದಿರಲಿದ್ದು, 420 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಕೇವಲ 3.7 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇನ್ನು ಭಾರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಬನ್ ಪೈಬರ್‌ಗಳಂತಹ ವಸ್ತುಗಳನ್ನು ಬಳಕೆ ಮಾಡಲಾಗಿದೆ.

ನಂ. 1 - ಮಸೆರಟಿ ಆಲ್ಫಿರಿ ಕಾನ್ಸೆಪ್ಟ್
ಇನ್ನು 100ರ ವರ್ಷಾಚರಣೆಯ ಸಂಭ್ರಮದಲ್ಲಿರುವ ಮಸೆರಟಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ನೂತನ ಆಲ್ಫಿರಿ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ಇದು ಎಲ್ಲ ವಿಭಾಗಗಳಿಂದಲೂ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಂಡಿದೆ. ವರದಿಗಳ ಪ್ರಕಾರ ಮಸೆರಟಿ ಕಾನ್ಸೆಪ್ಟ್ ಕಾರು ಸದ್ಯದಲ್ಲೇ ನಿರ್ಮಾಣ ಹಂತ ತಲುಪಲಿದೆ.


Click it and Unblock the Notifications








