ಇಕೊಸ್ಪೋರ್ಟ್ ಸವಾಲು ಎದುರಿಸಲು ತೆರೆಮರೆಯಲ್ಲಿ ಸಂಚು

By Nagaraja

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಕ್ರೀಡಾ ಉತ್ಪಾದಕ ವಾಹನಗಳಿಗೆ (ಎಸ್‌ಯುವಿ) ಬೇಡಿಕೆ ದಿನದಿಂದಲೇ ದಿನಕ್ಕೆ ಹೆಚ್ಚುತ್ತಲೇ ಇವೆ. ಇದರಂತೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಫೋರ್ಡ್ ಇಕೊಸ್ಪೋರ್ಟ್ ಭರ್ಜರಿ ಮಾರಾಟ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.

ಈ ನಡುವೆ ಬೇಡಿಕೆ ಮಿತಿಮೀರಿದಾಗ ಸ್ಟೋಕ್ ಸಂಖ್ಯೆಯಲ್ಲಿ ಅಭಾಯ ಎದುರಾಗಿದ್ದರಿಂದ ಕೆಲವು ನಿರ್ದಿಷ್ಟ ವೆರಿಯಂಟ್‌ಗಳನ್ನು ಸ್ಥಗಿತಗೊಳಿಸುವಂತೆ ಫೋರ್ಡ್ ಪ್ರೇರಿತವಾಗಿದ್ದವು.

ಈ ನಡುವೆ ಇಕೊಸ್ಪೋರ್ಟ್ ಸವಾಲನ್ನು ಎದುರಿಸಲು ತೆರೆಮರೆಯಲ್ಲಿ ಭಾರಿ ತಯಾರಿ ನಡೆಯುತ್ತಿದೆ. ಈ ರೇಂಜ್‌ನಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸೇರಿದಂತೆ ಅನೇಕ ವಾಹನ ಉತ್ಪಾದಕ ಸಂಸ್ಥೆಗಳು ಸಾಲು ಸಾಲು ಬಿಡುಗಡೆಗೊಳಿಸಲು ಸಜ್ಜಾಗಿ ನಿಂತಿವೆ. ಇದರಲ್ಲಿ ಮಲ್ಟಿ ಪರ್ಪಸ್ ವೆಹಿಕಲ್ ಕೂಡಾ ಸೇರಿವೆ.

ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಟೈಗನ್

ಸಾವೊಪೊಲೊ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಫೋಕ್ಸ್‌ವ್ಯಾಗನ್ ಟೈಗನ್, ಸಬ್ ಫೋರ್ ಮೀಟರ್ ಪರಿಧಿಯೊಳಗೆ ಆಗಮನವಾಗಲಿರುವುದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ನೆರವಾಗಲಿದೆ.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ಈ ಹಿಂದೆಯೇ ಹಲವು ಬಾರಿ ವರದಿ ಮಾಡಿರುವಂತೆಯೇ ಹೋಂಡಾ ಮೊಬಿಲಿಯೊ ಎಂಪಿವಿ ಆಗಮನ ಹತ್ತಿರವಾಗುತ್ತಿದೆ. ಪ್ರಸ್ತುತ ಕಾರು ಸಣ್ಣ ಎಸ್‌ಯುವಿಗಳಿಗೆ ಸ್ಪರ್ಧೆ ಒಡ್ಡುವ ಸಾಮರ್ಥ್ಯ ಹೊಂದಿದೆ.

ಡಸ್ಟರ್ ಗೊ ಪ್ಲಸ್

ಡಸ್ಟರ್ ಗೊ ಪ್ಲಸ್

ಬೆಳೆದು ಬರುತ್ತಿರುವ ಭಾರತದಂತಹ ದೇಶಗಳು ಅತೀವ ಕುತೂಹಲದಿಂದ ಎದುರು ನೋಡುತ್ತಿರುವ ಬ್ರಾಂಡ್ ಅಂದರೆ ಅದುವೇ ದಟ್ಸನ್. ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಈಗಾಗಲೇ ಅನಾವರಣಗೊಂಡಿದ್ದು, ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಬೆನ್ನಲ್ಲೇ ದಟ್ಸನ್ ಗೊ ಪ್ಲಸ್ ಎಂಪಿವಿ ಸಹ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ.

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರನೊ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿರುವ ಟೆರನೊ, ಫೋರ್ಡ್ ಇಕೊಸ್ಪೋರ್ಟ್ ಮಾರಾಟಕ್ಕೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಗಳಿವೆ.

ಸುಜುಕಿ ಐವಿiv

ಸುಜುಕಿ ಐವಿiv

ಈಗಾಗಲೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಅನಾವರಣ ಕಂಡಿರುವ ಸುಜುಕಿ ಐವಿiv, ಭಾರತ ಪ್ರವೇಶಿಸುವುದು ಖಚಿತವಾಗಿದೆ. ದೇಶದ ಒಟ್ಟಾರೆ ಮಾರಾಟದ ಅರ್ಧದಷ್ಟು ಶೇರನ್ನು ಹೊಂದಿರುವ ಸುಜುಕಿ ನಿಜಕ್ಕೂ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ.

ಮಹೀಂದ್ರ 101 ಎಸ್

ಮಹೀಂದ್ರ 101 ಎಸ್

ಮಹೀಂದ್ರ ಎಕ್ಸ್‌ಯುವಿ 500ನ ಸಣ್ಣ ರೂಪವೇ ಮಹೀಂದ್ರ 101. ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿರುವ ಮಹೀಂದ್ರ ಸಣ್ಣ ಎಸ್‍‌ಯುವಿ ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಗೆ ಕಾರಣವಾಗಲಿದೆ.

ಫಿಯೆಟ್ ಪುಂಟೊ ಅಡ್ವೆಂಚರ್

ಫಿಯೆಟ್ ಪುಂಟೊ ಅಡ್ವೆಂಚರ್

ಹಾಗೆಯೇ ವಾಹನ ಮೂಲಗಳ ಪ್ರಕಾರ ಫಿಯೆಟ್ ಪುಂಟೊ ಅಡ್ವೆಂಚರ್ ಕಾರಿನ ಸಣ್ಣ ಎಸ್‌ಯುವಿ ತಯಾರಿಯ ಸಿದ್ಧತೆಗಳನ್ನು ನಡೆಯುತ್ತಿದೆ.

ಹ್ಯುಂಡೈಯಿಂದ ಸಣ್ಣ ಎಸ್‌ಯುವಿ

ಹ್ಯುಂಡೈಯಿಂದ ಸಣ್ಣ ಎಸ್‌ಯುವಿ

ಅದೇ ರೀತಿ ಹ್ಯುಂಡೈ ಸಣ್ಣ ಎಸ್‌ಯುವಿ ಕಾರುಗಳು ಟೆಸ್ಟಿಂಗ್ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂದಿನ ವರ್ಷ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಷೆವರ್ಲೆ ಕಾಂಪಾಕ್ಟ್ ಎಂಪಿವಿ

ಷೆವರ್ಲೆ ಕಾಂಪಾಕ್ಟ್ ಎಂಪಿವಿ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್‌ನ ಜನಪ್ರಿಯ ಬ್ರಾಂಡ್ ಆಗಿರುವ ಷೆವರ್ಲೆಯಿಂದ ಕಾಂಪಾಕ್ಟ್ ಎಂಪಿವಿ ಸಿದ್ಧಗೊಳ್ಳುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಈ ಎಲ್ಲ ಕಾರುಗಳು ಮುಂದಿನ ದಿನಗಳಲ್ಲಿ ಇಕೊಸ್ಪೋರ್ಟ್ ವಿರುದ್ಧ ಪೈಪೋಟಿಗೆ ಕಾರಣವಾಗಲಿದೆ. ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ದೇಶದ ಮಾರುಕಟ್ಟೆ ದೃಷ್ಟಿಕೋನದಿಂದ ಉತ್ತಮವಾಗಿದೆ.

More from DriveSpark

Article Published On: Monday, September 30, 2013, 12:07 [IST]
English summary
EcoSport SUV is the market leader in the newly awakened compact SUV segment in India. A lot of takers are eying on the compact segment after the market victory of EcoSport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+