ವರ್ಷದ ವಿಶ್ವ ಕಾರು - ಫೋಕ್ಸ್‌ವ್ಯಾಗನ್ ಗಾಲ್ಫ್

By Nagaraja

2013ರ 'ವರ್ಷದ ವಿಶ್ವ ಕಾರು' ಪ್ರಶಸ್ತಿ ಗೌರವಕ್ಕೆ ಫೋಕ್ಸ್‌ವ್ಯಾಗನ್ ಗಾಲ್ಫ್ ಪಾತ್ರವಾಗಿದೆ. ಈ ಮೂಲಕ ಕಳೆದ ಐದು ವರ್ಷಗಳಲ್ಲಿ ನಾಲ್ಕು ಬಾರಿ ಫೋಕ್ಸ್‌ವ್ಯಾಗನ್ ಕಾರು ತಯಾರಕ ಸಂಸ್ಥೆಯು ಪ್ರಶಸ್ತಿಯನ್ನು ಬಗಲಿಗೇರಿಸಿಕೊಂಡಿದೆ.

ಅಂದ ಹಾಗೆ ಇದು ಎರಡನೇ ಬಾರಿಗೆ ಗಾಲ್ಫ್ ಆವೃತ್ತಿಗೆ ಪ್ರಶಸ್ತಿ ಬಂದಿದೆ. ಅದೇ ಹೊತ್ತಿಗೆ ಇತರ ಪ್ರಶಸ್ತಿಗಳು ಈ ಕೆಳಗಿನಂತಿವೆ.

ವರ್ಷದ ವಿಶ್ವ ಕಾರು: ಫೋಕ್ಸ್‌ವ್ಯಾಗನ್ ಗಾಲ್ಫ್
ವರ್ಷದ ಹಸಿರು ಕಾರು: ಟೆಸ್ಲಾ ಮಾಡೆಲ್ ಎಸ್ (Tesla Model S)
ವರ್ಷದ ಅತ್ಯುತ್ತಮ ವಿನ್ಯಾಸ ಕಾರು: ಜಾಗ್ವಾರ್ ಎಫ್-ಟೈಪ್
ವರ್ಷದ ಅತ್ಯುತ್ತಮ ನಿರ್ವಹಣೆ ಕಾರು: ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್

 2013 World Car of the Year Awards

ಒಟ್ಟು 25 ರಾಷ್ಟ್ರಗಳ 66 ತೀರ್ಪುಗಾರರ ಸಮಿತಿಯು ವಿಜೇತ ಕಾರನ್ನು ಘೋಷಿಸಿದೆ. ನ್ಯೂಯಾರ್ಕ್ ಅಂತರಾಷ್ಟ್ರೀಯ ಆಟೋ ಶೋದಲ್ಲಿ ವಿಜೇತರನ್ನು ಘೋಷಿಸಲಾಗಿದೆ. ಮರ್ಸಿಡಿಸ್ ಬೆಂಜ್ ಎ ಕ್ಲಾಸ್ ಕೂಡಾ ನಿಕಟ ಪ್ರತಿಸ್ಪರ್ಧಿಯೆನಿಸಿತ್ತು.

 2013 World Car of the Year Awards

ಫೋಕ್ಸ್‌ವ್ಯಾಗನ್ ಸಂಸ್ಥೆಯ ವಿನ್ಯಾಸ ವಿಭಾಗದ ಅಧಿಪತಿ ವಾಲ್ಟರ್ ಡಿಸಿಲ್ವ ಪ್ರಶಸ್ತಿ ಸ್ವೀಕರಿಸಿಕೊಂಡರು. ಅಂದ ಹಾಗೆ ಈ ಏಳನೇ ಜನರೇಷನ್ ಗಾಲ್ಫ್ ಕಾರು ಮುಂದಿನ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವೇಶ ಮಾಡುತ್ತಿದೆ.

 2013 World Car of the Year Awards

ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಸೇರಿದಂತೆ 42 ಕಾರುಗಳನ್ನು ಹಿಂದಿಕ್ಕಿರುವ ಫೋಕ್ಸ್‌ವ್ಯಾಗನ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

 2013 World Car of the Year Awards

ಈ ಹಿಂದೆ 2009ರಲ್ಲಿ ಫೋಕ್ಸ್‌ವ್ಯಾಗನ್ ಗಾಲ್ಫ್, 2010ರಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ 2012ರಲ್ಲಿ ಫೋಕ್ಸ್‌ವ್ಯಾಗನ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು.

 2013 World Car of the Year Awards

ಇನ್ನು ವರ್ಷದ ಅತ್ಯುತ್ತಮ ನಿರ್ವಹೆಯ ಕಾರು ಪ್ರಶಸ್ತಿಗೆ ಫೋರ್ಷೆ ಬಾಕ್ಸ್ಟರ್/ಕೇಮ್ಯಾನ್ ಅರ್ಹವಾಗಿದೆ.

 2013 World Car of the Year Awards

ಮೂರು ಫೈನಲಿಸ್ಟ್ ಸೇರಿದಂತೆ ಒಟ್ಟು 22 ಕಾರುಗಳನ್ನು ಹಿಂದಿಕ್ಕಿರುವ ಪೋರ್ಷೆ ಪ್ರಶಸ್ತಿಗೆ ಅರ್ಹವಾಗಿದೆ. ಫೆರಾರಿ ಹಾಗೂ ಟೊಯೊಟಾ ಕಾರುಗಳು ಅಂತಿಮ ಸುತ್ತಿನಲ್ಲಿದ್ದವು.

 2013 World Car of the Year Awards

ಇದು ಸತತ ಎರಡನೇ ಬಾರಿಗೆ ಪೋರ್ಷೆ ಪ್ರಶಸ್ತಿ ಗೆಲ್ಲುತ್ತಿದೆ. ಕಳೆದ ವರ್ಷ ಪೋರ್ಷೆ 911 ಪ್ರಶಸ್ತಿ ಬಗಲಿಗೇರಿಸಿಕೊಂಡಿತ್ತು.

 2013 World Car of the Year Awards

ಹಾಗೆಯೇ ವರ್ಷದ ಅತ್ಯುತ್ತಮ ವಿನ್ಯಾಸ ಕಾರು ಪ್ರಶಸ್ತಿಗೆ ಜಾಗ್ವಾರ್ ಎಫ್-ಟೈಪ್ ಕನ್ವೆರ್ಟಿಬಲ್ ಪಾತ್ರವಾಗಿದೆ.

 2013 World Car of the Year Awards

ಆಸ್ಟನ್ ಮಾರ್ಟಿನ್ ವಾಂಗ್ವಿಷ್ ಹಾಗೂ ಮಜ್ದಾ ಕಾರುಗಳನ್ನು ಹಿಂದಿಕ್ಕಿರುವ ಜಾಗ್ವಾರ್ ಪ್ರಶಸ್ತಿಗೆ ಭಾಜನವಾಗಿದೆ.

 2013 World Car of the Year Awards

ಅಂತೆಯೇ ವರ್ಲ್ಡ್ ಗ್ರೀನ್ ಕಾರು ಪ್ರಶಸ್ತಿಯನ್ನು ಟೆಸ್ಲಾ ಮಾಡೆಲ್ ಎಸ್ ಪಡೆದುಕೊಂಡಿದೆ.

 2013 World Car of the Year Awards

ರೆನೊ ಹಾಗೂ ವೋಲ್ವೋ ವಿದ್ಯುತ್ ಚಾಲಿತ ವಾಹನಗಳನ್ನು ಹಿಂದಿಕ್ಕಿರುವ ಟೆಸ್ಲಾ ಹಸಿರು ಪ್ರಶಸ್ತಿ ಗೆದ್ದುಕೊಂಡಿದೆ.

More from DriveSpark

Article Published On: Friday, March 29, 2013, 14:56 [IST]
English summary
At a press conference held at the New York International Auto Show in association with Bridgestone Corporation the winners of the 2013 World Car of the Year Awards were announced. This year's title went to VW Golf. VW has won the coveted World Car of the Year for the second consecutive year and for the fourth time since 2009.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+