ನೈಟ್ ಡ್ರೈವಿಂಗ್: ನಿಶಾಚರಿ ಚಾಲಕರಿಗೆ ಸಲಹೆಗಳು

ಕತ್ತಲೆಂದರೆ ನಿಶಾಚರಿಗಳು ಸಂಚಾರಿಸೋ ಸಮಯ. ಹೆಚ್ಚಿನ ವಾಹನ ಸಂಚಾರಿಗಳು ನಿಶಾಚರಿಗಳೇ. ಟ್ರಾಫಿಕ್ ಇತ್ಯಾದಿ ಕಾರಣಗಳಿಂದ ರಾತ್ರಿ ವಾಹನ ಸವಾರಿ ಹೆಚ್ಚಿನವರಿಗೆ ಇಷ್ಟವಾಗಿರಬಹುದು. ಸಮೀಕ್ಷೆಯೊಂದರ ಪ್ರಕಾರ ಹಗಲು ನಡೆಯುವ ಅಪಘಾತಕ್ಕಿಂತ ಮೂರು ಪಟ್ಟು ಅಪಘಾತಗಳು ರಾತ್ರಿ ಜಾವ ನಡೆಯುತ್ತದಂತೆ! ರಾತ್ರಿ ವಾಹನ ಡ್ರೈವಿಂಗ್ ಮಾಡುವರಿಗೆ ಅವಶ್ಯಕವಾದ ಹಲವು ಸಲಹೆಗಳು ಇಲ್ಲಿವೆ.

* ಕತ್ತಲಲ್ಲಿ ನಾವು ಹೆಚ್ಚು ದೂರವನ್ನು ನೋಡಲಾರೆವು. ಎದುರಿನಲ್ಲಿ ಬೇರೆ ವಾಹನ ಬರುತ್ತಿದ್ದರೆ ಕಣ್ಣಿಗೆ ಮತ್ತಷ್ಟು ಮಂಕು ಕವಿಯಬಹುದು. ಈ ಕಾರಣಕ್ಕೆ ಹೆಚ್ಚು ವೇಗದಲ್ಲಿ ಹೋಗುವುದು ಅಪಾಯ.

* ರಾತ್ರಿ ಕೇವಲ ಹೆಡ್ ಲೈಟ್ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತೇವೆ. ಹಾಗಾಗಿ ನಮ್ಮ ದೃಷ್ಟಿ ವ್ಯಾಪ್ತಿ ತೀರಾ ಕಮ್ಮಿ. ಇಲ್ಲಿ ಚಾಲಕರಿಗೆ ಕಣ್ಣಲತೆಯ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಅನಿವಾರ್ಯತೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ.

* ರಾತ್ರಿ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ರಸ್ತೆಯ ಪರಿಚಯನೂ ಇರುವುದಿಲ್ಲ. ಹೀಗಾಗಿ ನಿದ್ದೆ ಕಣ್ಣಲ್ಲಿ ಪ್ರಯಾಣಿಸುವುದು ಅಪಾಯ. ಶೇ. 90ರಷ್ಟು ಚಾಲಕರು ರಾತ್ರಿ ಪ್ರಯಾಣದಲ್ಲಿ ತೂಕಡಿಸುತ್ತಾರಂತೆ. ಕತ್ತಲಲ್ಲಿ ರಸ್ತೆಯ ಗ್ರಹಿಕೆ ಕಷ್ಟವಾಗುತ್ತದೆ.

* ಕತ್ತಲ ಡ್ರೈವಿಂಗ್ ನಲ್ಲಿ ಆಯಾಸ ಆಗುವುದು ಬೇಗವಂತೆ. ಸೋಮಾರಿತನ, ಆಲಸ್ಯತನ ಕತ್ತಲ ಡ್ರೈವಿಂಗ್ ನ ಶತ್ರುಗಳು. ರಾತ್ರಿ ವಾಹನ ಚಾಲನೆ ಹೆಚ್ಚಿನವರಿಗೆ ಬೋರ್ ಹೊಡೆಸುತ್ತದೆ. ಇದು ಕೂಡ ರಾತ್ರಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ.

* ಪ್ರತಿರಾತ್ರಿ ಪ್ರಯಾಣಕ್ಕೆ ಮುನ್ನ ಹೆಡ್ ಲೈಟ್, ಹಿಂಬದಿಯ ಲೈಟ್, ಸಿಗ್ನಲ್ ಲೈಟ್, ಕನ್ನಡಿ, ಕಿಟಕಿಗಳನ್ನು ಕ್ಲೀನ್ ಮಾಡಬೇಕು. ಯಾಕೆಂದರೆ ರಾತ್ರಿ ಸ್ಪಷ್ಟವಾಗಿ ಕಾಣುವುದಕ್ಕೆ ಇವು ಅತ್ಯಂತ ಅಗತ್ಯ.

* ರಾತ್ರಿ ಕುಡಿದು ಪ್ರಯಾಣಿಸುವುದು ಅಪಾಯಕಾರಿ. ಡ್ರಿಂಕ್ಸ್ ಹಾಕದೇ ರಾತ್ರಿ ಡ್ರೈವಿಂಗ್ ಮಾಡಲಾಗುವುದಿಲ್ಲ ಎಂದು ಹೇಳುವುದು ಅಪಾಯ. ಸ್ವಲ್ಪ ಕುಡಿದು ಕೆಲವು ದೂರ ಪ್ರಯಾಣಿಸಿದರೆ ಆಲಸ್ಯ, ಸೋಮಾರಿತನ, ಆಯಾಸ ಹೆಚ್ಚಾಗುತ್ತದೆ.

* ರಾತ್ರಿ ಡ್ರೈವಿಂಗ್ ಮಾಡುವಾಗ ಸ್ಮೋಕಿಂಗ್ ಮಾಡುವುದನ್ನು ಕಡಿಮೆ ಮಾಡಿ. ಸಾಧ್ಯವಾದರೆ ಬಿಟ್ಟುಬಿಡಿ. ನಿಕೊಟಿನ್ ಮತ್ತು ಕಾರ್ಬನ್ ಮಾನೊಕ್ಷೈಡ್ ರಾತ್ರಿ ದೃಷ್ಟಿಯನ್ನು ಮಂಕಾಗಿಸುತ್ತದೆ.

* ರಾತ್ರಿ ಪ್ರಯಾಣದಲ್ಲಿ ಸರಿಯಾಗಿ ಕಣ್ಣು ಕಾಣುವುದು ಅತ್ಯಂತ ಅಗತ್ಯ. ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಯಾವುದೇ ಡೌಟ್ ಬಂದರೂ ಬೀಮ್ ಲೈಟ್ ಫೋಕಸ್ ಮಾಡಿ ನೋಡಬೇಕು.

* ರಾತ್ರಿ ಟ್ರಾಫಿಕ್ ನಲ್ಲಿ ಪ್ರಯಾಣಿಸುವಾಗ ನಿಮ್ಮ ವಾಹನಕ್ಕೂ ಮುಂದಿನ ವಾಹನಕ್ಕೂ ಸಾಕಷ್ಟು ಅಂತರವಿರಲಿ. ಕೆಲವೊಮ್ಮೆ ಮುಂದಿನ ವಾಹನ ಎಷ್ಟು ದೂರದಲ್ಲಿದೆ ಎಂದು ಕಣ್ಣು ಗುರುತಿಸುವಲ್ಲಿ ಸೋಲುತ್ತದೆ. ಯಾಕೆಂದರೆ ರಾತ್ರಿಯಲ್ಲಿ ದೃಷ್ಟಿ ಮಂದವಾಗಿರುತ್ತದೆ.

* ಯಾವುದಾದರೂ ವಾಹನವನ್ನು ಹಿಂಬಾಲಿಸುವಾಗ ಲೈಟ್ ಬೀಮ್ ಬಳಕೆ ಮಾಡಬೇಡಿ. ಇದು ಮುಂದೆ ವಾಹನ ಚಲಾಯಿಸುತ್ತಿರುವ ಚಾಲಕನ ದೃಷ್ಟಿಯನ್ನು ಮಂಕಾಗಿಸಬಹುದು.

* ರಾತ್ರಿ ದೂರ ಪ್ರಯಾಣದಲ್ಲಿ ಅಲ್ಲಲ್ಲಿ ಗಾಡಿ ನಿಲ್ಲಿಸಿ ಪ್ರಯಾಣಿಸುವುದು ಒಳ್ಳೆಯದು. ಸಾಧ್ಯವಾದರೆ ಸ್ನಾಕ್ಸ್, ಪಾನೀಯಗಳನ್ನು ಕುಡಿದು ಸಂಚಾರಿಸಿ. ಇದರಿಂದ ನಿಮಗೆ ಡ್ರೈವಿಂಗ್ ಮಾಡಲು ಹೆಚ್ಚು ಶಕ್ತಿ ದೊರಕುತ್ತದೆ.

* ಬೆಳಗಾಗಲು ಸಾಕಷ್ಟು ಸಮಯವಿರುವಾಗ, ಅಥವಾ ಮುಂಜಾನೆ ಡ್ರೈವಿಂಗ್ ಮಾಡಲು ಸಾಕಷ್ಟು ಕಠಿಣ ಸಮಯ. ಎಚ್ಚರಿಕೆಯಿಂದ ಪ್ರಯಾಣಿಸಿ

ರಾತ್ರಿ ವಾಹನ ಸವಾರಿ ಮಾಡುವಾಗ ಒಂದಿಷ್ಟು ಜಾಗೃತೆ ವಹಿಸಿ. ರಾತ್ರಿ ಮೈಮರೆತು ಪ್ರಯಾಣಿಸಿ ಬದುಕು ಕತ್ತಲಾಗುವುದು ಬೇಡ. ಕತ್ತಲಿನಿಂದ ಬೆಳಗಿನತ್ತ ನಿಮ್ಮ ಪ್ರಯಾಣವಿರಲಿ.

More from DriveSpark

Article Published On: Thursday, July 14, 2011, 16:48 [IST]
English summary
Driving at night can be extremely challenging and dangerous too due to low visibility. There are several ways to effectively reduce the risks of night driving. follow this night driving tips.. happy journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+