ವಾಹನದ ಚಕ್ರದ ಸುರಕ್ಷತೆಗೆ ಹತ್ತು ಸಲಹೆ ಇಲ್ಲಿದೆ

By * ಶಶಿಕಿರಣ್, ಮೆಕಾನಿಕ್, ಮಿನರ್ವ

ಕೆಲವೊಂದು ಕೆಲಸಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ. ಆದರೆ ಇದು ಕಾರಿನ ಟೈರಿಗೆ ಅನ್ವಯಿಸುವುದಿಲ್ಲ. ರಸ್ತೆ ಮತ್ತು ಕಾರಿನ ನಡುವಿರುವ ಚಕ್ರವನ್ನು ಯಾವಾಗಲೂ ಜತನದಿಂದ ನೋಡಿಕೊಳ್ಳಬೇಕು. ಕಾರಿನ ಟೈರ್ ಸುರಕ್ಷತೆಗೆ ಇಲ್ಲಿ ಹತ್ತು ಸಲಹೆಗಳಿವೆ. ಇದು ಸುರಕ್ಷಿತ ಸವಾರಿಗೆ ಹೆದ್ದಾರಿ.

* ಕಾರಿನ ಟೈರ್ ಪ್ರೆಷರ್ ಸರಿಯಾಗಿರಲಿ. ಕಾರು ಖರೀದಿಸಿದಾಗ ದೊರಕಿದ ಮ್ಯಾನುವಲ್ ನೋಡಿಕೊಂಡು ಕಾರಿನ ಟೈರ್ ಪ್ರೆಷರ್ ಚೆಕ್ ಮಾಡಿ.

* ಟೈರಿಗೆ ಹಾನಿಯಾಗಿರುವುದೇ ದಿನಾ ಪರಿಶೀಲಿಸುತ್ತೀರಿ. ಟೈರ್ ಟ್ರೀಡ್ ಗುಣಮಟ್ಟ ಪರೀಕ್ಷಿಸಿ. ಗಾಜಿನ ಚೂರುಗಳು, ಕಬ್ಬಿಣದ ಮೊಳೆಗಳು ಕಾರಿನ ಟೈರುಗಳಲ್ಲಿ ಚುಚ್ಚಿಕೊಂಡಿರಬಹುದು. ಟೈರ್ ಸವಾರಿಗೆ ಸೂಕ್ತವಾಗಿಲ್ಲ ಅನಿಸಿದರೆ ತಕ್ಷಣ ಬದಲಾಯಿಸಿ.

* ಟೈರಿನ ವಾಲ್ವ್ ಅಥವಾ ಕವಾಟವನ್ನು ಶುಚಿಯಾಗಿಡಿ. ದೂಳು ತುಂಬಿರುವ ಕ್ಯಾಪ್ ಬದಲಾಯಿಸಿರಿ.

* ಗುಂಡಿ ಹೆಚ್ಚಿರುವ ರಸ್ತೆಯಲ್ಲಿ ಡ್ರೈವಿಂಗ್ ಮಾಡುವುದನ್ನು ಕಡಿಮೆ ಮಾಡಿ. ಇದರಿಂದ ಟೈರಿಗೆ ಹಾನಿ ಗ್ಯಾರಂಟಿ. ರಿಮ್ ಕೂಡ ಬೆಂಡ್ ಆಗಬಹುದು.

* 8 ಸಾವಿರ ಕಿ.ಮೀ.ಗೊಮ್ಮೆ ಅಥವಾ ಕಾರು ಖರೀದಿಸುವಾಗ ತಿಳಿಸಿದಂತೆ ಟೈರ್ ಬದಲಾಯಿಸಿರಿ.

* ಕಾರನ್ನು ಮನೆಯ ಗ್ಯಾರೇಜಿನಲ್ಲಿ ಇಡಿ. ಮನೆಯ ಹೊರಗಡೆ ಇಟ್ಟರೆ ಯಾರಾದರೂ ಹಾನಿ ಮಾಡುವ ಸಾಧ್ಯತೆ ಇದೆ!

* ನಾಲ್ಕು ಚಕ್ರಗಳ ಸಮತೋಲನ ಸರಿಯಾಗಿರಲಿ. ಒಂದು ಚಕ್ರ ಹೆಚ್ಚು ಸವೇದಿದ್ದರೆ ಕಾರಿನ ಬ್ಯಾಲೇನ್ಸ್ ತಪ್ಪುತ್ತದೆ. ಇದರಿಂದ ಕಾರಿನ ಇತರ ಭಾಗಗಳಿಗೆ ಹಾನಿಯಾಗುತ್ತದೆ. ಎಂಜಿನ್ ಗೂ ಹಾನಿ ಗ್ಯಾರಂಟಿ.

* ಓವರ್ ಲೋಡ್ ಮಾಡದಿರಿ. ಕಾರಿನಲ್ಲಿ ಹೆಚ್ಚು ಲೋಡ್ ಮಾಡಿದರೆ ಟೈರ್ ಮೇಲೆ ಒತ್ತಡ ಹೆಚ್ಚುತ್ತದೆ. ಟೈರ್ ಪಂಕ್ಚರ್ ಆದೀತು.

* ಟೈರ್ ಓವರ್ ಹೀಟ್ ಆಗದಿರಲಿ. ಬಿಸಿಯಾದ ರಸ್ತೆ ಟೈರಿನ ಬಾಳಿಕೆಗೆ ಶತ್ರು.

* ಕಾರಿನ ಎಲ್ಲಾ ನಾಲ್ಕು ಚಕ್ರಗಳನ್ನು ಒಂದೇ ಸಾರಿ ಬದಲಾಯಿಸಲು ಪ್ರಯತ್ನಿಸಿ. ಅಥವಾ ಎದುರಿನ ಎರಡು ಚಕ್ರ, ಹಿಂದಿನ ಎರಡು ಚಕ್ರ ಹೀಗೆ ಜೊತೆಜೊತೆಯಾಗಿ ಬದಲಾಯಿಸಿ. ಇದರಿಂದ ಕಾರಿನ ಬ್ಯಾಲೇನ್ಸ್ ಸರಿಯಾಗಿರುತ್ತದೆ.

ಕಾರಿನ ಟೈರ್ ಸುರಕ್ಷಿತವಾಗಿದ್ದರೆ ನಿಮಗೆ ಮಾತ್ರವಲ್ಲ, ರಸ್ತೆಯಲ್ಲಿರುವ ಇತರರಿಗೂ ಅನುಕೂಲ. ಟೈರ್ ಮೇಲೆ ಕೇರ್ ತೆಗೆದುಕೊಂಡು ಸವಾರಿ ಮಾಡಿ.

More from DriveSpark

Article Published On: Wednesday, July 27, 2011, 17:18 [IST]
English summary
Tire safety tips for your car. The tips below can help you keep your car’s tires properly maintained and safe driving.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+