ನಿಮ್ಮ ಕಾರುಗಳಿಗೆ ಸೇಫ್ಟಿ ಗ್ಯಾಜೆಟ್

Car Safety Gadgets
ಸುರಕ್ಷತೆಯ ದೃಷ್ಟಿಯಿಂದ ವಾಹನಗಳಿಗೆ ಸೇಫ್ಟಿ ಗ್ಯಾಜೆಟ್ ಅಳವಡಿಸುವುದು ಅತ್ಯಂತ ಮುಖ್ಯವಾಗುತ್ತದೆ. ಈಗ ಹೆಚ್ಚಿನ ವಾಹನಗಳು ಸೇಫ್ಟಿ ಗ್ಯಾಜೆಟ್ ಗಳೊಂದಿಗೆ ರಸ್ತೆಗಿಳಿಯುತ್ತವೆ. ನಿಮ್ಮ ಕಾರಿನಲ್ಲಿ ಅಗತ್ಯವಾಗಿರಲೇಬೇಕಾದ ಕೆಲವು ಸೇಫ್ಟಿ ಗ್ಯಾಜೆಟ್ ಗಳು ಇಲ್ಲಿವೆ.

ಏರ್ ಬ್ಯಾಗ್: ಅಫಘಾತದಂತಹ ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ ಏರ್ ಬ್ಯಾಗ್ ಪ್ರಮುಖ ಜೀವ ರಕ್ಷಕವಾಗಿ ನಿಮಗೆ ನೆರವಾಗುತ್ತದೆ. ಇನ್ನು ಕೆಲವು ಸಣ್ಣದಾದ ಏರ್ ಬ್ಯಾಗ್ ಗಳು ತಲೆ ಮತ್ತು ದೇಹದ ಇತರ ಭಾಗಗಳಿಗೆ ಅನಪೇಕ್ಷಿತ ನೋವುಂಟಾಗದಂತೆ ತಡೆಯುತ್ತವೆ. ಅದರಲ್ಲಿ ಪ್ರಮುಖವಾಗಿರುವುದು ಸೈಡ್ ಮತ್ತು ಹೆಡ್ ಏರ್ ಬ್ಯಾಗ್. ಇದಕ್ಕಾಗಿ ಐಐಎಚ್ಎಸ್ ನಿಂದ ಮಾನ್ಯತೆ ಪಡೆದ ಏರ್ ಬ್ಯಾಗ್ ಗಳನ್ನು ನಿಮ್ಮ ಕಾರ್ ಗೆ ಅಳವಡಿಸಿಕೊಳ್ಳಿ.

ಎಬಿಎಸ್: ಕಾರ್ ಗೆ ಆಂಟಿ ಲಾಕಿಂಗ್ ಸಿಸ್ಟಮ್ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಒಮ್ಮೆಗೆ ಬ್ರೇಕ್ ಹಾಕಿದಾಗ ವಾಹನದ ಮೇಲಿನ ಹಿಡಿತ ತಪ್ಪದಂತೆ ನೋಡಿಕೊಳ್ಳುತ್ತದೆ.

ಸ್ಟೇರಿಂಗ್ ವೀಲ್ ಕಂಟ್ರೊಲ್: ನೀವು ಒಂದಿಷ್ಟು ಶ್ರೀಮಂತರಾಗಿದ್ದರೆ ಸ್ಟೇರಿಂಗ್-ವೀಲ್ ಕಂಟ್ರೊಲ್ ಎಂಬ ಗ್ಯಾಜೆಟ್ ಅಳವಡಿಸಿಕೊಳ್ಳಬಹುದು. ಸ್ಟೇರಿಂಗ್ ವೀಲ್ ನಲ್ಲಿಯೇ ಆಡಿಯೋ, ಕ್ಲೈಮೆಟ್ ಕಂಟ್ರೊಲ್ ಸಿಸ್ಟಮ್ ಇತ್ಯಾದಿಗಳು ಇರುತ್ತವೆ. ಡ್ರೈವಿಂಗ್ ಮಾಡುವಾಗ ರಸ್ತೆಯ ಮೇಲೆ ದೃಷ್ಟಿಯಿಟ್ಟುಕೊಂಡೇ ಇದನ್ನು ಅಪರೇಟ್ ಮಾಡಬಹುದಾಗಿದೆ.ಸ್ಟೇರಿಂಗ್ ನಲ್ಲಿ ಇವನ್ನೆಲ್ಲ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಉಪಯೋಗಕಾರಿಯಾಗಿದೆ.

ಪಾರ್ಕಿಂಗ್ ಸೆನ್ಸಾರ್: ಕಾರ್ ಪಾರ್ಕಿಂಗ್ ಮಾಡುವಾಗ ಉಂಟಾಗುವ ಅವಘಡಗಳಿಂದ ಪಾರಾಗಲು ನಿಮ್ಮ ಕಾರ್ ಗೆ ಪಾರ್ಕಿಂಗ್ ಸೆನ್ಸಾರ್ ಅಳವಡಿಸುವುದು ಅವಶ್ಯಕ. ಪಾರ್ಕಿಂಗ್ ಮಾಡುವಾದ ಬೇರೆ ವಾಹನ, ಮರ, ಪಾದಚಾರಿಗಳು, ಗೋಡೆ ಅಡ್ಡವಿದ್ದಲ್ಲಿ ಪಾರ್ಕಿಂಗ್ ಸೆನ್ಸಾರ್ ನಿಮಗೆ ಎಚ್ಚರಿಕೆ ನೀಡುತ್ತದೆ.

More from DriveSpark

Article Published On: Sunday, January 30, 2011, 14:22 [IST]
English summary
Everyone want safe driving. some safety gadget should give drivers peace of mind and allow them to concentrate on their driving skills. here some safety gadget Airbag, steering wheel control, for your car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+