ಆಟಿಕೆ ಅಂಗಡಿಯ ಮುಂದೆ ನಿಂತ ಪುಟ್ಟಿಯಂತೆ ಖರೀದಿ ಗೊಂದಲ

Car Buying Tips
ಆಟಿಕೆಯಂಗಡಿಯ ಮುಂದೆ ನಿಂತು ಯಾವುದನ್ನು ಖರೀದಿಸಬೇಕೆಂದು ತಬ್ಬಿಬ್ಬಾಗಿ ನೋಡುತ್ತಿರುವ ಪುಟ್ಟ ಪುಟ್ಟಿಯ ಸಂದಿಗ್ಧತೆ ವಾಹನ ಖರೀದಿಸಲು ನಿರ್ಧರಿಸಿರುವ ನಿಮ್ಮಲ್ಲೂ ಕಾಡಬಹುದು. ನನಗೆ ಸೂಕ್ತ ಕಾರ್ ಯಾವುದು? ವೇಗ ಅಥವಾ ಸ್ಥಳಾವಕಾಶ ಮುಖ್ಯನಾ? ಕಾರ್ ಸುಂದರವಾಗಿರಬೇಕೆ? ಅಥವಾ ಸ್ಥಳಾವಕಾಶ ಜಾಸ್ತಿ ಇರಬೇಕೆ? ಹೊಸ ಕಾರ್ ಖರೀದಿಸಲೇ? ಅಥವಾ ಹಳತು ಖರೀದಿಸಲೇ? ಪೆಟ್ರೋಲ್ ಕಾರ್ ಅಥವಾ ಡೀಸಲ್ ಕಾರ್ ಖರೀದಿಸಲೇ? ಇತ್ಯಾದಿ ಪ್ರಶ್ನೆಗಳು ಕಾಡಬಹುದು.

ಫ್ಯಾಮಿಲಿ ಸವಾರಿಗೆ ರೇಸ್ ಕಾರ್ ಅಗತ್ಯವಿಲ್ಲ. ಹೀಗಾಗಿ ನೀವು ಅತ್ಯಧಿಕ ಸ್ಪೀಡ್ ಗೆ ಹೆಚ್ಚು ಮಹತ್ವ ನೀಡಬೇಕಿಲ್ಲ. ಅದೇ ರೀತಿ ನಗರಗಳಲ್ಲಿ ಪ್ರಯಾಣ ಮಾಡುವ ನಿಮಗೆ ಆನೆ ಗಾತ್ರದ ಕಾರ್ ನ ಅಗತ್ಯನೂ ಇಲ್ಲ. ನೀವು ಗ್ರಾಮೀಣ ಪ್ರದೇಶದಲ್ಲಿ ಇರುವುದಾದರೆ, ನಿಮ್ಮ ಕುಟುಂಬದ ಗಾತ್ರ ದೊಡ್ಡದಾಗಿದ್ದರೆ ನಿಮಗೆ ದೊಡ್ಡ ಕಾರ್ ಸೂಕ್ತ. ಇಲ್ಲದಿದ್ದರೆ ಸಣ್ಣ ಕಾರ್ ಗೆ ಹಾಯ್ ಅಂತ ಹೇಳಬಹುದು. ಪ್ರತಿದಿನ ಕನಿಷ್ಠ 10 ಕಿ.ಮೀ. ಪ್ರಯಾಣ ಮಾಡದವರು ಮೈಲೇಜ್ ವಿಷಯ ಚಿಂತಿಸುವ ಅಗತ್ಯನೂ ಇಲ್ಲ.

ಹೊಸತು ಅಥವಾ ಹಳತು: ಕೆಲವರಿಗೆ ಹಳೆಯ ಕಾರ್ ಗಳೆಂದರೆ ಅಲರ್ಜಿ. ಶೋರೂಂಗೆ ಹೋಗಿ ಖರೀದಿಸಿದರೆ ಮಾತ್ರ ತೃಪ್ತಿ. ಇನ್ನು ಕೆಲವರು ಹೊಸತಿನತ್ತ ಮುಖ ಮಾಡದೇ ಸೆಕೆಂಡ್ ಹ್ಯಾಂಡ್ ವಾಹನಗಳಲ್ಲಿಯೇ ಕಾಲ ಕಳೆಯುತ್ತಾರೆ. ಹೊಸ ಕಾರ್ ಗೆ ಹೊಸ ಕಾರೇ ಸಾಟಿ. ಅದರ ಡ್ರೈವಿಂಗ್ ಅನುಭವ ಕೂಡ ಅನನ್ಯವಾಗಿರುತ್ತದೆ. ಆದರೆ ದರದ ವಿಷ್ಯದಲ್ಲಿ ಮಾತ್ರ ಸೆಕೆಂಡ್ ಹ್ಯಾಂಡ್ ತುಂಬಾ ಅಗ್ಗ. ನೀವು ಹೊಸ ವಾಹನವನ್ನು ಶೋರೂಂನಿಂದ ಖರೀದಿಸಿ ಸ್ವಲ್ಪ ಹೊತ್ತಾದರೂ ಅದರ ದರ ಶೇ. 20ರಷ್ಟದರೂ ಕಡಿಮೆಯಾಗಿರುತ್ತದೆ. ಯಾಕೆಂದರೆ ಆಗ ಅದು ಸೆಕೆಂಡ್ ಹ್ಯಾಂಡ್ ವಾಹನವಾಗಿರುತ್ತದೆ. ಕೆಲವೊಮ್ಮೆ ಡೀಲರ್ ಬಳಿ ದೊರಕುವ ಸೆಕೆಂಡ್ ಹ್ಯಾಂಡ್ ವಾಹನಗಳು ಕೆಲವು ತಿಂಗಳು ಹಳೆಯದಾಗಿರುತ್ತವೆ ಅಷ್ಟೇ.

ಹೊಸ ಕಾರ್ ಖರೀದಿದಾರರು ಎಂಜಿನ್, ಟ್ರಾನ್ಸ್ ಮಿಷನ್, ಕಲರ್, ಇಂಟಿರಿಯರ್ ವಿನ್ಯಾಸ ಮತ್ತು ಅದರಲ್ಲಿರುವ ಆಕ್ಸೆಸರಿಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸುತ್ತಾರೆ. ಆದರೆ ಸೆಕೆಂಡ್ ಹ್ಯಾಂಡ್ ಖರೀದಿದಾರರಿಗೆ ಇಂತಹ ಆಯ್ಕೆಗೆ ಹೆಚ್ಚಿನ ಅವಕಾಶವಿಲ್ಲ. ಹೊಸ ಕಾರ್ ಖರೀದಿದಾರರಿಗೆ ವಾರೆಂಟಿಯ ರಕ್ಷೆ ಇರುತ್ತದೆ. ಹೀಗಾಗಿ ವಾಹನದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಜಾಸ್ತಿ ಬಿಲ್ ಬರುತ್ತೆ ಎಂಬ ಭಯ ಅವರಿಗಿಲ್ಲ. ಈಗ ಸೆಕೆಂಡ್ ಹ್ಯಾಂಡ್ ವಾಹನಗಳಿಗೂ ಡೀಲರ್ ಗಳು ವಾರೆಂಟಿ ನೀಡುತ್ತಾರೆ. ಆದರೆ ಹೊಸ ಕಾರ್ ಗಳಿಗೆ ಹೋಲಿಸಿದರೆ ಇದರ ಅವಧಿ ಕಡಿಮೆ. ಹೆಚ್ಚಿನ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ವಾರೆಂಟಿಯೂ ಇರುವುದಿಲ್ಲ.

ಹೊಸ ಝೆನ್ ಅಥವಾ ಎಸ್ಟಿಲೋ ದರದಲ್ಲಿ ಸೆಕೆಂಡ್ ಹ್ಯಾಂಡ್ ಹೋಂಡಾ ಸಿಟಿ ಅಥವಾ ಸ್ಕಾರ್ಪಿಯೋ ಕೂಡ ಖರೀದಿಸಬಹುದಾಗಿದೆ. ಹೊಸ ಕಾರ್ ಖರೀದಿಸುವುದರಲ್ಲಿ ಯಾವುದೇ ರಿಸ್ಕ್ ಇಲ್ಲ. ಸೆಕೆಂಡ್ ಹ್ಯಾಂಡ್ ಖರೀದಿಸಿದರೆ ಅದರ ಹಿಂದಿನ ಓನರ್ ಯಾವ ರೀತಿ ಉಪಯೋಗಿಸಿಕೊಂಡಿದ್ದಾನೆ ಎಂಬುದರ ಅರಿವು ಇರುವುದಿಲ್ಲ. ಕೆಲವರು ವಾಹನವನ್ನು ಎರ್ರಾಬಿರ್ರಿಯಾಗಿ ಉಪಯೋಗಿಸಿದ್ದರೆ, ಕೆಲವರು ಬಹಳ ಜತನದಿಂದ ನೋಡಿಕೊಂಡಿರುತ್ತಾರೆ. ಹೊಸ ವಾಹನ ಖರೀದಿಸುವಾಗ ಈ ಚಿಂತೆ ಇಲ್ಲ.

ಪೆಟ್ರೋಲ್ ಅಥವಾ ಡೀಸಲ್: ಡೀಸಲ್ ಅಥವಾ ಪೆಟ್ರೋಲ್ ಆವೃತ್ತಿಗಳೂ ಕೂಡ ತಮ್ಮದೇ ಆದ ಒಳಿತು ಮತ್ತು ಕೆಡುಕುಗಳನ್ನು ಹೊಂದಿವೆ. ಆದರೆ ಈಗ ಇವೆರಡು ವರ್ಸನ್ ಗಳ ನಡುವೆ ಅಂಥಹ ಅಂತರವೇನಿಲ್ಲ. ಕೆಲವು ಡೀಸಲ್ ಎಂಜಿನ್ ಗಳು ಜಾಸ್ತಿ ಸದ್ದು ಮಾಡುತ್ತವೆ. ಆದರೆ ಇತ್ತೀಚಿನ ಡೀಸಲ್ ಎಂಜಿನ್ ಗಳು ಪೆಟ್ರೊಲ್ ಎಂಜಿನ್ ಗಳಿಗೆ ಸರಿಸಾಟಿಯಾಗಿವೆ. ಹೈಎಂಡ್ ವಾಹನಗಳೂ ಕೂಡ ಈಗ ಡೀಸಲ್ ಎಂಜಿನ್ ನೊಂದಿಗೆ ಬರುತ್ತಿವೆ. ಡೀಸಲ್ ಎಂಜಿನ್ ನಿಂದ ಹೊರಸೂಸುವ ಕಾರ್ಬನ್ ಡೈಯಾಕ್ಷೈಡ್ ಕೂಡ ಕಡಿಮೆ. ಪರಿಸರ ಸ್ನೇಹಿ ಮನಸ್ಸು ನಿಮ್ಮಲ್ಲಿ ಇದ್ದರೆ ಡೀಸಲ್ ಎಂಜಿನ್ ಕಾರ್ ಖರೀದಿಸಬಹುದಾಗಿದೆ.

ಡೀಸಲ್ ಎಂಜಿನ್ ಕಾರ್ ಗಳಿಗೆ ಹೋಲಿಸಿದರೆ ಪೆಟ್ರೊಲ್ ಕಾರ್ ದುಬಾರಿಯಲ್ಲ. ಇಂಧನದಲ್ಲಿ ಡೀಸಲ್ ದರ ಪೆಟ್ರೊಲ್ ಗಿಂತ ಕಡಿಮೆ. ಹಾಗಾಗಿ ಕಿಸೆಗೆ ಒಂಚೂರು ಉಳಿತಾಯವಾಗುತ್ತದೆ. ನೂತನ ಪೆಟ್ರೊಲ್ ಎಂಜಿನ್ ಗಳು ಡೈರೆಕ್ಟ್ ಇಂಜೆಕ್ಷನ್ ಫೀಚರ್ ಗಳೊಂದಿಗೆ ಬರುತ್ತಿವೆ. ಕಾರ್ಯಕ್ಷಮತೆಗೆ ಒತ್ತು ನೀಡುವವರು ಪೆಟ್ರೊಲ್ ಕಾರ್ ಗಳನ್ನೇ ಖರೀದಿಸುತ್ತಾರೆ. ಆದರೆ ಕೆಲವು ಡೀಸಲ್ ಕಾರ್ ಗಳು ಕೂಡ ಪೆಟ್ರೊಲ್ ಎಂಜಿನ್ ನಷ್ಟೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ.

ಕೆಲವು ಡೀಸಲ್ ಕಾರ್ ಗಳು ಹೆಚ್ಚು ಮೈಲೇಜ್ ಕೂಡ ನೀಡುತ್ತವೆ. ಆದರೆ ವರ್ಷಕ್ಕೆ 13 ಸಾವಿರದಿಂದ 15 ಸಾವಿರ ಕಿ.ಮೀ.ಯಷ್ಟು ವಾರ್ಷಿಕ ಪ್ರಯಾಣ ಇಲ್ಲದಿದ್ದರೆ ನಿಮಗೆ ನಷ್ಟವಾಗಬಹುದು. ಹೀಗಾಗಿ ಜಾಸ್ತಿ ಪ್ರಯಾಣ ಮಾಡದವರಿಗೆ ಪೆಟ್ರೊಲ್ ಎಂಜಿನ್ ಆಯ್ಕೆ ಉತ್ತಮ. ವರ್ಷಕ್ಕೆ ಕನಿಷ್ಠ 10 ಸಾವಿರ ಕಿ.ಮೀ. ಪ್ರಯಾಣ ಮಾಡುವರು ನೀವಲ್ಲದಿದ್ದರೆ ಡೀಸಲ್ ಎಂಜಿನ್ ಕುರಿತು ಯೋಚಿಸಬೇಡಿ. ಒಟ್ಟಾರೆ ಹೊಸ ಕಾರ್ ಅಥವಾ ಹಳೆ ಕಾರ್ ಖರೀದಿಸುವುದು, ಪೆಟ್ರೋಲ್ ಅಥವಾ ಡೀಸಲ್ ಎಂಜಿನ್ ಕಾರ್ ಆಯ್ಕೆ ಮಾಡಿಕೊಳ್ಳುವ ಮುನ್ನ ಒಂದಿಷ್ಟು ಯೋಚನೆ ಮಾಡುವುದು ಅತ್ಯಂತ ಅಗತ್ಯ. ಕಾರ್ ಖರೀದಿಸುವುದೆಂದರೆ ಒಂದಿಷ್ಟು ಗೊಂದಲ ಸಹಜ. ಥೇಟ್ ಆಟಿಕೆ ಅಂಗಡಿಯ ಮುಂದೆ ನಿಂತು ಯಾವುದನ್ನು ಖರೀದಿಸಲಿ ಎಂಬ ಗೊಂದಲದಲ್ಲಿರುವ ಪುಟ್ಟ ಪುಟ್ಟಿಯಂತೆ.

More from DriveSpark

Article Published On: Saturday, February 26, 2011, 16:52 [IST]
English summary
Are you planning to buy a new car? If so, please spend few minuets on what is right and what is not right for you. Your taste, your valet. When you go our shopping for a new car, what are your priorities? Is it space, speed, looks or utility? Petrol or diesel? Check out, watch out.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+