ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಸುಲಭನಾ? ಕಷ್ಟಾನಾ?

Car Selling Tips
ನಿಮಗೆ ನಿಮ್ಮ ಹಳೆಯ ಕಾರ್/ಬೈಕ್ ಸಹವಾಸ ಸಾಕೆನಿಸಿದರೆ ಅಥವಾ ಹೊಸತು ಖರೀದಿಸಬೇಕೆಂದಿದ್ದರೆ ಅದನ್ನು ಈಗಲೇ ಮಾರಿಬಿಡಿ. ಆದರೆ ಕಾರ್ ಮಾರಾಟ ಅಂದುಕೊಂಡಷ್ಟು ಸುಲಭವಲ್ಲ. ಹಾಗಂತ ಭಯಪಡುವಷ್ಟು ಕಷ್ಟವೂ ಅಲ್ಲ. ಈ ಇಂಟರ್ ನೆಟ್ ಯುಗದಲ್ಲಿ ಮಾರಾಟವೆಂಬುದು ಬಹಳಷ್ಟು ಸುಲಭವಾಗಿ ಬಿಟ್ಟಿದೆ. ಹಾಗಂತ ಬೇಕಾಬಿಟ್ಟಿಯಾಗಿ ಮಾರಾಟ ಮಾಡಲು ಕೂಡ ಸಾಧ್ಯವಿಲ್ಲ. ಕಾರ್ ಅಥವಾ ಬೈಕ್ ಮಾರಾಟ ಮಾಡೋದು ಹೇಗೆ? ಅನುಸರಿಸಬೇಕಾದ ಎಚ್ಚರಿಕೆಗಳೇನು? ಇತ್ಯಾದಿಗಳ ಕುರಿತು ಒಂದಿಷ್ಟು ಯೋಚಿಸೋದು ಅತ್ಯಂತ ಅಗತ್ಯ.

ಮೊದಲನೆಯದಾಗಿ ನಿಮ್ಮ ಕಾರಿಗೆ ಬೆಲೆ ನಿರ್ಣಯ ಮಾಡಬೇಕು. ಮತ್ತೆ ಎಲ್ಲಿ ಜಾಹೀರಾತು ನೀಡಬೇಕು ಅಂತ ನಿರ್ಧರಿಸಬೇಕು. ಈ ಎರಡಕ್ಕೂ ಆನ್ ಲೈನ್ ಸೂಕ್ತವಾಗಿದೆ. ಇಂಟರ್ ನೆಟ್ ಕ್ಲಾಸಿಫೈಡ್ ಜಾಹೀರಾತು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವುದು ಇಂದು ಹೆಚ್ಚು ಪರಿಣಾಮಕಾರಿ. ದರ ನಿಗದಿ ಮಾಡಲು ಹೆಚ್ಚು ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಇಂಟರ್ ನೆಟ್ ಗೆ ಹೋಗಿ ನಿಮ್ಮಲ್ಲಿರುವಂತಹ ವಾಹನ ಮಾಡೆಲ್ ಗೆ ಇತರರು ಎಷ್ಟು ದರ ನಿಗದಿ ಮಾಡಿದ್ದಾರೆ ಅಂತ ತುಸು ಅಧ್ಯಯನ ಮಾಡಿದರೆ ಸಾಕು. ನಿಮಗೆ ನಿಮ್ಮ ಕಾರಿನ ರೇಟ್ ಕುರಿತು ಒಂದಿಷ್ಟು ಐಡಿಯಾ ಸಿಗುತ್ತದೆ.

ಖರೀದಿದಾರರೆಂದರೆ ದೊಡ್ಡ ಚೌಕಾಶಿಗಾರರೂ ಆಗಿರುತ್ತಾರೆ. ಆಗಾಗಿ ಇದಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡೋದಿಲ್ಲ ಅಂತ ಖಚಿತವಾಗಿ ನಿರ್ಧರಿಸಿಬಿಡಿ. ಕ್ಲಾಸಿಫೈಡ್ ಜಾಹೀರಾತುಗಳಲ್ಲಿ "ಬೆಸ್ಟ್ ಆಫರ್", "ಅಂತಿಮ ದರ", "ಚೌಕಾಶಿ ಇಲ್ಲ" ಹೀಗೆಲ್ಲ ಬರೆಯಬಹುದು.

ಮೊದಲ ನೋಟಕ್ಕೆ ಇಷ್ಟವಾಗುವಂತಿರಲಿ: ಫಸ್ಟ್ ಇಂಪ್ರೆಷನ್ ಬೆಸ್ಟ್ ಇಂಪ್ರೆಷನ್ ಎಂಬ ಮಾತಿದೆ. ನಿಮ್ಮ ಕಾರ್ ಎಷ್ಟು ನೀಟಾಗಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಕಾರಿನ ಲುಕ್ ಹೆಚ್ಚಿಸಲು ಸಾಕಷ್ಟು ಪ್ರಯತ್ನಿಸಿ. ಸಾಧ್ಯವಾದರೆ ಮಾರಾಟಕ್ಕೆ ಮುನ್ನ ಕಾರನ್ನು ಸರ್ವಿಸ್ ಸ್ಟೇಷನ್ ಗೆ ನೀಡಿ. ಅಥವಾ ನೀವು ಮನೆಯಲ್ಲಿಯೇ ಕಾರಿನ ಲುಕ್ ಹೆಚ್ಚಿಸಲು ಇಲ್ಲೊಂದಿಷ್ಟು ಟಿಪ್ಸ್ ಗಳಿವೆ.

* ನಿಮ್ಮ ಕಾರನ್ನು ತೊಳೆಯಿರಿ, ವ್ಯಾಕ್ಸ್ ಹಚ್ಚಿ.
* ಡ್ಯಾಷ್ ಬೋರ್ಡ್ ಇತ್ಯಾದಿಗಳು ನೀಟಾಗಿಡಿ.
* ಟೈರ್ ಗಳನ್ನು ಕ್ಲೀನ್ ಮಾಡಿ. ವೀಲ್ ಗಳನ್ನು ಪಾಲೀಷ್ ಮಾಡಿ.
* ಕಾರ್ ಗ್ಲಾಸನ್ನು ಒಳಗಡೆ ಮತ್ತು ಹೊರಗಡೆಯಿಂದ ಕ್ಲೀನ್ ಮಾಡಿರಿ.
* ಕಾರಿನೊಳಗಿರುವ ಕಸ, ಜಂಕ್ ಇತ್ಯಾದಿಗಳಿರದಂತೆ ನೋಡಿಕೊಳ್ಳಿ.
* ಕೆಟ್ಟು ಹೋಗಿರುವ ಬಲ್ಬ್ ಇತ್ಯಾದಿಗಳನ್ನು ತೆಗೆದು ಹೊಸತು ಹಾಕಿ.
* ಕಾರ್ ಡ್ರೈವ್ ಮಾಡುವಾಗ ಯಾವುದಾದರೂ ಅನಪೇಕ್ಷಿತ ಸೌಂಡ್ ಬರುತ್ತಿದೆಯಾ ಗಮನಿಸಿ. ಸಾಧ್ಯವಾದರೆ ಸರಿಪಡಿಸಿ.
* ಕಾರಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಜೊತೆಯಲ್ಲಿರಲಿ. ಅಂದ್ರೆ ನಿರ್ವಹಣೆ ಬಿಲ್ , ಸರ್ವಿಸ್ ರೆಕಾರ್ಡ್, ಟೈರ್ ಬ್ಯಾಟರಿ ಇತ್ಯಾದಿಗಳ ವಾರೆಂಟಿ ಪತ್ರಗಳು ಜೊತೆಯಲ್ಲಿರಲಿ.

ಜಾಹೀರಾತು ನೀಡುವುದು ಹೇಗೆ?
ಆನ್ ಲೈನ್ ಜಾಹೀರಾತು ನೀಡುವಷ್ಟು ಸುಲಭ ಯಾವುದೂ ಇಲ್ಲ. ವಾಹನ ಮಾರಾಟ, ಖರೀದಿಗೆ ಸಂಬಂಧಿಸಿದ ಸಾಕಷ್ಟು ವೆಬ್ ಸೈಟ್ ಗಳಿವೆ. ಕ್ಲಿಕ್ ಇನ್ ನಂತಹ ಪ್ರಮುಖ ಕ್ಲಾಸಿಫೈಡ್ ತಾಣಗಳು ಉಚಿತವಾಗಿ ಜಾಹೀರಾತು ಪ್ರಕಟಿಸಲು ಅವಕಾಶ ನೀಡುತ್ತವೆ. ಅದು ಕೂಡ ನಮ್ಮೆಲ್ಲರ ನೆಚ್ಚಿನ ಭಾಷೆ ಕನ್ನಡದಲ್ಲಿಯೇ. ಪತ್ರಿಕೆ ಗಳಿಗಿಂತ ಇಂದು ಆನ್ ಲೈನ್ ಜಾಹೀರಾತು ಹೆಚ್ಚು ಜನಪ್ರಿಯ. ನಿಮಗೆ ಸೆಕೆಂಡ್ ಹ್ಯಾಂಡ್ ವಾಹನ ಬೇಕೆಂದರೆ ಅಥವಾ ನಿಮ್ಮಲ್ಲಿರುವ ಕಾರ್, ಬೈಕ್ ಮಾರಾಟ ಮಾಡುವಿರಾದರೆ ಜಸ್ಟ್ ಕ್ಲಿಕ್ ಮಾಡಿದರೆ ಸಾಕು.

ತಕ್ಷಣ ಮಾರಾಟವಾಗಲು ಇಲ್ಲಿದೆ ಟಿಪ್ಸ್
* ಕ್ಲಾಸಿಫೈಡ್ ನಲ್ಲಿ ನಿಮ್ಮ ಕಾರಿನ ಸುಂದರವಾದ ಫೋಟೊ ಹಾಕಿ. ಅದು ಗ್ರಾಹಕರನ್ನು ಸೆಳೆಯುವಂತಿರಲಿ.
* ಕಾರಿನ ಬಗ್ಗೆ ಸಾಕಷ್ಟು ಮಾಹಿತಿ ನೀಡಿ. ಇದು ಸೂಕ್ತ ಗ್ರಾಹಕರನ್ನು ಹುಡುಕಿಕೊಡಲು ನೆರವಾಗುತ್ತದೆ. ಇತ್ತೀಚೆಗೆ ಹೊಸ ಟೈರ್ ಇತ್ಯಾದಿಗಳು ಜೋಡಿಸಿದರೆ ಅದನ್ನೂ ಉಲ್ಲೇಖಿಸಿ.

ಪ್ರಶ್ನೆಗಳಿಗೆ ಉತ್ತರಿಸಲು ರೆಡಿಯಾಗಿ
ಒಮ್ಮೆ ನೀವು ಜಾಹೀರಾತು ಪ್ರಕಟಿಸಿದ ಮೇಲೆ ಎಚ್ಚರಿಕೆಯಿಂದ ಇರಿ. ಗ್ರಾಹಕರು ಯಾವಾಗ ಬೇಕಾದರೂ ಕರೆ ಮಾಡಬಹುದು. ಅದಕ್ಕಾಗಿ ಪುಟ್ಟ ಕಾಗದದಲ್ಲಿ ಕಾರಿನ ಮಾಹಿತಿ ಬರೆದು ಕಿಸೆಯಲ್ಲಿಟ್ಟುಕೊಳ್ಳಿ. ಯಾರಾದರೂ ಕರೆ ಮಾಡಿದರೆ ಸ್ಪಷ್ಟವಾಗಿ, ನೇರವಾಗಿ ಮಾಹಿತಿ ನೀಡಿ. ಅವರ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿ. ಗ್ರಾಹಕರಿಗೆ ಇಷ್ಟು ಗಂಟೆಗೆ ಕಾಲ್ ಮಾಡುವಂತೆ ಅಪಾಯಿಂಟ್ಮೆಂಟ್ ಕೂಡ ನೀಡಬಹುದು. ಮನೆಯಲ್ಲಿ ಗ್ರಾಹಕರನ್ನು ಭೇಟಿಯಾಗಲು ಇಷ್ಟವಿಲ್ಲದಿದ್ದರೆ ಹೊರಗಡೆ ಯಾವುದಾದರೂ ಪ್ರಮುಖ ಸ್ಥಳದಲ್ಲಿ ಭೇಟಿಯಾಗಬಹುದು.

ಡೀಲ್ ನಡೆಯುತ್ತಿದೆ...
ಈಗ ಡೀಲ್ ಮುಗಿಸೋ ಸಮಯ. ಪೇಷೆನ್ಸ್ ಇರಲಿ. ನಿಮ್ಮ ಕಾರ್ ಮಾರಾಟವಾಗುತ್ತಿದೆ.
* ಆಸಕ್ತಿ ತೋರಿದ ಗ್ರಾಹಕನಿಗೆ ನಿಮ್ಮ ಕಾರ್ ತೋರಿಸಿ.
* ಗ್ರಾಹಕ ಟೆಸ್ಟ್ ಡ್ರೈವ್ ಮಾಡುವಾಗ ಕಾರಿನಲ್ಲಿ ನೀವು ಕುಳಿತುಕೊಳ್ಳುವುದನ್ನು ಮರೆಯಬೇಡಿ.
* ಆತನ ಡ್ರೈವಿಂಗ್ ಲೈಸನ್ಸ್ ಪರೀಕ್ಷಿಸಿದ ನಂತರ ಆತನಿಗೆ ಚಾಲನೆ ಮಾಡಲು ಬಿಡಿ.
* ದರದ ಕುರಿತು ಹೆಚ್ಚು ಚೌಕಾಶಿ ನಡೆಸಲು ಅವಕಾಶ ಕೊಡಬೇಡಿ.

ಈಗ ನಿಮ್ಮ ಕಾರ್ ಮಾರಾಟವಾಯ್ತು ಎಂದಿರಲಿ. ಆದರೆ ಒಂದಿಷ್ಟು ಪೇಪರ್ ಕೆಲಸ ಬಾಕಿ ಇದೆ. ಚೆಕ್ ಅಥವಾ ಡಿಡಿ ಅಥವಾ ಕ್ಯಾಷ್ ಮೂಲಕ ಆತ ನಿಮಗೆ ಹಣಪಾವತಿಸಬಹುದು. ಚೆಕ್ ಕೈಸೇರುವರೆಗೆ ದಾಖಲೆ ಪತ್ರಗಳನ್ನು ಆತನ ವಶಕ್ಕೆ ನೀಡಬೇಡಿ. ಆರ್ ಟಿ ಒ ವರ್ಗಾವಣೆ ಕುರಿತು ಹತ್ತಿರದ ಆರ್ ಟಿ ಒ ಕಚೇರಿ ಸಂಪರ್ಕಿಸಿ.

More from DriveSpark

Article Published On: Thursday, March 31, 2011, 16:00 [IST]
English summary
Selling your car is easier than you think. Today online is best medium for selling your Car or Bike. Here is some Car Selling Tips, Used Car Selling Tips and Tips to get Better Price. You will enjoy selling your car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+