ಕಾರು ಇಂಧನ ಉಳಿಸಿ ಹಣ ಉಳಿಸಲು ಇಲ್ಲಿದೆ ಟಿಪ್ಸ್

ಕಾರು ಇಂಧನ ಉಳಿಸಿ
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬುದು ಕೆಲವರ ಕಾರಿಗೂ ಅನ್ವಯವಾಗುತ್ತದೆ. ಅದಕ್ಕೆ ಫುಲ್ ಟ್ಯಾಂಕ್ ಪೆಟ್ರೊಲ್ ಕುಡಿಯಲು ಕೆಲವು ಗಂಟೆ ಸಾಕು. ಇಂದು ಪೆಟ್ರೊಲ್ ದುಬಾರಿಯಾಗುತ್ತಿದೆ. ಜೊತೆಗೆ ಪ್ರಯಾಣ ಕೂಡ. ನಿತ್ಯ ಆಫೀಸಿಗೆ ಹೋಗಲು, ದೂರದೂರಿಗೆ ಪ್ರಯಾಣ ಬೆಳೆಸಲು ಗ್ಯಾರೇಜಿನಿಂದ ಕಾರು ಹೊರತೆಗೆಯುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡಬೇಕಾಗುತ್ತದೆ. ಆದರೆ ಒಂದಿಷ್ಟು ಜಾಗ್ರತೆ ವಹಿಸುವ ಮೂಲಕ ಕಾರಿನಲ್ಲಿ ಇಂಧನ ಉಳಿಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ಕಾರಿನ ದಕ್ಷತೆಯೂ ಹೆಚ್ಚುತ್ತದೆ. ಇಲ್ಲೊಂದಿಷ್ಟು ಟಿಪ್ಸ್ ಗಳಿವೆ.

* ಕಂಪನಿ ತಿಳಿಸಿದಷ್ಟೇ ಟೈರ್ ಪ್ರೆಷರ್ ಇರಲಿ. ನಿಗದಿ ಪಡಿಸಿದಕ್ಕಿಂತ ಹೆಚ್ಚು ಅಥವಾ ಕಡಿಮೆ ಗಾಳಿ ತುಂಬಿಸೋದು ಮಾಡಬಾರದು. ಈ ರೀತಿ ಮಾಡಿದರೆ ಕಾರು ಹೆಚ್ಚು ಪೆಟ್ರೊಲ್ ಬಳಸುತ್ತದೆ. ಟೈರ್ ಪ್ರೆಷರ್ ಸಮತೋಲನದಲ್ಲಿರಲಿ.

* ಇಂಧನ ಟ್ಯಾಂಕ್ ಗೆ ಪೂರ್ವಾಹ್ನದ ಸಮಯದಲ್ಲಿ ಪೆಟ್ರೊಲ್ ತುಂಬಿಸಿ. ಈ ಸಮಯದಲ್ಲಿ ಪೆಟ್ರೊಲ್ ಸಾಂದ್ರತೆ ಹೆಚ್ಚಿರುತ್ತದೆ.

* ಒಮ್ಮೆಗೆ ಫುಲ್ ಟ್ಯಾಂಕ್ ಇಂಧನ ತುಂಬಿಸಬೇಡಿ. ಸುಮಾರು ಅರ್ಧಟ್ಯಾಂಕ್ ತುಂಬಿಸಿದರೆ ಸಾಕು. ಆಗ ಸರಿಯಾದ ಒತ್ತಡದಲ್ಲಿ ಪೈಪ್ ನಲ್ಲಿ ಇಂಧನದ ಹರಿವಿರುತ್ತದೆ. ಇಂಧನ ಸರಾಗವಾಗಿ ಸಾಗಲು ನೆರವಾಗುವಂತೆ ಇಂಧನ ಪೈಪ್ ನಲ್ಲಿ ಕಲ್ಮಶಗಳಿವೆಯೇ ಎಂದು ಚೆಕ್ ಮಾಡಿರಿ.

* ಅಧಿಕೃತ ಸರ್ವಿಸ್ ಸೆಂಟರ್ ಗಳಲ್ಲಿ ಕಂಪನಿ ಮ್ಯಾನುಯಲ್ ನಲ್ಲಿ ತಿಳಿಸಿದಂತೆ ನಿಗಧಿತ ಸಮಯಕ್ಕೆ ಸರ್ವಿಸ್ ಮಾಡಿಸುತ್ತೀರಿ.

* ನಿಯಮಿತವಾಗಿ ಏರ್ ಫಿಲ್ಟರ್ ಬದಲಾಯಿಸುತ್ತೀರಿ. ಕಲ್ಮಶ ತುಂಬಿದ ಏರ್ ಫಿಲ್ಟರ್ ನಿಂದ ಎಂಜಿನ್ ಗೆ ಗಾಳಿಯ ಹರಿವಿಗೆ ತಡೆಯಾಗುತ್ತದೆ. ಇದು ಇಂಧನ ದಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಇದೇ ರೀತಿ ಆಯಿಲ್ ಕೂಡ ಬದಲಾಯಿಸುತ್ತಿರಬೇಕು.

* ಸ್ಮೂತಾಗಿ ವಾಹನ ಚಾಲನೆ ಮಾಡಿರಿ. ತಕ್ಷಣ ಬ್ರೇಕ್ ಅಥವಾ ಆಕ್ಸಲರೇಷನ್ ಹಾಕೋದನ್ನು ಅವಾಯ್ಡ್ ಮಾಡಿ. ಇದು ಇಂಧನ ಉಳಿಸುವುದು ಮಾತ್ರವಲ್ಲದೇ ಟೈರ್ ಬಾಳಿಕೆಯನ್ನೂ ಹೆಚ್ಚಿಸುತ್ತದೆ.

* ನಿಮ್ಮ ವಾಹನವನ್ನು ಓವರ್ ಲೋಡ್ ಮಾಡಬೇಡಿ. ಹೆಚ್ಚು ಲೋಡ್ ಇದ್ದಾಗ ವಾಹನ ಹೆಚ್ಚು ಇಂಧನ ಬಳಸುತ್ತದೆ.

* ಅಗತ್ಯವಿದ್ದಾಗ ಮಾತ್ರ ಏರ್ ಕಂಡಿಷನ್ ಬಳಸಿ. ವೆಂಟಿಲೇಷನ್ ಉಪಯೋಗಿಸುತ್ತಿರಿ. ಕಾರ್ ಕೂಲ್ ಆದ ಸಮಯದಲ್ಲಿ ಒಮ್ಮೆ ವಿಂಡೋ ತೆರೆಯಿರಿ ಅಥವಾ ಏರ್ ಕಂಡಿಷನ್ ಆಫ್ ಮಾಡಿ.

* ಸುಮಾರು 3 ನಿಮಿಷಕ್ಕಿಂತ ಹೆಚ್ಚು ಕಾರನ್ನು ನಿಲ್ಲಿಸುವ ಅವಶ್ಯಕತೆಯಿದ್ದರೆ ಎಂಜಿನ್ ಆಫ್ ಮಾಡಿ.

* ಕ್ಲಚ್ ರೈಡಿಂಗ್ ಅವಾಯ್ಡ್ ಮಾಡಿ. ಈ ರೀತಿ ಮಾಡಿದರೆ ಇಂಧನ ಅನುಭೋಗ ಹೆಚ್ಚುತ್ತದೆ. ಎಂಜಿನ್ ಬಾಳಿಕೆ ಕಡಿಮೆಯಾಗುತ್ತದೆ.

More from DriveSpark

Article Published On: Monday, April 11, 2011, 13:23 [IST]
English summary
Fuel is becoming expensive these days. Price of the petrol or diesel increased very often in india. It is right time to think about saving your car fuel. Save Fuel Save Money. Here is top 10 tips for you.
Read more on ಕಾರು car tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+