ಭಾರತದಲ್ಲಿ ಅತಿಯಾಗಿ ಇಷ್ಟಪಡುವ ಕೆಲಸಕ್ಕೆ ಬಾರದ ಅಕ್ಸೆಸೊರಿಗಳಿವು! ಸೇಫ್ಟಿ ಓಕೆ - ಶೋಕಿ ಯಾಕೆ?
ಮಾರುಕಟ್ಟೆಯಲ್ಲಿ ಸಿಗುವ ಕಾರಿನ ಬಿಡಿಭಾಗಗಳಲ್ಲಿ ಕೆಲವು ವರದಾನವಾಗಿದ್ದರೆ, ಇನ್ನೂ ಕೆಲವು ಇತರ ರಸ್ತೆ ಬಳಕೆದಾರರಿಗೆ ಅಪಾಯಕಾರಿಯಾಗಬಹುದಾದ ಕಾರಣ ಬ್ಯಾನ್ ಆಗಿವೆ. ಅಂದಹಾಗೆ, ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಟಾಪ್ 5 ಅನುಪಯುಕ್ತ ಕಾರ್ ಬಿಡಿಭಾಗಗಳ ಪಟ್ಟಿ ಇಲ್ಲಿದೆ. ಈ ಬಿಡಿಭಾಗಗಳು ನಿಷ್ಪ್ರಯೋಜಕವೆಂದು ಅರ್ಥವಲ್ಲ, ಇತರ ರಸ್ತೆ ಬಳಕೆದಾರರಿಗೆ ಅಪಾಯಕಾರಿ.
ದೊಡ್ಡ ಗಾತ್ರದ ಟೈರುಗಳು ಮತ್ತು ವೀಲ್ಗಳು: ದೊಡ್ಡ ಅಲಾಯ್ ವೀಲ್‌ಗಳು ಮತ್ತು ದೊಡ್ಡ ಗಾತ್ರದ ಟೈರ್‌ಗಳು ಭಾರತದಲ್ಲಿನ ಕಾರು ಉತ್ಸಾಹಿಗಳಲ್ಲಿ ಸಾಮಾನ್ಯ ಮಾಡಿಫೈಗಳಾಗಿದ್ದರೂ, ಅವು ಮೈಲೇಜ್, ಪರ್ಫಾಮೆನ್ಸ್ ಮತ್ತು ಕಾರಿನ ನಿರ್ವಹಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಇದಲ್ಲದೆ, ಪೊಲೀಸರ ಗಮನವನ್ನು ಸೆಳೆಯುತ್ತವೆ. ವಿಶೇಷವಾಗಿ ಕೇರಳದಂತಹ ರಾಜ್ಯಗಳಲ್ಲಿ ಭಾರಿ ದಂಡ ವಿಧಿಸಲಾಗುತ್ತದೆ. ಇದು ಅನುಪಯುಕ್ತ ಕಾರು ಬಿಡಿಭಾಗಗಳಲ್ಲಿ ಒಂದಾಗಿದೆ.

ಹೆಚ್ಚುವರಿ ಲೈಟ್‌ಗಳು: ಹೆಚ್ಚುವರಿ ಲೈಟ್‌ಗಳನ್ನು ಹೊಂದಿರುವ ಕಾರುಗಳು ರಾತ್ರಿಯಲ್ಲಿ ಚಾಲನೆ ಮಾಡುವಾಗ ಅಪಾಯವನ್ನುಂಟುಮಾಡುತ್ತವೆ. ರಸ್ತೆ ಅಪಘಾತಗಳು ಮತ್ತು ಇತರ ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿರುವುದರಿಂದ, ಭಾರಿ ದಂಡವನ್ನು ಸಹ ಪಡೆಯಬಹುದು. ಅಲ್ಲದೆ, ಸ್ಟ್ರೋಬಿಂಗ್ ಲೈಟ್‌ಗಳನ್ನು ಹೊಂದಿರುವ ಕಾರುಗಳು ಸುಲಭವಾಗಿ ಪೊಲೀಸರ ಗಮನ ಸೆಳೆಯುತ್ತವೆ.
ಬುಲ್ ಬಾರ್‌ಗಳು: ತಮ್ಮ ಕಾರುಗಳಿಗೆ ಬುಲ್ ಬಾರ್ ಪಡೆದಯುವುದು ಅನೇಕ ಭಾರತೀಯರಿಗೆ ನೆಚ್ಚಿನ ಕಾರ್ ಮಾಡಿಫೈ ಆಗಿದೆ. ಬುಲ್ ಬಾರ್‌ಗಳು ಹೆಚ್ಚುವರಿ ರಕ್ಷಣೆಯಂತೆ ತೋರುತ್ತಿದ್ದರೂ, ವಾಸ್ತವದಲ್ಲಿ ಇನ್ನೊಂದು ವಾಹನದೊಂದಿಗೆ ಡಿಕ್ಕಿ ಆದ ಸಂದರ್ಭದಲ್ಲಿ ಅವು ಏರ್‌ಬ್ಯಾಗ್ ಸೆನ್ಸಾರ್‌ಗಳಿಗೆ ಅಡ್ಡಿಪಡಿಸುತ್ತವೆ. ಕಾರಿನೊಳಗೆ ಇರುವವರ ಸುರಕ್ಷತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಎಲ್ಲಾ ಕಾರು ಮಾಲೀಕರು ತಿಳಿಯಬೇಕಾದ ಸಂಗತಿ.

ಅಲ್ಲದೆ, ಈ ಬುಲ್‌ಬಾರ್‌ಗಳು ಪ್ರಸ್ತುತ ಕಾನೂನುಬದ್ಧವೆಂದು ಪರಿಗಣಿಸದ ಕಾರಣ ಕಾರಿಗೆ ಬುಲ್‌ಬಾರ್‌ಗಳನ್ನು ಹೊಂದಿದ್ದರೆ ಪೊಲೀಸರಿಂದ ದಂಡ ಹಾಕಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ಅಂದಹಾಗೆ, ಬುಲ್‌ಬಾರ್ ಪ್ರಸ್ತುತ ಅತ್ಯಂತ ಅನುಪಯುಕ್ತ ಕಾರು ಪರಿಕರಗಳಲ್ಲಿ ಒಂದಾಗಿದೆ. ಇದನ್ನು ಶೋಕಿ ಮಾಡಲು ಬಳಸಿದರೂ ತಮ್ಮ ಜೀವಕ್ಕೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ಮುಖ್ಯವಲ್ಲವೇ?
ದೊಡ್ಡ ಸ್ಪಾಯ್ಲರ್‌ಗಳು: ಅತಿರಂಜಿತ ಮಾರ್ಪಾಡುಗಳನ್ನು ಹೊಂದಿರುವ ದೊಡ್ಡ ಸ್ಪಾಯ್ಲರ್ ಕಾರುಗಳು ತಕ್ಷಣವೇ ಪೊಲೀಸರ ಗಮನವನ್ನು ಸೆಳೆಯುತ್ತವೆ. ದಂಡವನ್ನು ಪಡೆಯುವ ಸಾಧ್ಯತೆಗಳು ಕೂಡ ತುಂಬಾ ಹೆಚ್ಚು. ಅಲ್ಲದೆ, ದೊಡ್ಡ ಸ್ಪಾಯ್ಲರ್‌ಗಳು ಸಾಕಷ್ಟು ಡ್ರ್ಯಾಗ್‌ಗೆ ಕಾರಣವಾಗಬಹುದು, ಏನೇ ಅಂದ್ರೂ ಇದು ಕಾರನ್ನು ಸ್ಪೋರ್ಟಿಯಾಗಿ ಕಾಣುವಂತೆ ಮಾಡಿ ಎಲ್ಲರ ಗಮನ ಸೆಳೆದರೂ ಇಂಧನ ದಕ್ಷತೆಯನ್ನು ಕೂಡ ಹಾಗೇ ಕಡಿಮೆ ಮಾಡಬಹುದು.

ಏರ್ ಹಾರ್ನ್‌ಗಳು: ಏರ್ ಹಾರ್ನ್‌ಗಳು ತುಂಬಾ ಜೋರಾದ ಶಬ್ದ ಹಾಗೂ ಸಹ ಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ಅಂತೆಯೇ, ಏರ್ ಹಾರ್ನ್‌ಗಳು ರಸ್ತೆ ಬಳಕೆಗೆ ಕಾನೂನುಬಾಹಿರ, ಈ ಪರಿಕರವನ್ನು ಹೊಂದಿರುವ ಕಾರುಗಳು ಭಾರಿ ದಂಡಕ್ಕೆ ಕಾರಣವಾಗುತ್ತವೆ. ಅಲ್ಲದೇ ಕೆಲವೊಮ್ಮೆ ಈ ಹಾರ್ನ್‌ಗಳನ್ನು ಹೊಂದಿರುವ ಕಾರು ಮಾಲೀಕರೇ ಇದರಿಂದ ತುಸು ಕಿರಿಕಿರಿಯಾಗುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








