ಚಕ್ರದ ವಿಷ್ಯ: ಕಾರಿನ ಟೈರ್ ಕೇರ್ ಸಲಹೆಗಳು

ಕಾರಿನ ಟೈರ್ ಪ್ರೆಷರ್ ಸರಿಯಾಗಿರಲಿ. ಕಾರು ಖರೀದಿಸಿದಾಗ ದೊರಕಿದ ಮ್ಯಾನುವಲ್ ನೋಡಿಕೊಂಡು ಕಾರಿನ ಟೈರ್ ಪ್ರೆಷರ್ ಚೆಕ್ ಮಾಡುತ್ತೀರಿ.
ಟೈರಿಗೆ ಹಾನಿಯಾಗಿರುವುದೇ ದಿನಾ ಪರಿಶೀಲಿಸುತ್ತೀರಿ. ಟೈರ್ ಟ್ರೀಡ್ ಗುಣಮಟ್ಟ ಪರೀಕ್ಷಿಸಿ. ಗಾಜಿನ ಚೂರುಗಳು, ಕಬ್ಬಿಣದ ಮೊಳೆಗಳು ಕಾರಿನ ಟೈರುಗಳಲ್ಲಿ ಚುಚ್ಚಿಕೊಂಡಿರಬಹುದು. ಟೈರ್ ಸವಾರಿಗೆ ಸೂಕ್ತವಾಗಿಲ್ಲ ಅನಿಸಿದರೆ ತಕ್ಷಣ ಬದಲಾಯಿಸಿ.
ಟೈರಿನ ವಾಲ್ವ್ ಅಥವಾ ಕವಾಟವನ್ನು ಶುಚಿಯಾಗಿಡಿ. ದೂಳು ತುಂಬಿರುವ ಕ್ಯಾಪ್ ಬದಲಾಯಿಸಿರಿ.
ಗುಂಡಿ ಹೆಚ್ಚಿರುವ ರಸ್ತೆಯಲ್ಲಿ ಡ್ರೈವಿಂಗ್ ಮಾಡುವುದನ್ನು ಕಡಿಮೆ ಮಾಡಿ. ಇದರಿಂದ ಟೈರಿಗೆ ಹಾನಿ ಗ್ಯಾರಂಟಿ. ರಿಮ್ ಕೂಡ ಬೆಂಡ್ ಆಗಬಹುದು.
8 ಸಾವಿರ ಕಿ.ಮೀ.ಗೊಮ್ಮೆ ಅಥವಾ ಕಾರು ಖರೀದಿಸುವಾಗ ತಿಳಿಸಿದಂತೆ ಟೈರ್ ಬದಲಾಯಿಸಿರಿ.
ಕಾರನ್ನು ಮನೆಯ ಗ್ಯಾರೇಜಿನಲ್ಲಿ ಇಡಿ. ಮನೆಯ ಹೊರಗಡೆ ಇಟ್ಟರೆ ಯಾರಾದರೂ ಹಾನಿ ಮಾಡುವ ಸಾಧ್ಯತೆ ಇದೆ!
ನಾಲ್ಕು ಚಕ್ರಗಳ ಸಮತೋಲನ ಸರಿಯಾಗಿರಲಿ. ಒಂದು ಚಕ್ರ ಹೆಚ್ಚು ಸವೇದಿದ್ದರೆ ಕಾರಿನ ಬ್ಯಾಲೇನ್ಸ್ ತಪ್ಪುತ್ತದೆ. ಇದರಿಂದ ಕಾರಿನ ಇತರ ಭಾಗಗಳಿಗೆ ಹಾನಿಯಾಗುತ್ತದೆ. ಎಂಜಿನ್ ಗೂ ಹಾನಿ ಗ್ಯಾರಂಟಿ.
ಓವರ್ ಲೋಡ್ ಮಾಡದಿರಿ. ಕಾರಿನಲ್ಲಿ ಹೆಚ್ಚು ಲೋಡ್ ಮಾಡಿದರೆ ಟೈರ್ ಮೇಲೆ ಒತ್ತಡ ಹೆಚ್ಚುತ್ತದೆ. ಟೈರ್ ಪಂಕ್ಚರ್ ಆದೀತು.
ಟೈರ್ ಓವರ್ ಹೀಟ್ ಆಗದಿರಲಿ. ಬಿಸಿಯಾದ ರಸ್ತೆ ಟೈರಿನ ಬಾಳಿಕೆಗೆ ಶತ್ರು.
ಕಾರಿನ ಎಲ್ಲಾ ನಾಲ್ಕು ಚಕ್ರಗಳನ್ನು ಒಂದೇ ಸಾರಿ ಬದಲಾಯಿಸಲು ಪ್ರಯತ್ನಿಸಿ. ಅಥವಾ ಎದುರಿನ ಎರಡು ಚಕ್ರ, ಹಿಂದಿನ ಎರಡು ಚಕ್ರ ಹೀಗೆ ಜೊತೆಜೊತೆಯಾಗಿ ಬದಲಾಯಿಸಿ. ಇದರಿಂದ ಕಾರಿನ ಬ್ಯಾಲೇನ್ಸ್ ಸರಿಯಾಗಿರುತ್ತದೆ.
ಎಂಜಿನ್, ಟೈರ್ ಕೇರ್ ಆಯ್ತು. ದಿನಾ ಕಾರನ್ನು ಸ್ನಾನ ಮಾಡಿಸದಿದ್ದರೆ ಹೇಗೆ? ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








