ಬೆಂಗಳೂರಿನಿಂದ ಧರ್ಮಸ್ಥಳ: ಲಾಂಗ್ ಡ್ರೈವ್ ಟಿಪ್ಸ್

By * ಮುರಾರಿ, ಬೆಂಗಳೂರು

Bangalore to Dharmasthala
ಏನ್ಸಾರ್ ಮೊಬೈಲ್ ನೊಳಗೆ ಮಗ್ನರಾಗಿದ್ದೀರಿ ಎನ್ನುತ್ತ ಗೆಳೆಯ ಶಿವಮೂರ್ತಿ ಪಕ್ಕದಲ್ಲಿ ಬಂದು ಕುಳಿತ. "ಹೌದಪ್ಪ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಓದ್ತಾ ಇದ್ದೆ. ಮತ್ತೆನೂ ವಿಶೇಷ ತುಂಬಾ ದಿನ ಆಯ್ತು ನಿನ್ನ ನೋಡಿ" ಅಂತ ನಾನು ಉಭಯಕುಶೋಲಪರಿ ಆರಂಭಿಸಿದೆ.

"ವಿಶೇಷ ಏನಿಲ್ಲ ಸಾರ್. ಹೇಳೊಕ್ಕೆ ಮರೆತೆ. ನಾವು ನಾಡಿದ್ದು ಸುಬ್ರಹ್ಮಣ್ಯ, ಧರ್ಮಸ್ಥಳ, ಪಿಲಿಕುಳ, ಕೊಲ್ಲೂರಿಗೆ ಟ್ರಿಪ್ ಹೋಗ್ತಾ ಇದ್ದೀವಿ" "ಓಹ್ ಸಂತೋಷ.. ಚೆನ್ನಾಗಿದೆ ಪ್ಲೇಸ್ ಹೋಗಿಬನ್ನಿ"

"ಅದು ಹಾಗಲ್ಲ ಸಾರ್. ನಾನು ಒಮ್ಮೆನೂ ಲಾಂಗ್ ಡ್ರೈವ್ ಮಾಡಿಲ್ಲ. ನೀವಂತೂ ತಿಂಗಳಿಗೆರಡು ಬಾರಿ ಕಾರಿನಲ್ಲಿ ದೂರಕ್ಕೆ ಹೊರಡು ಬಿಡ್ತಿರಿ. ಏನಾದ್ರು ಸಲಹೆ ಇದ್ರೆ ಹೇಳಿ"

"ಸಲಹೆ ಕೊಡುವಷ್ಟು ಅನುಭವ ನನಗೇನಿದೆ? ಆದ್ರೂ ಲಾಂಗ್ ಡ್ರೈವ್ ಮಾಡುವಾಗ ಒಂದಿಷ್ಟು ಮುಂಜಾಗ್ರತೆ ವಹಿಸಲೇಬೇಕು. ಎಂಟು ಸಲಹೆ ಅಂತೂ ಮರೆಯಲೇಬಾರದು. ಒಂದಿಷ್ಟು ಪಾಯಿಂಟ್ ಹೇಳ್ತಿನಿ ನೆನಪಿಟ್ಟುಕೊಳ್ಳಿ" ನನ್ನ ಮಾತಿಗೆ ಶಿವಮೂರ್ತಿ "ನೆನಪಿಡೋಕೆ ಕಷ್ಟ. ಒಂದು ಕಾಗದ ಕೊಡಿ ಬರಕೊಳ್ತಿನಿ" ಅಂತ ಕಾಗದ ಪೆನ್ನು ಹಿಡಿದು ಕೂತರು.

ಇವರು ಪರೀಕ್ಷೆಗೆ ಕೂತ ವಿದ್ಯಾರ್ಥಿಯಾಗೇ ಮಾಡ್ತಾರಲ್ವ ಅಂತ ಸ್ವಲ್ಪ ತಲೆಕೆಡಿಸಿಕೊಂಡೆ. ನಂತರ ಸ್ವಲ್ಪ ಹೊತ್ತು ಯೋಚಿಸಿದೆ. ಆಮೇಲೆ ಕೆಲವು ಪಾಯಿಂಟ್ ಹೇಳ್ತಾ ಹೋದೆ. ಅವರು ಬರೆಯುತ್ತ ಹೋದ್ರು. ಆಮೇಲೆ ಅವರು ಬರೆದ ಚೀಟಿ ನೋಡಿದೆ. ನೀಟಾಗಿ ಹೀಗೆ ಬರೆದಿದ್ದರು.

* ಪ್ರಯಾಣಕ್ಕೆ ಮುನ್ನ ಕಾರಿನ ಕಂಡಿಷನ್ ಪರಿಶೀಲಿಸಿ. ಟೈರ್, ಟೈರ್ ಪ್ಲೆಷರ್ ಎಲ್ಲವನ್ನೂ ಚೆಕ್ ಮಾಡಿ.
* ಸ್ಟೇರಿಂಗ್, ಬ್ರೇಕ್ ಮತ್ತು ಕಾರು ಎಂಜಿನ್ ಪರಿಶೀಲಿಸಿರಿ.
* ಟ್ಯಾಂಕ್ ನಲ್ಲಿ ಫುಲ್ ಪೆಟ್ರೊಲ್ ಇದೆಯಾ ನೋಡಿ.
* ಹಾರ್ನ್, ಸಿಗ್ನಲ್ ಲೈಟ್ಸ್, ಹೆಡ್ ಲೈಟ್, ವೈಪರ್ ಸಮರ್ಪಕವಾಗಿ ಕೆಲಸ ಮಾಡುವುದೇ ಪರಿಶೀಲಿಸಿರಿ.
* ಕಾರಿನಲ್ಲಿ ಎಮರ್ಜೆನ್ಸಿ ಕಿಟ್ ಇರಲಿ(ಪ್ರಥಮ ಚಿಕಿತ್ಸೆ ಕಿಟ್, ಟಾರ್ಚ್, ರಿಪೇರಿಗೆ ಬೇಕಾದ ಕಿಟ್)
* ಗಾಡಿ ಸ್ಟಾರ್ಟ್ ಮಾಡುವ ಮುನ್ನ ಕಾರಿನ ಕೂಲಂಟ್ ಮತ್ತು ಬ್ಯಾಟರಿ ಸಮರ್ಪಕವಾಗಿದೆಯೇ ನೋಡಿ.
* ಕೂಲಂಟ್ ಸರಿಯಾಗಿಲ್ಲವೆಂದರೆ ಎಂಜಿನ್ ಗೆ ಹಾನಿಯಾಗುತ್ತದೆ. ಬ್ಯಾಟರಿ ಹಳೆಯದಾಗಿದ್ದರೆ, ಹೊಸ ಬ್ಯಾಟರಿಯೊಂದು ಜೊತೆಗಿರಲಿ.
* ಡ್ರೈವಿಂಗ್ ಮಾಡುವಾಗ ಬ್ರೇಕ್ ನಲ್ಲಿ ಕಾಲಿರಲಿ.
* ಕಾರು ಚಾಲನೆ ಮಾಡುವಾಗ ನಿದ್ದೆ ಮಾಡಬೇಡಿ. ನಿದ್ದೆ ಬರುತ್ತೆ ಎಂದಾದಗ ಗಾಡಿ ನಿಲ್ಲಿಸಿ ಒಂದೈದು ನಿಮಿಷ ನಿದ್ದೆ ಮಾಡಿ, ಬಾಟಲಿ ನೀರಿನಿಂದ ಮುಖತೊಳೆದು ಪ್ರಯಾಣ ಬೆಳೆಸಿ.

"ಏನ್ಸಾರ್ ಇನೇನಾದ್ರು ಪಾಯಿಂಟ್ ಇದೇನಾ?" ಶಿವಮೂರ್ತಿ ಚಿಕ್ಕ ಮಕ್ಕಳಂತೆ ಪ್ರಶ್ನಿಸಿದರು. ತಕ್ಷಣ ಏನೋ ನೆನಪಾದಂತೆ ಹೇಳಿದೆ. "ಹೌದ್ರಿ ಶಿವಮೂರ್ತಿ, ತಪ್ಪಿಯೂ ಡ್ರಿಂಕ್ಸ್ ಮಾಡಿ ಡ್ರೈವ್ ಮಾಡಬೇಡಿ" ಆದರೆ ಈ ಪಾಯಿಂಟನ್ನು ಅವರು ಯಾಕೋ ಬರೆದುಕೊಳ್ಳಲಿಲ್ಲ. "ನಾನು ಕುಡಿಯೊಲ್ಲ ಮುರಾರಿ. ಚಾಲಕ ಕುಡಿದಿದ್ದರೆ ಸಾಗದು ಬಂಡಿಯು ಮುಂದೆ." ಅಂತ ನಗುತ್ತ ಎದ್ದು ನಿಂತ್ರು. "ಹೋಗಿ ಬನ್ನಿ, ಹ್ಯಾಪಿ ಜರ್ನಿ, ಪ್ರಸಾದ ನಂಗೂ ತನ್ನಿ" ಅವರನ್ನು ಬೀಳ್ಕೊಟ್ಟೆ.

More from DriveSpark

Article Published On: Monday, June 13, 2011, 16:18 [IST]
English summary
What are the techniques for a safe long car drive? Murari explaining some happy long drive tips. This tips help you to reach your destination safely.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+