ಉತ್ತಮ ರೈಡರ್ ನೀವಾಗಿ: ಬೈಕ್ ಸವಾರಿಗೆ ಟಿಪ್ಸ್

ಬೈಕ್ ಸವಾರಿಗೆ ಟಿಪ್ಸ್
ಸವಾರಿ ಅಂದ್ರೆ ಎಲ್ಲರಿಗೂ ಇಷ್ಟ. ಹಾಗಂತ ಎಲ್ಲರೂ ಅತ್ಯುತ್ತಮ ರೈಡರ್ ಗಳಾಗಿರುವುದಿಲ್ಲ. ಸುರಕ್ಷತೆ ಮತ್ತು ಆರಾಮದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ಉಲ್ಲಾಸ ಉತ್ಸಾಹ ಪೂರ್ಣವಾದ ಸವಾರಿ ಮಾಡುವುದು ಒಂದು ಕಲೆ. ಇಂತಹ ಸವಾರಿಗೆ ಯಾವುದೇ ಸೀಕ್ರೆಟ್ ಇಲ್ಲವೆಂದು ನಮಗೆಲ್ಲರಿಗೂ ಗೊತ್ತು. "ಹಾಡಿ ಹಾಡಿ ರಾಗ" ಅನ್ನೋ ಹಾಗೇ ಸವಾರಿ ಮಾಡುತ್ತ, ಮಾಡುತ್ತ ಹಲವು ಟೆಕ್ನಿಕ್ ಗಳು ನಮ್ಮ ಕೈವಶವಾಗುತ್ತದೆ. ಪ್ರತಿ ಸವಾರಿಯಲ್ಲೂ ಪಾಠ ಕಲಿಯುತ್ತ ನಾವು ಪ್ರಬುದ್ಧ ರೈಡರ್ ಆಗುತ್ತೇವೆ. ರೈಡಿಂಗ್ ನಲ್ಲಿ ಸವಾರ ಪಾಲಿಸಬೇಕಾದ ಕೆಲವು ಸಾಮಾನ್ಯ ಟೆಕ್ನಿಕ್ ಇಲ್ಲಿವೆ.

ರಿಲಾಕ್ಸ್: ನಮ್ಮ ಬೈಕ್ ಸವಾರಿ ಉಲ್ಲಾಸ, ಉತ್ಸಾಹದಿಂದ ಕೂಡಿರಬೇಕು. ಇದಕ್ಕೆ ರಿಲಾಕ್ಸ್ ಆಗುವುದು ಅತ್ಯಂತ ಅಗತ್ಯ. ಸವಾರಿಯಲ್ಲಿ ಕತ್ತು, ಸ್ನಾಯು, ಬಾಹುಗಳೆಲ್ಲ ರಿಲಾಕ್ಸ್ ಆಗಿರುವಂತೆ ನೋಡಿಕೊಳ್ಳುವುದು ಒಂಚೂರು ಕಷ್ಟವೇ. ಹ್ಯಾಂಡಲ್ ಬಾರ್ ಹಿಡಿತ, ನಿಯಂತ್ರಣ, ಎದುರಿನ ಚಕ್ರದ ಮೇಲೆ ಗಮನ ಹರಿಸುವುದು ಬೈಕ್ ಸವಾರನ ಮೇಲೆ ಹೆಚ್ಚು ಒತ್ತಡವನ್ನು ಹಾಕುತ್ತದೆ. ಆದರೆ ಒಂದಿಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಅಂದರೆ ಹ್ಯಾಂಡಲ್ ಬಾರನ್ನು ಉಡದ ಹಾಗೇ ಹಿಡಿಯುವ ಬದಲು ಸ್ಮೂತಾಗಿ ಹಿಡಿಯಿರಿ. ಇದರಿಂದ ಸವಾರಿ ಹೆಚ್ಚು ಆರಾಮದಾಯಕತೆ, ದೃಢತೆಯಿಂದ ಕೂಡಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ರಿಲಾಕ್ಸ್ ಆಗಿ ರೈಡ್ ಮಾಡಿ.

ಬೈಕ್ ನೊಂದಿಗೆ ಸಂವಹನ: ಬೈಕ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಲಿ. ಸವಾರಿ ಮಾಡುತ್ತ ನೀವು ಕೆಲವು ಟೆಕ್ನಿಕ್ ಗಳನ್ನು ಅನ್ವೇಷಣೆ ಮಾಡುತ್ತೀರಿ. ಅಂತಹ ಅನುಭವ ಪಡೆದುಕೊಳ್ಳಲು, ನಿಮ್ಮ ಬೈಕನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಯಾವ ರೀತಿ ರೈಡ್ ಮಾಡಿದರೆ ಸುರಕ್ಷಿತ? ಕೆಲವು ಸಂದರ್ಭದಲ್ಲಿ ಬೈಕ್ ಯಾವ ರೀತಿ ವರ್ತಿಸುತ್ತದೆ? ಯಾವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು? ಇತ್ಯಾದಿಗಳನ್ನು ತಿಳಿದುಕೊಳ್ಳಿ. ಬೈಕ್ ನೊಂದಿಗೆ ನಿಮ್ಮ ಭಾಂದವ್ಯ ಹೆಚ್ಚಿದಂತೆ ಹಲವು ಟೆಕ್ನಿಕ್ ತಿಳಿಯುತ್ತದೆ.

ಅತ್ತಿತ್ತ ನೋಡದಿರು: ನೀವು ಎಲ್ಲಿಗೆ ಹೋಗುತ್ತೀರೋ ಅತ್ತಕಡೆ ನಿಮ್ಮ ದೃಷ್ಟಿಯಿರಲಿ. ಕೆಲವೊಮ್ಮೆ ಬೈಕ್ ಸವಾರಿ ಮಾಡುತ್ತ ಗಮನ ರಸ್ತೆ ಬಿಟ್ಟು ಎಲ್ಲೆಲ್ಲೋ ಸಾಗುತ್ತದೆ. ಸುಮ್ಮನೆ ರಸ್ತೆಯನ್ನು ನೋಡುತ್ತಿದ್ದರೂ, ಮನಸ್ಸು ಎಲ್ಲೋ ಇರುತ್ತದೆ. ಅಜಾಗರೂಕತೆಯ ಸವಾರಿಯಿಂದ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ. ರಸ್ತೆಯ ಮೇಲೆ ಎಚ್ಚರಿಕೆಯ ಗಮನವಿಟ್ಟುಕೊಂಡು ಸವಾರಿ ಮಾಡುವುದು ಅತ್ಯಂತ ಅಗತ್ಯ.

ಸ್ಮೂತಾಗಿ ರೈಡ್ ಮಾಡಿ: ಸ್ಮೂತಾಗಿ ರೈಡ್ ಮಾಡಿದರೆ ಸವಾರಿ ಹೆಚ್ಚು ಸುಖಪ್ರದವಾಗಿರುತ್ತದೆ. ಹೆಚ್ಚು ಹೆಚ್ಚು ರೈಡ್ ಮಾಡುತ್ತ ಸ್ಮೂತ್ ರೈಡ್ ಕಲಿಯಬಹುದು. ಸ್ಮೂತಾಗಿ ರೈಡ್ ಮಾಡೋದು ಕಷ್ಟವಲ್ಲ. ಇಂತಹ ಸವಾರಿಯಿಂದ ಇಂಧನ ದಕ್ಷತೆಯು ಹೆಚ್ಚುತ್ತದೆ. ನೀವು ಸೀಟ್ ನಲ್ಲಿ ಸರಿಯಾಗಿ ಕುಳಿತುಕೊಳ್ಳುವುದು ಕೂಡ ಸ್ಮೂತ್ ರೈಡ್ ಗೆ ಅತ್ಯಂತ ಅವಶ್ಯಕ.

ಹೆಚ್ಚು ರೈಡ್ ಮಾಡಿ: ಪ್ರತಿದಿನ ಕಲಿಯಲು ಸಾಕಷ್ಟಿರುತ್ತದೆ. ರೈಡಿಂಗ್ ಹವ್ಯಾಸವಿದ್ದರೆ ಅದನ್ನೂ ಎಂದಿಗೂ ನಿಲ್ಲಿಸಬೇಡಿ. ಗೇರ್ ಬದಲಾಯಿಸುತ್ತ ನಿಶ್ಚಿಂತೆಯಿಂದ ಸವಾರಿ ಮಾಡಿ. ಮಳೆಯಿರಲಿ, ಚಳಿಯಿರಲಿ ಎದೆಗುಂದದೆ ರೈಡ್ ಮಾಡಿರಿ. ಪ್ರತಿಸವಾರಿಯೂ ನಿಮಗೆ ಹೊಸ ಹೊಸ ಪಾಠ ಕಲಿಸುತ್ತದೆ. ದಿನಕಳೆದಂತೆ ನೀವು ಅತ್ಯುತ್ತಮ ರೈಡರ್ ಆಗುತ್ತಿರಿ. ಆಲ್ ದಿ ಬೆಸ್ಟ್.

Article Published On: Wednesday, April 13, 2011, 11:12 [IST]
English summary
There are no secrets or shortcuts to a safe and enjoyable ride on a Bike. Tips for Motorcycle Riders. Here are a few point which will help Bike rider maintain his focus and Best ride.
Read more on ಬೈಕ್ bike tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+