ಕಾರಿನ ಇಂಟಿರಿಯರ್ ಕುರಿತು ಕೇರ್ ತೆಗೆದುಕೊಳ್ಳಿ
ಕೆಲವು ಕಾರುಗಳು ಹೊರಗೆ ನೋಡಲು ಚೆನ್ನಾಗಿರುತ್ತವೆ. ಒಳಗೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಕಾರಿನ ಇಂಟಿರಿಯರ್ ಎಂಬುದು ಪ್ರಯಾಣದಲ್ಲಿ ನಮ್ಮ ಮನೆ ಇದ್ದಂತೆ. ಅದು ಆಹ್ಲಾದಕರವಾಗಿದ್ದರೆ ಚಾಲನೆಯು ಸುರಕ್ಷತೆಯಿಂದ ಕೂಡಿರುತ್ತದೆ.
ಕಾರಿನ ಇಂಟಿರಿಯರ್ ರಕ್ಷಣೆಗಾಗಿ
* ಕಾರನ್ನು ನೆರಳಿನಲ್ಲಿ ನಿಲ್ಲಿಸಿ: ಕಾರನ್ನು ಬಿಸಿಲಲ್ಲಿ ನಿಲ್ಲಿಸಿದರೆ ಕಾರಿನ ಕೂಲರ್ ಸಿಸ್ಟಮ್ ಗೆ ಹಾನಿಯಾಗುತ್ತದೆ. ಕಾರಿನೊಳಗೆ ಬಿಸಿ ಅನುಭವ ಆಗಬಹುದು. ಕಾರಿನ ವಿಂಡೋ ಫ್ರೇಮ್, ವೈಂಡ್ ಸೀಲ್ಡ್ ಇತ್ಯಾದಿಗಳಿಗೂ ಹಾನಿಯಾದೀತು.
ಕಾರಿನ ಇಂಟಿರಿಯರ್ ರಕ್ಷಣೆಗಾಗಿ
* ಕಾರನ್ನು ನೆರಳಿನಲ್ಲಿ ನಿಲ್ಲಿಸಿ: ಕಾರನ್ನು ಬಿಸಿಲಲ್ಲಿ ನಿಲ್ಲಿಸಿದರೆ ಕಾರಿನ ಕೂಲರ್ ಸಿಸ್ಟಮ್ ಗೆ ಹಾನಿಯಾಗುತ್ತದೆ. ಕಾರಿನೊಳಗೆ ಬಿಸಿ ಅನುಭವ ಆಗಬಹುದು. ಕಾರಿನ ವಿಂಡೋ ಫ್ರೇಮ್, ವೈಂಡ್ ಸೀಲ್ಡ್ ಇತ್ಯಾದಿಗಳಿಗೂ ಹಾನಿಯಾದೀತು.
* ಕಾರಿನೊಳಗೆ ಸ್ವಚ್ಛತೆಯಿರಲಿ: ಕಾರು ತೊಳೆಯುವಾಗ ಇಂಟಿರಿಯರನ್ನು ಚೆನ್ನಾಗಿ ತೊಳೆಯಿರಿ.
* ಎಚ್ಚರಿಕೆಯಿಂದ ಕಾರಿ ಡ್ಯಾಷ್ ಮೀಟರ್ ಗಳನ್ನು ಸ್ವಚ್ಛಗೊಳಿಸಿ. ಡ್ಯಾಷ್ ಬೋರ್ಡ್ ನಲ್ಲಿರುವ ಕಾರಿನ ಮೀಟರ್ ಗಳು ಪ್ಲಾಸ್ಟಿಕ್ ಕನ್ನಡಿಯನ್ನು ಹೊಂದಿರುತ್ತವೆ. ಕಾರನ್ನು ತೊಳೆಯುವ ಭರದಲ್ಲಿ ಆ ಕನ್ನಡಿಯಲ್ಲಿ ಗೀರು ಬೀಳಬಹುದು.
* ಕಾರಿನ ಒಳಗಡೆ ಮ್ಯಾಟ್ (ಹಾಸು), ಕಾರ್ಪೆಟ್ ಗಳನ್ನು ಬಳಸಿರಿ.
* ಕಾರಿನ ಕಿಟಕಿ ಮತ್ತು ಬಾಗಿಲುಗಳ ರಬ್ಬರ್, ವಾಷರ್ ಇತ್ಯಾದಿಗಳು ಅತ್ಯುತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಹಳೆಯದಾಗಿದ್ದರೆ, ಕಿತ್ತು ಹೋಗುತ್ತಿದ್ದರೆ ಬದಲಾಯಿಸಿ.
* ಕಾರಿನ ಸೀಟುಗಳು ಒದ್ದೆಯಾಗದಂತೆ ನೋಡಿಕೊಳ್ಳಿ. ಒದ್ದೆಯಾದರೆ ಒಣಗಿಸಲು ಪ್ರಯತ್ನಿಸಿ. ಚರ್ಮದ ಸೀಟುಗಳು ಒದ್ದೆಯಾದ್ದರಂತೂ ಬೇಗ ಹಾಳಾದೀತು. ಸೀಟು ಫ್ಯಾಬ್ರಿಕ್ ಗಳನ್ನು ನಿಯಮಿತವಾಗಿ ಬದಲಾಯಿಸಿರಿ. ಮಗು ಕುಳಿತುಕೊಳ್ಳುವ ಸೀಟಿನ ಮೇಲೆ ಟವೆಲ್ ಹಾಕಿ.


Click it and Unblock the Notifications









