ಕಾರಿನ ಮೈಲೇಜ್ ಹೆಚ್ಚಿಸಲು ಹತ್ತೇ ಹತ್ತು ಸಲಹೆ

ನಿಮ್ಮ ಕಾರು ನೀವಂದುಕೊಂಡಷ್ಟು ಮೈಲೇಜ್ ನೀಡುತ್ತಿಲ್ಲ ಅಲ್ಲವೇ? ಆದರೆ ಒಂದಿಷ್ಟು ಮುಂಜಾಗ್ರತ ಕ್ರಮ, ಎಚ್ಚರಿಕೆಯ ಚಾಲನೆ ಮಾಡುವ ಮೂಲಕ ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ಹಣವೂ ಉಳಿತಾಯವಾಗುತ್ತದೆ. ಪೆಟ್ರೋಲ್ ದರ ಗಗನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಇದು ಅನಿವಾರ್ಯ ಕೂಡ.

ಮೈಲೇಜ್ ಹೆಚ್ಚಿಸಿಕೊಳ್ಳಲು ಸಲಹೆಗಳು
* ವೇಗವಾಗಿ ಆಕ್ಸಿಲರೇಟರ್ ಕೊಡಬೇಡಿ. ಕ್ವಿಕ್ ಆಗಿ ಆಕ್ಸಿಲರೇಟರ್ ಕೊಡವುದು ಹೆಚ್ಚು ಇಂಧನ ಬಯಸುತ್ತದೆ. ಸಾವಧಾನವಾಗಿ ಆಕ್ಸಿಲರೇಟರ್ ಕೊಡುವ ಅಭ್ಯಾಸ ಬೆಳೆಸಿಕೊಳ್ಳಿ.

* ಕ್ಲಚ್ ಜಾಸ್ತಿ ಬಳಸದಿರಿ. ಅಗತ್ಯವಿದ್ದಾಗ ಮಾತ್ರ ಕ್ಲಚ್ ಬಳಸಿರಿ. ಕಾಲಿನಡಿ ಕ್ಲಚ್ ಇದೆ ಅನ್ನೋ ಕಾರಣಕ್ಕೆ ಸುಮ್ಮನೆ ತುಳಿಯುತ್ತಿರಬೇಡಿ. ಕ್ಲಚ್ ಬಳಕೆ ಜಾಸ್ತಿಯಾದಷ್ಟು ಇಂಧನ ಅಪವ್ಯಯ ಹೆಚ್ಚು.

* ಸರಿಯಾಗಿ ಗೇರ್ ಬದಲಾಯಿಸಿ. ಭಾರತದಲ್ಲಿ ಹೆಚ್ಚಿನ ಕಾರುಗಳು ಮ್ಯಾನುಯಲ್ ಗೇರ್ ಹೊಂದಿರುತ್ತವೆ. ಗೇರನ್ನು ಸರಿಯಾಗಿ ಬದಲಾಯಿವುದನ್ನು ಕಲಿತುಕೊಳ್ಳಿ.

* ಕಾರನ್ನು ಆಗಾಗ ಸರ್ವಿಸ್ ಮಾಡುತ್ತೀರಿ. ಕಾರು ಕಂಪನಿ ತಿಳಿಸಿದ ಪ್ರಕಾರ ನಿಮ್ಮ ಕಾರನ್ನು ಸರ್ವಿಸ್ ಸ್ಟೇಷನ್ ಗೆ ನೀಡುತ್ತೀರಿ. ಇದರಿಂದ ಎಂಜಿನ್ ಆರೋಗ್ಯ ಹೆಚ್ಚಾಗುತ್ತದೆ. ಇಂಧನ ದಕ್ಷತೆ ಹೆಚ್ಚಾಗುತ್ತದೆ.

* ಕೆಂಪು ಸಿಗ್ನಲ್ ಬಳಿನಿಲ್ಲಿಸಿದಾಗ ಆಕ್ಸಿಲರೇಟರ್ ಮೇಲಿಂದ ಕಾಲು ತೆಗಿರಿ. ಎಂಜಿನ್ ತುಸು ರೆಸ್ಟ್ ತೆಗೆದುಕೊಳ್ಳಲಿ. ಇದರಿಂದ ಎಂಜಿನ್ ಅನುಭೋಗ ಕಡಿಮೆಯಾಗುತ್ತದೆ. ಕೆಟ್ಟ ವಾತಾವರಣದಲ್ಲಿ ವಾಹನ ಚಾಲನೆ ಮಾಡುವಿರಾದರೆ ನಿಯಮಿತವಾಗಿ ಏರ್ ಫಿಲ್ಟರನ್ನು ಸ್ವಚ್ಛಗೊಳಿಸುತ್ತೀರಿ.

* ಟೈರ್ ಗಾಳಿ ಒತ್ತಡ ಸಮರ್ಪಕವಾಗಿರಲಿ. ಕಂಪನಿಯು ನಿಗದಿಪಡಿಸಿದ ಪ್ರೆಸರನ್ನು ಟೈರ್ ಹೊಂದಿರಲಿ. ಕನಿಷ್ಠ ವಾರಕ್ಕೊಮ್ಮೆಯಾದರೂ ಇದನ್ನು ಪರಿಶೀಲಿಸುತ್ತೀರಿ.

* ನಿಗದಿತ ವೇಗದಲ್ಲಿ ಕಾರನ್ನು ಚಾಲನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಆಕ್ಸಿಲರೇಟರ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಇಂಧನ ಉಳಿಕೆಯಾಗುತ್ತದೆ.

* ಕಾರಿನ ಕಿಟಕಿ ಕ್ಲೋಸ್ ಮಾಡಿ ಕಾರು ಚಲಾಯಿಸಿ. ವಾಹನ ಚಾಲನೆ ಮಾಡುವಾಗ ಕಾರಿನ ಕಿಟಕಿ ತೆರೆದಿದ್ದರೆ ಗಾಳಿ ಒಳಗಡೆ ಬಂದು ಕಾರಿನ ವೇಗವನ್ನು ಕಡಿಮೆ ಮಾಡುತ್ತದೆ.. ಪ್ರಮುಖವಾಗಿ ಅತ್ಯಧಿಕ ವೇಗದಲ್ಲಿ ಸಾಗುವಾಗ ಕಿಟಕಿ ಹಾಕಲು ಮರೆಯದಿರಿ.

* ಮುಂಜಾನೆ ಕಾರಿನ ಟ್ಯಾಂಕ್ ಗೆ ಇಂಧನ ತುಂಬಿಸಿ. ಈ ಸಮಯದಲ್ಲಿ ತಂಪಾಗಿರುವ ಕಾರಣ ಇಂಧನ ಆವಿಯಾಗುವುದು ತಪ್ಪುತ್ತದೆ. ಟ್ಯಾಂಕ್ ನಲ್ಲಿ ಅರ್ಧಭಾಗ ಪೆಟ್ರೊಲ್ ಮುಗಿದಾಗ ಮರುತುಂಬಿಸಿ.

* ಕಾರಿನ ಬೂಟ್ ಭಾಗ ಆದಷ್ಟು ಕ್ಲೀನ್ ಆಗಿರಲಿ. ಕಾರಿನ ಹಿಂಭಾಗದಲ್ಲಿ ಹೆಚ್ಚು ಭಾರವಿದ್ದರೆ ಮೈಲೇಜ್ ಕಡಿಮೆಯಾಗುತ್ತದೆ. ಕಾರು ಆದಷ್ಟು ಹಗುರವಾಗಿರಲಿ.

ಸುಮ್ಮನೆ ಪೆಟ್ರೊಲ್ ದರ ಹೆಚ್ಚಾಗುತ್ತೆ ಅಂತ ತಲೆಕೆಡಿಸಿಕೊಳ್ಳುವುದಕ್ಕಿಂತ ಮೈಲೇಜ್ ಹೆಚ್ಚಿಸಿಕೊಂಡು ಹಾಯಾಗಿರಬಹುದು. ಆದರೂ ನಿಮಗೆ ತೃಪ್ತಿಯಾಗಿಲ್ಲ ಅಂತಾದರೆ ಪರ್ಯಾಯದ ಕುರಿತು ಸಲಹೆಗಳಿಗೆ ನಿಮ್ಮ ಕಣ್ಣು ಮೇಲಿರಲಿ.

More from DriveSpark

Article Published On: Thursday, September 15, 2011, 12:40 [IST]
English summary
Petrol prices are set to go up by Rs 3 per liter. This is time for car owners increase car mileage. How to increase car Mileage? Here is few easy and important tips to increase your car mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+