ಕಾರು ತೊಳೆಯುವುದು ಹೀಗಲ್ಲ ಮಲ್ಲಿಕಾ ಶೆರಾವತ್

ಯೂಟ್ಯೂಬ್ ನಲ್ಲಿ ಈ ವಿಡಿಯೋ ಈಗಾಗಲೇ 3 ಲಕ್ಷ 20 ಸಾವಿರ ಹಿಟ್ಸ್ ಪಡೆದಿದೆ. ಇದು ಹಾಟ್ ಸೀನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ನಟಿ ಇದರಲ್ಲಿ ತುಂಬಾ ಸೆಕ್ಸಿಯಾಗಿ ನಟಿಸಿದ್ದಾರೆ. ಆದರೆ ಮಲ್ಲಿಕಾಳನ್ನು ನೋಡಿ ಹಾಗೆಯೇ ಕಾರು ತೊಳೆದರೆ ನಿಮ್ಮ ಕಾರಿಗೆ ಹಾನಿ ಗ್ಯಾರಂಟಿ. ಕಾರು ತೊಳೆಯಲು ಒಂದಿಷ್ಟು ಟೆಕ್ನಿಕ್ ಗಳಿವೆ.
ಕಾರು ತೊಳೆಯಲು ಸಲಹೆ
* ನಿಮ್ಮ ಕಾರನ್ನು ಹೆಚ್ಚು ಬಿಸಿಲಿನಲ್ಲಿ ತೊಳೆಯದಿರಿ. ರಾಸಾಯನಿಕ ಅಂಶಗಳು ಇರುವ ಪರಿಸರದಲ್ಲಿ, ಹಕ್ಕಿ ಹಿಕ್ಕೆ ಬೀಳುವ ಸ್ಥಳಗಳಲ್ಲಿ ಕಾರು ತೊಳೆಯದಿರಿ. ಹಕ್ಕಿ ಹಿಕ್ಕೆ, ಕೆಮಿಕಲ್ ಇರುವ ಪರಿಸರ ಕಾರಿನ ಪೇಂಟ್ ಮೇಲೆ ಹಾನಿ ಮಾಡುತ್ತದೆ. ನೆರಳಿರುವ ಪ್ರದೇಶದಲ್ಲಿ, ಸಮತಟ್ಟಾದ ಪ್ರದೇಶದಲ್ಲಿ ಕಾರು ತೊಳೆಯಿರಿ.
* ಮನೆಬಳಕೆಯ ಸೋಪ್, ಡಿಸ್ ತೊಳೆಯುವ ಡಿಟರ್ಜೆಂಟ್ ಇತ್ಯಾದಿಗಳನ್ನು ಕಾರು ತೊಳೆಯಲು ಬಳಸದಿರಿ. ಕಾರು ತೊಳೆಯಲೆಂದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಬಳಸಿರಿ. ವಾಹನಗಳ ಪೇಂಟಿಗೆ ಅನುಕೂಲವಾಗಿರುವಂತೆ ಇದನ್ನು ಉತ್ಪಾದಿಸಲಾಗಿರುತ್ತದೆ.
* ರಬ್ಬರ್, ರಸ್ತೆಯ ಡಾಮರ್ ಇತ್ಯಾದಿಗಳು ಟೈರ್ ನಲ್ಲಿ ಹಿಡಿದಿದ್ದರೆ ಗಟ್ಟಿಯಾದ ಬ್ರಷ್ ನಿಂದ ಉಜ್ಜಬಹುದು. ಇದಕ್ಕಾಗಿ ವಿಶೇಷ ಟಾರ್ ರಿಮೂವರ್ ಕೂಡ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಕಾರಿನ ಬಾಡಿ ಸ್ಥಳದಲ್ಲಿ ಗಟ್ಟಿ ವಸ್ತುವಿನಿಂದ ಉಜ್ಜದಿರಿ.
* ಟೈರ್, ರಿಮ್ ಇತ್ಯಾದಿಗಳನ್ನು ತೊಳೆಯಲು ಪ್ರತ್ಯೇಕ ಸ್ಪಾಂಜ್ ಬಳಸಿ. ಸಾಬೂನು ನೀರಿನಲ್ಲಿ ಈ ಸ್ಥಳಗಳನ್ನು ತೊಳೆಯಬಹುದು. ಉಳಿದ ಭಾಗಗಳನ್ನು ಸ್ಮೂತಾಗಿರುವ ಸ್ಮಾಂಜ್ ಮೂಲಕ ತೊಳೆಯಿರಿ.
* ಕಾರಿನ ಬಾಡಿ ಬಿಸಿಯಾಗಿರುವಾಗ ತೊಳೆಯದಿರಿ. ಲಾಂಗ್ ಜರ್ನಿ ಮಾಡಿ ಬಂದ ಕೂಡಲೇ ಕಾರು ತೊಳೆಯದಿರಿ. ಕಾರು ಬಿಸಿಯಾಗಿದ್ದಾಗ ನೀರು ಮತ್ತು ಸೋಪ್ ಒಣಗುತ್ತದೆ. ಇದರಿಂದ ಕಲೆ ಮೂಡು ಸಾಧ್ಯತೆಯೂ ಇರುತ್ತದೆ. ಜರ್ನಿ ಮಾಡಿ ಕಾರು ತಣಿದ ಮೇಲೆ ಕಾರಿಗೆ ಬಾತ್ ಮಾಡಿಸಿ.
* ಸ್ಮಾಂಜ್ ನ್ನು ವೃತ್ತಾಕಾರವಾಗಿ ತಿರುಗಿಸದಿರಿ. ಇದರಿಂದ ಗೀರುಗಳಾಗುವ ಸಾಧ್ಯತೆಯಿದೆ. ನೆಲಕ್ಕೆ, ಮರಳಿಗೆ ಬಿದ್ದ ಸ್ಮಾಂಜ್ ನಿಂದ ಕಾರು ತೊಳೆಯದಿರಿ. ಸ್ಮಾಂಜನ್ನು ಸಾಬೂನು ನೀರಿನಲ್ಲಿ ಚೆನ್ನಾಗಿ ಜಾಲಾಡಿಸಿ ನಂತರ ಜತನದಿಂದ ಬಾಡಿ ಮೇಲೆ ಉಜ್ಜಿರಿ. ಒಟ್ಟಾರೆ ಕಾರಿನ ಮೇಲೆ ಗಾಯಗಳಾಗದಂತೆ ಉಜ್ಜಿ ತೊಳೆಯಿರಿ.
* ಏರ್ ಡ್ರೈ ಮೂಲಕ ಕಾರು ಒಣಗಿಸದಿರಿ. ನಾಲ್ಕು ಸುತ್ತು ಡ್ರೈವಿಂಗ್ ಮಾಡಿ ಕೂಡ ಕಾರು ಒಣಗಿಸಲು ಪ್ರಯತ್ನಿಸದಿರಿ. ಯಾಕೆಂದರೆ ನೀರಿನ ಲವಣಗಳು ಕಾರಿನ ಪ್ರಮುಖ ಭಾಗಗಳಲ್ಲಿ ಉಳಿಯುವ ಸಾಧ್ಯತೆಗಳಿವೆ. ದೊರಗು ಟವಲ್ ನಲ್ಲೂ ಉಜ್ಜದಿರಿ. ಕಾಟನ್, ಮೃದು ಬಟ್ಟೆ ಮೂಲಕ ಒರೆಸಿರಿ.
ವಿಶೇಷ ಸೂಚನೆ: ಈ ಸಲಹೆಯನ್ನು ಮಲ್ಲಿಕಾ ಶೆರಾವತ್ ಪಾಲಿಸಬೇಕೆಂದಿಲ್ಲ. ಆದರೆ ನೀವು ಪಾಲಿಸಬಹುದು.


Click it and Unblock the Notifications








