ಆಟೋ ಅಡ್ಡೆಯಲ್ಲಿ ಕುಳಿತ ಪಡ್ಡೆ ವೇಗಿಯ ಬ್ರಿಲಿಯಂಟ್ ಐಡಿಯಾಸ್

By * ವೇಗಿ

Road Accident
ಸಿಗರೇಟು ಪ್ಯಾಕೇಟು ಮೇಲೆ ಕ್ಯಾನ್ಸರ್ ನ ಭಯಾನಕ ಚಿತ್ರಗಳನ್ನು ಹಾಕಲು ಕೇಂದ್ರ ಸರಕಾರ ನಿರ್ಧರಿಸಿರುವುದು ನಿಮಗೆಲ್ಲ ಗೊತ್ತು. ನಾನು ತುಂಬಾ ಬಾರಿ ಯೋಚಿಸಿದೆ. ಈ ಐಡಿಯಾ ಬಂದದ್ದು ಯಾರಿಗೆ ಅಂತ. ಗೊತ್ತಾಗಿದ್ರೆ ಈ ಪಡ್ಡೆ ಹುಡುಗ ಖಂಡಿತಾ ಅವನಿಗೆ ಶಾಲು ಹೊದೆಸಿ ಸನ್ಮಾನಿಸುತ್ತಿದ್ದ. ಪ್ರಾಮೀಸ್.

ನಾನು ಖಂಡಿತಾ ಇದನ್ನು ಬೆಂಬಲಿಸುತ್ತೇನೆ. ಕ್ಯಾನ್ಸರ್ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿ ತಂಬಾಕು ವ್ಯರ್ಜಿಸುವುದು ನಿಜಕ್ಕೂ ಒಳ್ಳೆಯದು. ಆದರೆ ನನಗೆ ಬೇಸರವಾಗುತ್ತಿದೆ. ಯಾಕೆಂದರೆ ಇಂತಹ ಐಡಿಯಾವನ್ನು ಬರೀ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳಿಗೆ ಮಾತ್ರ ಯಾಕೆ ಸೀಮಿತಗೊಳಿಸುತ್ತಾರೆ ಅಂತ.

ದಿನಾ ಕುಡಿದು ವಾಹನ ಅಪಘಾತ ಮಾಡುವುದು ಸಾಮಾನ್ಯ ಸಂಗತಿ. ಹಾಗಾಗಿ ಮಧ್ಯದ ಬಾಟಲಿಯಲ್ಲಿ ಅಥವಾ ವಾಹನದಲ್ಲಿ ಅಪಘಾತದ ಭಯಾನಕ ಚಿತ್ರ ಅಂಟಿಸಬಾರದೇ. ಕುಡಿದು ರೈಲಿನಡಿಗೆ ಬಿದ್ದು ಅರ್ಧ ಭಾಗವಾದ ದೇಹದ ಚಿತ್ರವನ್ನು ಪ್ರಕಟಿಸಬಹುದು. ಭೀಕರ ರಸ್ತೆ ಅಪಘಾತದಿಂದ ಛಿದ್ರವಾದ ದೇಹದ ಚಿತ್ರ ಪ್ರಕಟಿಸಬಹುದಲ್ಲವೇ?

ದಯವಿಟ್ಟು ನಗೆಯಾಡಬೇಡಿ. ಕುಹುಕವಂತೂ ಮಾಡಲೇಬೇಡಿ. ಇದೆಂತಹ ಯೋಚನೆ. ಒಂದು ಬಾಟಲ್ ರಮ್ ಎಳೆದ ನಂತರ ಹೊಳೆದ ಐಡಿಯಾ ಇದೆಂದು ಯೋಚಿಸಬೇಡಿ. ಈ ವೇಗಿ ಪಡ್ಡೆಯ ಐಡಿಯಾ ಯಾವತ್ತೂ ಬ್ರಿಲಿಯಂಟ್, ನೆನಪಿಡಿ.

ಒಂದು ಅಧ್ಯಯನದ ಪ್ರಕಾರ 2009ರಲ್ಲಿ ಭಾರತದಲ್ಲಿ 9 ಲಕ್ಷ ಜನರು ಧೂಮಪಾನದಿಂದ ಸತ್ತಿದ್ದಾರೆ. ಕಳೆದ ವರ್ಷ ರಸ್ತೆ ಅಪಘಾತದಿಂದ ಭಾರತದಲ್ಲಿ ಸುಮಾರು 1,26,896 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಎಷ್ಟು ಜನರು ಗಾಯಗೊಂಡಿದ್ದಾರೋ, ಅಂಗವೈಕಲ್ಯಕ್ಕೆ ಈಡಾಗಿದ್ದಾರೋ ಅಂಕಿಅಂಶ ನನಗೆ ನೆನಪಿಲ್ಲ.

ನನ್ನ ಪ್ರಕಾರ ಇದು ಸೂಕ್ತ ಸಮಯ. ಅಪಘಾತದ ಭಯಾನಕ ಚಿತ್ರಗಳ ಮೂಲಕ ಚಾಲಕರಲ್ಲಿ ಭೀತಿ ಹುಟ್ಟಿಸಲೇ ಬೇಕು. ಅವರನ್ನು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿಸಲು ಬೇರೆ ಯಾವ ದಾರಿಯೂ ನನಗೆ ಕಾಣುತ್ತಿಲ್ಲ. ಈ ಕುರಿತು ಸರಕಾರಿ ಜಾಹೀರಾತುಗಳು ಹೊರಬರಲಿ. ಬೇಕಾದರೆ ವಾಹನದಲ್ಲಿಯೇ ಸ್ಟೇರಿಂಗ್ ಪಕ್ಕದಲ್ಲಿ(??) ಇಂತಹ ಚಿತ್ರಗಳನ್ನು ಅಂಟಿಸಲಿ.

ಹೆಂಗೈತೆ ನನ್ ಐಡಿಯಾ... ನಂಗೆ ನಿಮ್ಮ ಸಪೋರ್ಟ್ ಬೇಕು. ಪಡ್ಡೆ ವೇಗಿಯ ಐಡಿಯಾ ನಿಮಗಿಷ್ಟವಾಯಿತಾ.. ಇಷ್ಟವಾಗಿಲ್ಲ ಅಂದ್ರೆ ನಿಮ್ ಐಡಿಯಾ ಹೇಳಿ ಸ್ವಾಮಿ...

More from DriveSpark

Article Published On: Friday, July 15, 2011, 12:29 [IST]
English summary
Auto Ideas written by Vegi. He want decrees road accident. Vegi suggested put gory visuals in vehicle like cigarette packet cancer image. What an idea vegi?!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+