ಅವನು ಹೆಂಡತಿಗಿಂತ ಜಾಸ್ತಿ ಅದನ್ನು ಪ್ರೀತಿಸುತ್ತಿದ್ದಾನೆ..!

ನನ್ನಲ್ಲೂ ಒಂದು ಬೈಕ್ ಇತ್ತು. ಹೀರೋ ಹೋಂಡಾ ಕಂಪನಿಯದ್ದು. ತೆಗೆದು 6 ತಿಂಗಳಲ್ಲಿಯೇ ಹಳೆಯ ಬೈಕ್ ನಂತ್ತಾಗಿತ್ತು. ನನ್ನ ರಾಷ್ ರೈಡ್ ನಿಂದ ಎಕ್ಕಟ್ಟು ಹೋಗಿತ್ತು. ಮತ್ತೆ ನಾನು ರಾಜೇಶನ ತರಹ ಅದನ್ನು ಕೇರ್ ತೆಗೆದುಕೊಳ್ಳುತ್ತಿರಲಿಲ್ಲ. ಅದನ್ನು ವಾಷ್ ಮಾಡಲು ನನ್ನಲ್ಲಿದ್ದ ಸಮಯ ಸಾಕಾಗುತ್ತಿರಲಿಲ್ಲ. ಬೈಕನ್ನು ತಿಂಗಳಿಗೆ ಒಮ್ಮೆ ತೊಳೆದರೆ ಅದೇ ನನ್ನ ದೊಡ್ಡ ಸಾಧನೆ. ನಿಜ ಹೇಳಬೇಕೆಂದರೆ ನನ್ನ "ಬೈಕ್ ಕೇರ್" ಬಗ್ಗೆ ಕಣ್ಣು ತೆರೆಸಿದ್ದೇ ಆತ. ಅವ ಅಷ್ಟು ಹೇಳಿದ ಮೇಲೆ, ಅವನ ಬುದ್ದಿವಾದ, ಬೈಗುಳ ಕೇಳಿ ಕೇಳಿ ಈಗ ಬೈಕನ್ನು ವಾರಕ್ಕೊಮ್ಮೆ ತೊಳೆಯುತ್ತಿದ್ದೇನೆ.
ಮುಂಜಾನೆ ಎದ್ದು ಹಲ್ಲುಜ್ಜವ ಮುನ್ನ ಆತ ಮೊದಲು ಬಂದು ನೋಡುವುದು ಪಲ್ಸರ್ ಬೈಕನ್ನು. ಅದರ ಬಳಿ ಬಂದು ಅದಕ್ಕೆ ಒಂದೆರಡು ಸುತ್ತು ಹಾಕಿ ಎಲ್ಲ ಸರಿಯಾಗಿದೆಯಾ ಅಂತ ನೋಡಿ ವಾಪಸ್ಸಾಗುತ್ತಿದ್ದ. ಅವ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡ್ತಾನೆ ಅನ್ನೋದು ಗೊತ್ತಿಲ್ಲ. ಆದರೆ ದಿನಕ್ಕೊಮ್ಮೆ ಬೈಕ್ ವಾಷ್ ಮಾಡಲು ಮರೆಯುತ್ತಿರಲಿಲ್ಲ. ದಿನಕ್ಕೆ ಕಡಿಮೆಯೆಂದರೂ ಒಂದು ಗಂಟೆಯಾದರೂ ಬೈಕ್ ಕೇರ್ ಗೆ ವ್ಯಯಿಸುತ್ತಿದ್ದ.
ಬೈಕ್ ಕುರಿತಾಗಿನ ಆತನ ಜ್ಞಾನ ಅಚ್ಚರಿ ಹುಟ್ಟಿಸುತ್ತಿತ್ತು. ಪೆಟ್ರೊಲ್ ಟ್ಯಾಂಕ್ ಕನೆಕ್ಷನ್ ನಲ್ಲಿ ಲೀಕೆಜ್ ಇದೆನಾ ಅಂತ ನೋಡೋದು. ಎಂಜಿನ್ ಆಯಿಲ್ ಲೆವೆಲ್ ನೋಡೋದು. ಟೈರ್, ಕಾರ್ಬ್ಯೋರೇಟರ್, ಏರ್ ಫಿಲ್ಟರ್ ಹೀಗೆ ಎಲ್ಲವನ್ನೂ ಕೂಲಂಕುಶವಾಗಿ ನೋಡ್ತಾ ಇದ್ದ. ಸಮಯ ಸಿಕ್ಕರೆ ಹೇಗೆಲ್ಲ ಬೈಕ್ ಕೇರ್ ತಗೋ ಬೇಕು ಅಂತ ನನಗೆ ಟಿಪ್ಸ್ ಹೇಳ್ತಾ ಇದ್ದ. ಅಂದೊಮ್ಮೆ ನಾನು ಪೈಪ್ ನಲ್ಲಿ ಫಾಸ್ಟ್ ಆಗಿ ನೀರು ಬಿಡುತ್ತ ನನ್ನ ಬೈಕ್ ತೊಳೆಯುತ್ತಿದ್ದೆ. ಅದಕ್ಕೆ ನಂಗೆ ಆತ ಬುದ್ದಿ ಹೇಳಿದ. ಹಾಗೇ ವೇಗವಾಗಿ ನೀರು ಬಿಟ್ಟು ತೊಳೆದರೆ ಬೈಕ್ ನ ಪ್ರಮುಖ ಭಾಗಗಳಿಗೆ ಹಾನಿಯಾಗುತ್ತೆ ಅಂದ. ಆಮೇಲೆ ನಾನೂ ಹಾಗೇ ಮಾಡೋದನ್ನು ಬಿಟ್ಟೆ.
ಲಿಕ್ವಿಡ್ ಸೋಪ್ ಅಥವಾ ಬೈಕ್ ತೊಳೆಯುವ ಶ್ಯಾಂಪು, ಕ್ಲೀನ್ ಮಾಡಲು ಕಾಟನ್ ಬಟ್ಟೆ, ಗ್ಲಾಸ್ ಮತ್ತು ಪ್ಲಾಸ್ಟಿಕ್ ಕ್ಲೀನರ್, ಟಾರ್ ರಿಮೂವರ್, ವ್ಯಾಕ್ಸ್ ಮತ್ತು ಪಾಲೀಶ್ ಇಷ್ಟು ಆತನಲ್ಲಿ ಯಾವತ್ತೂ ರೆಡಿ ಇರುತ್ತಿತ್ತು. ಪೇಂಟ್ ಮಾಡಿದ ಭಾಗವನ್ನು ಪೇಪರ್ ಟವಲ್ ನಲ್ಲಿ ಉಜ್ಜ ಬಾರದೆಂದು ಅವನೇ ನನಗೆ ಹೇಳಿಕೊಟ್ಟದ್ದು.
ಅವನ ಮತ್ತೊಂದು ವಿಶೇಷ ಗುಣ ಎಂದರೆ ಆತ ಬೈಕನ್ನು ಇತರರಿಗೆ ರೈಡ್ ಮಾಡೋಕೆ ನೀಡುವುದೇ ಇಲ್ಲ. ಸಾಕಷ್ಟು ಜಾಗ್ರತೆಯಿಂದ ರೈಡ್ ಮಾಡುತ್ತಾನೆ. ಪ್ರತಿದಿನ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಮೊನ್ನೆ ಒಮ್ಮೆ ಇವನು ಬೈಕ್ ನಲ್ಲಿ ಸಾಗುತ್ತಿದ್ದಾಗ ಕಾರಿನವನೊಬ್ಬ ಬಂದು ಹಿಂದಿನಿಂದ ತಾಗಿ ಕೊಂಡು ಹೋದ. ಇಂಡಿಕೇಟರ್ ಕಳಚಿ ಬಿದ್ದಿತ್ತು. ಬೈಕ್ ಪೆಂಟ್ ಮೇಲೆ ಒಂದಿಷ್ಟು ಗೀರು ಕೂಡ ಬಿದ್ದಿತ್ತು. ಎಲ್ಲಿತ್ತೋ ಇವನ ಕೋಪ. ಸೀದಾ ಹೆಲ್ಮೆಟ್ ಕೈಯಲ್ಲಿಡಿದುಕೊಂಡು ಆ ಕಾರನ್ನು ಓವರ್ ಟೆಕ್ ಮಾಡಿ, ಹೆಲ್ಮೆಟ್ ನಿಂದ ಕಾರಿನ ಕನ್ನಡಿಗೆ ಹೊಡೆದಿದ್ದ. ಆಮೇಲೆ ಅಲ್ಲಿ ನಡೆದ ಜಗಳ ನೋಡಬೇಕಿತ್ತು.
ಹೇಳೋಕೆ ಮರೆತೆ. ಅವನಿಗೆ ಮದುವೆಯಾಗಿದೆ. ಚಂದದ ಹೆಂಡತಿ ಇದ್ದಾಳೆ. ಆದರೆ ಇವನು ಜಾಸ್ತಿ ಪ್ರೀತಿಸೋದು ಹೆಂಡತಿಗಿಂತ "ತನ್ನ ಬೈಕ"ನ್ನು ಅಂತ ಇಡೀ ವಠಾರದವರಿಗೆ ಗೊತ್ತು!! (ತನ್ನ ಗೆಳೆಯ ರಾಜೇಶ್ ಬೈಕ್ ಪ್ರೀತಿ ಕುರಿತು ಬರೆದು ಕಳುಹಿಸಿದವರು ಭರತೇಶ್ ಮಂಗಳೂರು).


Click it and Unblock the Notifications








