ದೇಶದ ಟಾಪ್ ಡೀಸೆಲ್ ಕಾರು- ನಿಮ್ಮ ಆಯ್ಕೆ ಯಾವುದು?

By Nagaraja

ದೇಶದಲ್ಲಿ ಡೀಸೆಲ್ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್‌ಗೆ ಹೋಲಿಸಿದಾಗ ಕಡಿಮೆ ದರದಲ್ಲಿ ದೊರಕುತ್ತಿರುವುದು ಹಾಗೂ ಉತ್ತಮ ಮೈಲೇಜ್ ದೇಶದ ಗ್ರಾಹಕರನ್ನು ಡೀಸೆಲ್ ಕಾರುಗಳತ್ತ ಹೆಚ್ಚು ಆಕರ್ಷಿಸುವಲ್ಲಿ ಕಾರಣವಾಗಿದೆ.

ಪೆಟ್ರೋಲ್ ದರ ಗಣನೀಯವಾಗಿ ವರ್ಧಿಸಿರುವುದು ಸಹ ಡೀಸೆಲ್ ಕಾರು ಹೆಚ್ಚು ಆಕರ್ಷಿಸಲು ಕಾರಣವಾಗಿದೆ. ಇದರಿಂದಾಗಿ ಕಂಪನಿಗಳು ಡೀಸೆಲ್ ಕಾರುಗಳು ಹೆಚ್ಚುಚ್ಚು ತಯಾರಿಸಲು ಆರಂಭಿಸಿದ್ದವು.

ಕೆಲವು ವಿಶ್ಲೇಷಕರಂತೂ ಡೀಸೆಲ್ ಕಾರುಗಳ ಆಗಮನವನ್ನು ವಿರೋಧಿಸಿದ್ದರು. ಆದರೆ 2012 ಕಾರು ಮಾರಾಟ ವೃದ್ಧಿಯಲ್ಲಿ ಡೀಸೆಲ್ ಕಾರುಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಮರೆಯಬಾರದು. ಪ್ರಸ್ತುತ ಲೇಖನದಲ್ಲಿ ಕಳೆದ ವರ್ಷದ ಮಾರಾಟವನ್ನು ಆಧಾರವಾಗಿಟ್ಟುಕೊಂಡು ಟಾಪ್ ಡೀಸೆಲ್ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್

ದೇಶದಲ್ಲಿ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಎರಡನೇ ಸ್ಥಾನ ಪಡೆದುಕೊಂಡಿದೆ. ಅಂತೆಯೇ 2012ರ ಸಾಲಿನ ಎಪ್ರಿಲ್‌ರಿಂದ ಡಿಸೆಂಬರ್ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಡೀಸೆಲ್ ವೆರಿಯಂಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್ 2012ನೇ ಸಾಲಿನಲ್ಲಿ ದೇಶದ ಅತಿ ಹೆಚ್ಚು ಮಾರಾಟವಾಗುತ್ತಿರುವ ಡೀಸೆಲ್ ಸೆಡಾನ್ ಕಾರೆಂಬ ಹೆಗ್ಗಳಿಕೆಯನ್ನು ಪಡೆಯಿತು. ಸ್ವಿಫ್ಟ್ ಡಿಜೈರ್ ಸೇಲ್ಸ್ ಶೇಕಡಾ 78.56ರಷ್ಟು ಏರಿಕೆಯಾಗಿತ್ತು.

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಸ್ಪರ್ಧಾತ್ಮಕ ದರ ಹಾಗೂ ನಿರ್ವಹಣೆ ಫೋರ್ಡ್ ಫಿಗೊ ವಿಶೇಷವಾಗಿದೆ. ಕಳೆದ ವರ್ಷದ ಅಂತಿಮ ತಿಂಗಳಲ್ಲಿ ಫೋರ್ಡ್ ಮಾರಾಟವು ಶೇಕಡಾ 11.57ರಷ್ಟು ಏರಿಕೆಯಾಗಿತ್ತು.

ಹ್ಯುಂಡೈ ಐ20

ಹ್ಯುಂಡೈ ಐ20

ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಡೀಸೆಲ್ ಕಾರುಗಳು 2012ರ ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿತ್ತು. ಹ್ಯುಂಡೈ ಐ20 ಡೀಸೆಲ್ ವೆರಿಯಂಟ್ ಸೇಲ್ಸ್ ಶೇಕಡಾ 52.27ರಷ್ಟು ವೃದ್ಧಿಸಿತ್ತು.

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಮಾರುತಿಗೆ ಪ್ರಬಲ ಪೈಪೋಟಿಯಾಗಿರುವ ಹ್ಯುಂಡೈನಿಂದ ಬಿಡುಗಡೆಯಾಗಿರುವ ವರ್ನಾ ಡೀಸೆಲ್ ವೆರಿಯಂಟ್ ಕೂಡಾ ಉತ್ತಮ ಮಾರಾಟವನ್ನು ದಾಖಲಿಸಿತ್ತು. ವರ್ನಾ ಡೀಸೆಲ್ ಕಾರುಗಳ ಮಾರಾಟವು ಶೇಕಡಾ 43.14ರಷ್ಟು ವೃದ್ಧಿಸಿತ್ತು.

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್ ಹೆಚ್ಚು ಸ್ಥಳಾವಕಾಶ ಹೊಂದಿದೆ. ಇದರಿಂದಲೇ ಈ ಡೀಸೆಲ್ ಆವೃತ್ತಿಯು ಮಾರಾಟದಲ್ಲಿ ಶೇಕಡಾ 13.31ರಷ್ಟು ಹೆಚ್ಚಳ ದಾಖಲಿಸಿತ್ತು.

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಬೀಟ್ ಷೆವರ್ಲೆಯ ಟ್ರಂಪ್ ಕಾರ್ಡ್ ಎನಿಸಿಕೊಂಡಿದ್ದು, 2012ರ ಸಾಲಿನಲ್ಲಿ 32000ದಷ್ಟು ಡೀಸೆಲ್ ಕಾರುಗಳು ಮಾರಾಟವಾಗಿವೆ.

ಟೊಯೊಟಾ ಎಟಿಯೋಸ್

ಟೊಯೊಟಾ ಎಟಿಯೋಸ್

ಟೊಯೆಟಾ ಎಟಿಯೋಸ್ ಸೆಡಾನ್ ಡೀಸೆಲ್ ವೆರಿಯಂಟ್ ಲಾಂಚ್ ಆದ ಬಳಿಕ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಟಿಯೋಸ್ ಮಾರಾಟವು 2012ರಷ್ಟು ಶೇಕಡಾ 140ರಷ್ಟು ಏರಿಕೆಯಾಗಿತ್ತು.

ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಪೊಲೊ ಕೂಡಾ ಉತ್ತಮ ಮಾರಾಟ ಪ್ರಗತಿಯನ್ನು ದಾಖಲಿಸಿಕೊಂಡಿದೆ. ಶೇಕಡಾ 16.28ರಷ್ಟು ಮಾರಾಟ ದಾಖಲಿಸಿರುವ ಪೊಲೊ 19,260 ಯುನಿಟ್ ಮಾರಾಟವಾಗಿದ್ದವು.

ಟೊಯೊಟಾ ಎಟಿಯೋಸ್ ಲಿವಾ

ಟೊಯೊಟಾ ಎಟಿಯೋಸ್ ಲಿವಾ

ಕಳೆದ ವರ್ಷ ಟೊಯೊಟಾ ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಡೀಸೆಲ್ ಕಾರು ಕೂಡಾ ಮಾರಾಟದಲ್ಲಿ ಶೇಕಡಾ 94.37ರಷ್ಟು ಭರ್ಜರಿ ಪ್ರಗತಿ ಸಾಧಿಸಿದೆ.

ಸ್ಕೋಡಾ ರ‌್ಯಾಪಿಡ್

ಸ್ಕೋಡಾ ರ‌್ಯಾಪಿಡ್

ಕಳೆದ ಸಾಲಿನಲ್ಲಿ ಸ್ಕೋಡಾ ರ‌್ಯಾಪಿಡ್ ಡೀಸೆಲ್ ಕಾರು ಶೇಕಾಡ 760ರಷ್ಟು ಭರ್ಜರಿ ಪ್ರಗತಿ ಸಾಧಿಸಿ ಆಟೋ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.

ಎಚ್‌ಎಂ ಅಂಬಾಸಿಡರ್

ಎಚ್‌ಎಂ ಅಂಬಾಸಿಡರ್

ಎಚ್‌ಎಂ ಅಂಬಾಸಿಡರ್ ಡೀಸೆಲ್ ಕಾರು ಸಹ 2012ನೇ ಸಾಲಿನ ಕೊನೆಯ ಒಂಬತ್ತು ತಿಂಗಳಲ್ಲಿ ಶೇಕಡಾ 66ರಷ್ಟು ಮಾರಾಟ ವೃದ್ಧಿ ಸಾಧಿಸುವ ಮೂಲಕ ಸದ್ದು ಮಾಡಿದೆ.

ರೆನೊ ಫ್ಯೂಯೆನ್ಸ್

ರೆನೊ ಫ್ಯೂಯೆನ್ಸ್

ದೇಶದ ಟಾಪ್ ಡೀಸೆಲ್ ಮಾರುಕಟ್ಟೆಯಲ್ಲಿ ರೆನೊ ಫ್ಯೂಯೆನ್ಸ್ ಕೂಡಾ ಕಾಣಿಸಿಕೊಂಡಿದೆ. ಪ್ರಸ್ತುತ ಕಾರು ಕಳೆದ ವರ್ಷ ಮಾರಾಟದಲ್ಲಿ ಶೇಕಡಾ 64.56ರಷ್ಟು ವೃದ್ಧಿ ದಾಖಲಿಸಿದೆ.

More from DriveSpark

Article Published On: Thursday, January 24, 2013, 11:41 [IST]
English summary
The Indian car industry is slowly being dominated by diesel cars. The low price of diesel along with high mileage of diesel cars has attracted the Indian car buyer in recent years. Here is a look at some of India's top diesel cars that saved the Indian automobile Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+