ಉತ್ತಮ ಡ್ರೈವರ್ ನೀವಾಗಿ...ನಮ್ಮ ಸಲಹೆ ಕೇಳಿ

Safe driving Tips
ರಸ್ತೆಯಲ್ಲಿಂದು ದಿನನಿತ್ಯ ಲೆಕ್ಕವಿಲ್ಲದಷ್ಟು ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಪ್ರಮುಖ ಕಾರಣ ಚಾಲಕನ ನಿರ್ಲಕ್ಷ್ಯ, ಅವಸರ, ತಪ್ಪು ನಿರ್ಧಾರ ಎಂಬುದನ್ನು ಮರೆಯಬಾರದು.

ಅಪಘಾತ ಎಂಬುದು ಆಕಸ್ಮಿಕ ಎಂಬುದು ನಿಜ. ಆದರೆ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ಎಷ್ಟೋ ಜನರ ಅಮೂಲ್ಯ ಪ್ರಾಣ ಉಳಿಸಬಹುದು. ನಿಮ್ಮನ್ನೇ ನೀವು ಸುಮ್ಮನೆ ಪ್ರಶ್ನಿಸಿಕೊಳ್ಳಿ. ನೀವು ಉತ್ತಮ ಚಾಲಕರೇ? ಅಂತ. ಇಲ್ಲೊಂದಿಷ್ಟು ಪಾಯಿಂಟ್ ಗಳಿವೆ. ಇದನ್ನು ನಿಮ್ಮ ಡ್ರೈವಿಂಗ್ ಗೆ ಅಳವಡಿಸಿಕೊಂಡು ನೋಡಿ.

* ನಿಮ್ಮ ಗಮನ ಪೂರ್ತಿ ಡ್ರೈವಿಂಗ್ ಮೇಲಿರಲಿ: ಮನಸು ಚಂಚಲ ಹೌದು. ಆದರೆ ರಸ್ತೆಯ ಮೇಲೆ ಗಮನ ಹರಿಸದೇ ಡ್ರೈವಿಂಗ್ ಮಾಡಿದರೆ ಅಪಘಾತ ಗ್ಯಾರಂಟಿ. ಫೋನ್ ನಲ್ಲಿ ಮಾತನಾಡುತ್ತ, ಐಪ್ಯಾಡ್ ಸಂಗೀತ ಕೇಳುತ್ತ, ತಿಂಡಿತಿನಿಸು ತಿನ್ನುತ್ತ, ಆಗಾಗ ಸ್ಟೀರಿಯೋದಲ್ಲಿ ಹಾಡು ಬದಲಾಯಿಸುತ್ತ ಚಂಚಲ ಚಿತ್ತರಾಗಿ ಡ್ರೈವ್ ಮಾಡಬೇಡಿ. ಸದಾ ನಿಮ್ಮ ಗಮನ ರಸ್ತೆಯ ಮೇಲಿರಲಿ.

* ಟ್ರಾಫಿಕ್ ನಿಯಮಗಳಿಗೆ ಬದ್ಧರಾಗಿರಿ: ಕೆಲವರಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಡ್ರೈವ್ ಮಾಡುವ ಹುಚ್ಚು. ಸಿಗ್ನಲ್ ಬಿದ್ದರೂ ಗಾಡಿ ಚಲಾಯಿಸುವುದು, ಪಾದಚಾರಿಗಳ ಮಾರ್ಗದಲ್ಲಿ ಗಾಡಿ ನಿಲ್ಲಿಸುವುದು, ಅತ್ಯಧಿಕ ವೇಗದಲ್ಲಿ ಹೋಗುವುದು ಇವೆಲ್ಲ ಕೆಲವು ಉದಾಹರಣೆಗಳು. ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬ ಚಾಲಕನ ಆದ್ಯ ಕರ್ತವ್ಯ.

* ವೇಗ ಮಿತಿ: ಮಿತಿ ಮೀರಿದ ವೇಗ ಸಾವಿಗೆ, ಅಪಾಯಕ್ಕೆ ಅಹ್ವಾನ ಎಂಬುದು ಗೊತ್ತಿದ್ದರೂ ಇರುವಷ್ಟು ಆಕ್ಸಿಲೇಟರ್ ಅದುಮಿ ಡ್ರೈವ್ ಮಾಡುವ ಹುಚ್ಚು ಕೆಲವರಿಗೆ. ಅತ್ಯಧಿಕ ವೇಗವಾಗಿ ಸಾಗುವುದು ಕೇವಲ ನಿಮಗೆ ಮಾತ್ರವಲ್ಲ, ದಾರಿಯಲ್ಲಿ ಸಾಗುವ ಅಮಾಯಕರ ಪ್ರಾಣಕ್ಕೂರಿಗೂ ಅಪಾಯ. ಹೀಗಾಗಿ ಕಣ್ಣು ನೋಟಕ್ಕೆ ಎಷ್ಟು ಕಾಣುತ್ತದೆಯೋ ಅಷ್ಟು ಗುರಿ ಇಟ್ಟುಕೊಂಡು ಅದಕ್ಕೆ ಪೂರಕವಾದ ವೇಗದಲ್ಲಿ ವಾಹನ ಚಲಾಯಿಸಿ.

* ರಾತ್ರಿ ಪ್ರಯಾಣ ಜೋಪಾನ: ರಾತ್ರಿ ನಾವು ಬರೀ ನಮ್ಮ ಹೆಡ್ ಲೈಟ್ ನಡಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಹೀಗಾಗಿ ಇಲ್ಲಿ ಅತೀವೇಗದ ಪ್ರಯಾಣ ಅಪಾಯಕಾರಿ. ಹೆಡ್ ಲೈಟ್ ಡಿಮ್ ಡಿಪ್ ಮಾಡುವುದು, ಲೋ ಬೀಮ್ ಲೈಟ್ ಬಳಸುವುದು ಇತ್ಯಾದಿ ನಿಯಮಗಳನ್ನು ಪಾಲಿಸಿ.

* ಮಳೆಗಾಲದಲ್ಲಿ: ಮಳೆಗಾಲದ ಡ್ರೈವಿಂಗ್ ನಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಮೊದಲ ಮಳೆ ಬಿದ್ದಾಕ್ಷಣ ರಸ್ತೆಗೆ ಗಾಡಿ ಇಳಿಸುವುದು ಅಪಾಯಕಾರಿ. ಬೈಕ್ ಇತ್ಯಾದಿ ದ್ವಿಚಕ್ರ ವಾಹನಗಳು ಈ ಸಮಯದಲ್ಲಿ ಸ್ಕಿಡ್ ಆಗಿ ಬೀಳುತ್ತವೆ.

* ತಾಂತ್ರಿಕ ದೋಷ ಇರದಿರಲಿ: ನಿಮ್ಮ ವಾಹನದಲ್ಲಿ ಯಾವುದಾದರೂ ತಾಂತ್ರಿಕ ಸಮಸ್ಯೆಗಳು ಇಲ್ಲವೆಂಬುದನ್ನು ಪ್ರಯಾಣಕ್ಕೆ ಮುಂಚೆ ಖಚಿತ ಪಡಿಸಿಕೊಳ್ಳಿ. ಅಂದರೆ ಟೈರ್ ಸವೆತ, ಮಳೆಗಾಲದಲ್ಲಿ ವೈಪರ್ ಸರಿಯಾಗಿ ಕೆಲಸ ಮಾಡದಿರುವುದು , ಹೆಡ್ ಲೈಟ್ ಸಮಸ್ಯೆ ಇತ್ಯಾದಿ ಸಣ್ಣ ಪುಟ್ಟ ವಿಷಯಗಳಿಗೂ ಗಮನ ನೀಡಿ. ಟ್ಯಾಂಕ್ ನಲ್ಲಿ ಸಾಕಷ್ಟು ಇಂಧನ ಇರುವುದೇ ಖಚಿತ ಪಡಿಸಿಕೊಳ್ಳಿ.

* ಓವರ್ ಟೆಕ್ ಎಚ್ಚರಿಕೆ ಅಗತ್ಯ. ಅಡ್ಡರಸ್ತೆಗಳು ಮತ್ತು ಉಬ್ಬುತಗ್ಗು ರಸ್ತೆ ಇರುವಲ್ಲಿಯಂತೂ ಓವರ್ ಟೆಕ್ ಮಾಡಲೇಬೇಡಿ.

* ಕಾರ್ ನಲ್ಲಿ ದೊಡ್ಡದಾಗಿ ಮ್ಯೂಸಿಕ್ ಹಾಕಬೇಡಿ: ಇದರಿಂದಾಗಿ ಹೊರಗಿನ ಸದ್ದು, ಹಾರ್ನ್ ಕೇಳದೆ ಅಪಘಾತವಾಗುವ ಸಾಧ್ಯತೆ ಇದೆ.

* ಯಾವುದೇ ಕಡೆಗೆ ಗಾಡಿ ತಿರುಗಿಸಿದಾಗ ಇಂಡಿಕೇಟರ್ ಹಾಕಲು ಮರೆಯಬೇಡಿ.

* ಓವರ್ ಲೋಡ್ ಮಾಡಬೇಡಿ: ನಿಮ್ಮ ವಾಹನದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಜನರನ್ನು ಅಥವಾ ಸರಕುಗಳನ್ನು ತುಂಬಿಸಿಕೊಳ್ಳಬೇಡಿ.

* ಎಲ್ಲಕ್ಕಿಂತ ಮುಖ್ಯವಾಗಿ ಕುಡಿದು ಡ್ರೈವ್ ಮಾಡಬೇಡಿ.

ಎಲ್ಲರೂ ಒಳ್ಳೆಯ ಚಾಲಕರಾದರೆ ಇಡೀ ವಿಶ್ವಕ್ಕೆ ನಾವು ಮಾದರಿಯಾಗಬಹುದು. ರಸ್ತೆಯಲ್ಲಿ ಹರಿಯುವ ರಕ್ತ ಕಡಿಮೆಯಾಗಬಹುದು ಅಲ್ಲವೇ?

More from DriveSpark

Article Published On: Tuesday, February 1, 2011, 18:00 [IST]
English summary
Are you a safe driver? We do it in the car by talking on a cell phone, drinking coffee or simply changing the radio station. how to safe vehicle drive there is some tips and Techniques.
Read more on tips ಸಲಹೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+