ವಾಹನ ಚಾಲನೆ: ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷ್ಯಗಳು

ಸಲಹೆಗಳು
* ವೇಗದ ಮಿತಿ ಕಾಪಾಡಿಕೊಳ್ಳಿ
* ಕುಡಿದು ವಾಹನ ಚಲಾಯಿಸದಿರಿ.
* ಕಾರಿನಲ್ಲಿ ಸೀಟು ಬೆಲ್ಟ್ ಹಾಕಲು ಮರೆಯದಿರಿ.
* ಸಿಗ್ನಲ್ ಜಂಪ್ ಮಾಡಬೇಡಿ.
* ವಾಹನದ ಗಾಜು ಶುಭ್ರವಾಗಿರಲಿ. ಎದುರಿನ ರಸ್ತೆ ಶುಭ್ರವಾಗಿ ಕಾಣುವಂತ್ತಿರಲಿ.
* ಅಡ್ಡ ರಸ್ತೆ, ಉಬ್ಬು ತಗ್ಗು ಇರುವ ರಸ್ತೆಗಳಲ್ಲಿ ವಾಹನಗಳನ್ನು ಓವರ್ ಟೆಕ್ ಮಾಡದಿರಿ.
* ಇಕ್ಕಟ್ಟಾದ ಸ್ಥಳದಲ್ಲೂ ಓವರ್ ಟೆಕ್ ಒಳ್ಳೆಯದಲ್ಲ.
* ವಾಹನವನ್ನು ಹೆಚ್ಚು ಹೊತ್ತು ನಿಲ್ಲಿಸಬೇಕಾದ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಹಾಕಲು ಮರೆಯದಿರಿ.
* ಕಾರಿನಲ್ಲಿ ಸಾಕಷ್ಟು ಪೆಟ್ರೊಲ್/ ಡೀಸಲ್ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಪ್ರಯಾಣಿಸಿ.
* ಟೈರ್ ಸುರಕ್ಷತೆ ಗಮನದಲ್ಲಿರಲಿ.
* ಮಳೆಗಾಲದಲ್ಲಿ ವೈಪರ್ ಕುರಿತು ಎಚ್ಚರಿಕೆಯಿರಲಿ.
* ಜೋರಾಗಿ ಮ್ಯೂಸಿಕ್ ಹಾಕಿ ಡ್ರೈವ್ ಮಾಡದಿರಿ. ಹೀಗೆ ಮಾಡಿದರೆ ಹೊರಗಿನ ಸದ್ದು, ಹಾರ್ನ್ ಕೇಳಿಸದು.
* ವಾಹನ ನಿಮ್ಮದಾಗಿರಬಹುದು, ರಸ್ತೆ, ರಸ್ತೆಯಲ್ಲಿರುವರ ಪ್ರಾಣ ನಿಮ್ಮದಲ್ಲ. ನೆನಪಿರಲಿ
* ಯಾವುದಾದರೂ ಕಡೆಗೆ ವಾಹನ ತಿರುಗಿಸುವಾಗ ಇಂಡಿಕೇಟರ್ ಹಾಕಿರಿ.
* ವಾಹನ ಚಲಾಯಿಸುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆಯಿಂದ ನಿಭಾಯಿಸಿ.
* ಕಾರಿನಲ್ಲಿ ಓವರ್ ಲೋಡ್ ಮಾಡದಿರಿ. ಈ ಲೇಖನದ ಚಿತ್ರದಲ್ಲಿರುವಂತೆ ಬೈಕ್ ಸವಾರಿ ಮಾಡದಿರಿ
ದೃಷ್ಟಿ ನೇರಕ್ಕೆ ಕಾಣುವಷ್ಟು ಗುರಿ ಇಟ್ಟುಕೊಂಡು ನಿಯಮಿತ ವೇಗದಲ್ಲಿ ಚಲಾಯಿಸಿ. ಹ್ಯಾಪಿ ಜರ್ನಿ


Click it and Unblock the Notifications








