ತಡೆಯಿರಿ, ಮುಂದಿನ ವರ್ಷ ಹ್ಯಾಚ್‌ಬ್ಯಾಕ್ ಕಾರುಗಳ ಹಬ್ಬ

Written By:

ಹೌದು, ಮುಂದಿನ ವರ್ಷ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹಬ್ಬ ಎಂದೇ ವಿಶ್ಲೇಷಿಸಬಹುದು. ಯಾಕೆಂದರೆ 2014ನೇ ಸಾಲಿನಲ್ಲಿ ಸಾಲು ಸಾಲು ಹ್ಯಾಚ್‌ಬ್ಯಾಕ್ ಕಾರುಗಳು ಬಿಡುಗಡೆಯಾಗಲಿದೆ. ಇವುಗಳು ಪಟ್ಟಿ ಒಂದೆರಡಲ್ಲ. ಭರ್ಜರಿ ಎಂಟು ಹ್ಯಾಚ್ ಬ್ಯಾಕ್ ಕಾರುಗಳು ಈಗಾಗಲೇ ಒಂದರ ಹಿಂದೆ ಒಂದರಂತೆ ಸಾಲು ಗಟ್ಟಿ ನಿಂತಿದೆ. ಮುಂದಿನ ದಿನಗಳಲ್ಲಿ ಈ ಪಟ್ಟಿ ಇನ್ನಷ್ಟು ಬೆಳೆಯುವ ನಿರೀಕ್ಷೆಯೂ ಇದೆ.

ಇವನ್ನೂ ಓದಿ: 2013ರಲ್ಲಿ ಲಾಂಚ್ ಆದ ಟಾಪ್ ಕಾರುಗಳಿವು..!

ಮಾರುಕಟ್ಟೆ ಕುಸಿತದ ನಡುವೆಯೂ ವಾಹನ ತಯಾರಕ ಸಂಸ್ಥೆಗಳ ಇಂತಹದೊಂದು ಧನಾತ್ಮಕ ನಡೆ ಸಂತಸಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಮುಂದಿನ ವರ್ಷ ಬಿಡುಗಡೆಯಾಗಲಿರುವ ಹ್ಯಾಚ್‌ಬ್ಯಾಕ್ ಕಾರುಗಳು ಯಾವುವು ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಟಾಟಾ ಫಾಲ್ಕನ್ (ವಿಸ್ಟಾ ಫೇಸ್‌ಲಿಫ್ಟ್)

ಟಾಟಾ ಫಾಲ್ಕನ್ (ವಿಸ್ಟಾ ಫೇಸ್‌ಲಿಫ್ಟ್)

ದೇಶದ ಮಾರುಕಟ್ಟೆಯಲ್ಲಿ ಹಳೆ ವೈಭವ ಮರುಕಳಿಸುವ ಪ್ರಯತ್ನದಲ್ಲಿರುವ ಟಾಟಾ ಫಾಲ್ಕನ್ ಅಥವಾ ವಿಸ್ಟಾ ಫೇಸ್‌ಲಿಫ್ಟ್ ಈ ಪೈಕಿ ಮೊದಲನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದು ಟಾಟಾ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಅತ್ಯುತ್ತಮ ಚಾಲನಾ ಅನುಭವ, ನಿರ್ವಹಣೆ, ಮೈಲೇಜ್ ಹೀಗೆ ಒಂದು ಪ್ರಯಾಣಿಕ ಕಾರಿನ ಎಲ್ಲ ವಿಭಾಗದತ್ತವೂ ಟಾಟಾ ಎಂಜಿನಿಯರುಗಳು ಶ್ರಮ ವಹಿಸಿದ್ದಾರೆ. ಇದು ಫೆಬ್ರವರಿ ತಿಂಗಳಲ್ಲಿ ಲಾಂಚ್ ಆಗುವ ಸಂಭವವಿದೆ. (ಸಾಂದರ್ಭಿಕ ಚಿತ್ರ ಬಳಕೆ)

ದಟ್ಸನ್ ಗೊ

ದಟ್ಸನ್ ಗೊ

ನಿಸ್ಸಾನ್‌ನ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಬಗ್ಗೆ ಈಗಾಗಲೇ ಅನೇಕ ಬಾರಿ ವರದಿ ಮಾಡಿರುತ್ತೇವೆ. ಅಂದ ಹಾಗೆ ದಟ್ಸನ್ ಗೊ ದೇಶದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಪೆಟ್ರೋಲ್ ವೆರಿಯಂಟ್‌ನಲ್ಲಿ ಲಭ್ಯವಿರುವ ದಟ್ಸನ್ ಗೊ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಮೋಟಾರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡನ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಸ್ಮರ್ಧಾತ್ಮಕ 3.5 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮಿಸುತ್ತಿರುವುದು ಸಹ ದಟ್ಸನ್ ಪ್ಲಸ್ ಪಾಯಿಂಟ್ ಆಗಿದೆ. ಬಹುತೇಕ ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಕಾಣಲಿರುವ ದಟ್ಸನ್ ಗೊ ಮಾರುತಿಯ ಸಣ್ಣ ಕಾರುಗಳಿಗೆ ನಿಕಟ ಪೈಪೋಟಿ ಒಡ್ಡಲಿದೆ.

ಮಾರುತಿ ವೈಎಲ್7 (ಎ-ಸ್ಟಾರ್, ಎಸ್ಟಿಲೊ ಬದಲಿ ಕಾರು)

ಮಾರುತಿ ವೈಎಲ್7 (ಎ-ಸ್ಟಾರ್, ಎಸ್ಟಿಲೊ ಬದಲಿ ಕಾರು)

ಮಾರುತಿ ಎಂದಾಕ್ಷಣ ದೇಶದ ಗ್ರಾಹಕರು ಬಹಳ ಕುತೂಹಲದಿಂದ ಎದುರು ನೋಡುತ್ತಾರೆ. ಅತ್ಯುತ್ತಮ ಮಟ್ಟದ ಸೇವೆಯೇ ಇದರ ಹಿಂದಿರುವ ಕಾರಣವಾಗಿದೆ. ಅಂದ ಹಾಗೆ ಎಸ್ಟಾರ್ ಹಾಗೂ ಎಸ್ಟಿಲೊ ಹ್ಯಾಚ್‌ಬ್ಯಾಕ್ ಕಾರುಗಳ ಬದಲಿಯಾಗಿ ವೈಎಲ್7 ಕೋಡ್ ಪಡೆದುಕೊಂಡಿರುವ ಹ್ಯಾಚ್‌ಬ್ಯಾಕ್ ಕಾರೊಂದನ್ನು ಮಾರುತಿ ಸಜ್ಜುಗೊಳಿಸುತ್ತಿದೆ. ಎ:ವಿಂಡ್ ನಾಮಕರಣ ಪಡೆದಿರುವ ಈ ಕಾರು 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್

ದೇಶದ ಅತ್ಯುತ್ತಮ 'ಬಿ' ಸೆಗ್ಮೆಂಟ್ ಮಾರಾಟ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್, ಸದ್ಯದಲ್ಲೇ ಫೇಸ್ ಲಿಫ್ಟ್ ಅವತಾರ ಪಡೆಯಲಿದೆ. ಹೊಸತಾದ ಫ್ರಂಟ್ ಬಂಪರ್, ಗ್ರಿಲ್, ಎಲ್‌ಇಡಿ ಡೇಟೈಮ್ ಲೈಟ್ ಹಾಗೂ ಅಲಾಯ್ ವೀಲ್‌ನಲ್ಲಿ ಬದಲಾವಣೆ ಕಂಡುಬರಲಿದೆ. ಇದರಲ್ಲಿ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಹಾಗೂ 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ. ಸಾಮಾನ್ಯ ಆವೃತ್ತಿಗಿಂತಲೂ 50,000 ರು.ಗಳಷ್ಟು ದುಬಾರಿಯಾಗಲಿರುವ ಸ್ವಿಫ್ಟ್ ಫೇಸ್‌ಲಿಫ್ಟ್ ಸಹ ಮುಂದಿನ ವರ್ಷಕ್ಕೆ ಸಿದ್ಧಗೊಳ್ಳುತ್ತಿದೆ. (ಸಾಂದರ್ಭಿಕ ಚಿತ್ರ ಬಳಕೆ)

ಷೆವರ್ಲೆ ಬೀಟ್ ಫೇಸ್‌ಲಿಫ್ಟ್

ಷೆವರ್ಲೆ ಬೀಟ್ ಫೇಸ್‌ಲಿಫ್ಟ್

ಇನ್ನೊಂದೆಡೆ ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್, ಸಹ ಷೆವರ್ಲೆ ಬೀಟ್ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡುವ ಇರಾದೆ ಹೊಂದಿದೆ. ಇದರಲ್ಲಿ ಹೊಸ ಫ್ರಂಟ್ ಗ್ರಿಲ್, ರಿಯರ್ ಬಂಪರ್, ಪರಿಷ್ಕೃತ ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್, ಪರಿಷ್ಕೃತ ಅಲಾಯ್ ವೀಲ್ ಮತ್ತು ಕನ್ನಡಿಯಲ್ಲಿ ಟರ್ನ್ ಇಂಡಿಕೇಟರ್ ಸೌಲಭ್ಯವಿರಲಿದೆ. ಇದು 1.2 ಲೀಟರ್ 4 ಸಿಲಿಂಡ್ ಪೆಟ್ರೋಲ್, ಎಲ್‌ಪಿಜಿ ಆಯ್ಕೆ ಮತ್ತು 936 ಸಿಸಿ ಟ್ರಿಪಲ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ (5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್) ಹೊಂದಿರಲಿದೆ. (ಸಾಂದರ್ಭಿಕ ಚಿತ್ರ ಬಳಕೆ)

ಟಾಟಾ ನ್ಯಾನೋ ಡೀಸೆಲ್

ಟಾಟಾ ನ್ಯಾನೋ ಡೀಸೆಲ್

ದೇಶದ ಮಧ್ಯಮ ವರ್ಗದ ಜನತೆ ಕಾತರದಿಂದ ಕಾಯುತ್ತಿರುವ ಟಾಟಾ ನ್ಯಾನೋ ಡೀಸೆಲ್ ಸಹ ಮುಂದಿನ ವರ್ಷ ಪ್ರತ್ಯಕ್ಷವಾಗಲಿದೆ. ನಿಜಕ್ಕೂ ಇದು ನ್ಯಾನೋ ಪಾಲಿಗೆ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನ್ಯಾನೋ ಡೀಸೆಲ್ ವರ್ಷನ್ 2014 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, 3 ಲಕ್ಷ ರು.ಗಳ ಅಸುಪಾಸಿನಲ್ಲಿ ಗ್ರಾಹಕರನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ ಬಳಕೆ)

ಹೊಸ 2015 ಹ್ಯುಂಡೈ ಐ20

ಹೊಸ 2015 ಹ್ಯುಂಡೈ ಐ20

ಎಲ್ಲ ಹೊಸತನದಿಂದ ಕೂಡಿದ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಹ್ಯುಂಡೈ ಐ20 2014ರ ಸಾಲಿನಲ್ಲಿ ದೇಶದ ರಸ್ತೆಗೆ ಲಗ್ಗೆಯಿಡಲಿದೆ. ಹಾಗಿದ್ದರೂ ಹಿಂದಿನ ಆವೃತ್ತಿಯಲ್ಲಿರುವ ಎಂಜಿನ್ ಹಾಗೂ ಗೇರ್ ಬಾಕ್ಸ್ ಉಳಿಸಿಕೊಳ್ಳುವ ನಿರೀಕ್ಷೆಯಿದೆ. 2014 ವರ್ಷಾಂತ್ಯದಲ್ಲಿ ಲಾಂಚ್ ಆಗುವ ಸಂಭವವಿರುವ ಹೊಸ ಹ್ಯುಂಡೈ ಐ20 ತನ್ನ ಹಿಂದಿನ ಆವೃತ್ತಿಗಿಂತಲೂ ದೊಡ್ಡ ಸ್ವರೂಪವನ್ನು ಪಡೆದುಕೊಳ್ಳಲಿದೆ. (ಸಾಂದರ್ಭಿಕ ಚಿತ್ರ ಬಳಕೆ)

ಆಲ್ ನ್ಯೂ 2014 ಹೋಂಡಾ ಜಾಝ್

ಆಲ್ ನ್ಯೂ 2014 ಹೋಂಡಾ ಜಾಝ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ 2014 ಹೋಂಡಾ ಜಾಝ್ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿ ನಿಂತಿದೆ. ಇದರಲ್ಲಿ 1.5 ಲೀಟರ್ ಡಿಟೆಕ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಕೆಯಾಗಲಿದೆ. ಹಾಗೆಯೇ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಮಾರಾಟವಾಗಲಿದೆ. ಒಟ್ಟಿನಲ್ಲಿ ಅಮೇಜ್ ಹಾಗೂ ಸಿಟಿ ಸೆಡಾನ್ ಕಾರಿನ ಮೈಲೇಜ್ ದಾಖಲೆಯನ್ನು ಹೋಂಡಾ ಜಾಝ್ ಮುರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Story first published: Thursday, December 19, 2013, 10:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark