ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷದ ಜನವರಿ 23ರಂದು ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರಿನ್ನು ಹಲಚಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಾಗಿತ್ತು. ಸುಮಾರು ವರ್ಷ ಹ್ಯಾಚ್‍‍ಬ್ಯಾಕ್ ಕಾರು ಪ್ರಿಯರಲ್ಲಿ ಜನಪ್ರಿಯತೆಯನ್ನು ಪಡೆದ ಈ ಕಾರು ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಹ್ಯುಂಡೈ ಸ್ಯಾಂಟ್ರೋ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ವ್ಯಾಗನ್ ಕಾರುಗಳು ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ಸುಮಾರು 50,000ಕ್ಕು ಹೆಚ್ಚಿನ ಯೂನಿಟ್ ಮಾರಾಟಗೊಂಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಗಾಡಿವಾಡಿ ವರದಿ ಪ್ರಕಾರ ಜನವರಿಯಲ್ಲಿ ಬಿಡುಗಡೆಗೊಂಡ ಈ ಕಾರು ಫೆಬ್ರುವರಿಯಲ್ಲಿ 15,661 ಯೂನಿಟ್, ಮಾರ್ಚ್‍ನಲ್ಲಿ 16,152 ಯೂನಿಟ್, ಏಪ್ರಿಲ್‍ನಲ್ಲಿ 11,306 ಮತ್ತು ಮೇ ತಿಂಗಳಿನಲ್ಲಿ 14,561 ಯೂನಿಟ್ ಮಾರಾಟಗೊಂಡಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಬೆಲೆ ಮತ್ತು ಬುಕ್ಕಿಂಗ್

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಮಾರುತಿ ಸುಜುಕಿ ಡೀಲರ್‍‍ಗಳ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸಂಸ್ಥೆಯ ಸ್ವಿಫ್ಟ್, ಎರ್ಟಿಗಾ ಮತ್ತು ಇಗ್ನಿಸ್ ಕಾರುಗಳಲ್ಲಿ ಬಳಸಲಾದ ಹಾರ್ಟ್‍ಟೆಕ್ಶ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, ಹಳೆಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಮತ್ತು ಟೀಸರ್‍‍ಗಳ ಮೂಲಕ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಹೊಸ ವ್ಯಾಗನ್ ಆರ್ ವಿನ್ಯಾಸ

ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ಈ ಬಾರಿ ಹೊಸ ಗ್ರಿಲ್ ಡಿಸೈನ್, ನವೀಕರಿಸಲಾದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಪಡೆದುಕೊಂಡಿದೆ. ಇದಲ್ಲದೇ ಅಪ್ಡೇಟೆಡ್ ವರ್ಟಿಕಲ್ ಟೈಲ್‍ಲೈಟ್ಸ್, ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು 14 ಇಂಚಿನ ಅಲಾಯ್ ವ್ಹೀಲ್ಸ್, ಪ್ಲೋಟಿಂಗ್ ರೂಫ್ ಡಿಸೈನ್, ಮತ್ತು ಒಆರ್‍‍ವಿಎಂನ ಮೇಲೆ ಇಂಟಿಗ್ರೇಟೆಡ್ ಇಂಡಿಕೇಟರ್‍‍ಗಳನ್ನು ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‍ನ ಮೇಲೆ ಕ್ರೋಮ್ ಸ್ಟ್ರಿಪ್ ಹಾಗು 'Wagon R' ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಹೊಸ ವ್ಯಾಗನ್ ಆರ್ ಕಾರಿನ ಸುತ್ತಳತೆ

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಹಿಂದಿನ ಮಾದರಿಯ ಕಾರಿಗಿಂತಲೂ ಗಾತ್ರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಿಂದಿನ ಮಾದರಿಗಿಂತಲೂ 60ಎಂಎಂ ಉದ್ದ, 145ಎಂಎಂ ಅಗಲ ಮತ್ತು 35ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಅಧಿಕವಾಗಿ ಪಡೆದುಕೊಂಡಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ವೈಶಿಷ್ಟ್ಯತೆಗಳು

ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಎಂಜಿನ್ ಸಾಮರ್ಥ್ಯ

2019ರ ಹೊಸ ವ್ಯಾಗನ್ ಆರ್ ಕಾರಿನ ಎಲ್ಲಾ ವೇರಿಯಂಟ್‍ಗಳು 1.0 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 67ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಮತ್ತು ಕಾರಿನ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ವೇರಿಯಂಟ್ ಕಾರುಗಳು 1.2 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 90 ಬಿಹೆಚ್‍ಪಿ ಮತ್ತು 113ಎನ್ಎಮ್ ಟಾಕ್ರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಎರಡೂ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗು 1.2 ಲೀಟರ್ ಎಂಜಿನ್ ಅನ್ನು ಮಾರುತಿ ಸುಜುಕಿ ಸಂಸ್ಥೆಯ ಮಾರುತಿ ಎಜಿಎಸ್ (ಆಟೋ ಗೇರ್ ಶಿಫ್ಟ್) ಎಂಬ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೊಂಡ ನಾಲ್ಕು ತಿಂಗಳಿನಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ವ್ಯಾಗನ್ ಆರ್

ಸುರಕ್ಷಾ ಸಾಧನಗಳು

ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Maruti Suzuki WagonR Bags 50,000 Bookings In Just Four Months. Read In Kannada
Story first published: Saturday, June 8, 2019, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X