ಟಾಪ್-7 ಕಾರ್ ಮಾಡಿಫೈಗಳು: ಕಾನೂನು ಉಲ್ಲಂಘಿಸದೆ ನೀವು ಮಾಡಬಹುದು

ವಾಹನ ಮಾರ್ಪಾಡು ಅಥವಾ ಆಫ್ಟರ್ ಮಾರ್ಕೆಟ್‌ನಲ್ಲಿ ವಿಶೇಷವಾಗಿ ಕಾರುಗಳ ಮಾಡಿಫೈಗೊಳಿಸುವುದು ಭಾರತದಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಮೋಟಾರು ವಾಹನಗಳ ಕಾಯಿದೆ 1988 ರ ಸೆಕ್ಷನ್ 52 ರ ಪ್ರಕಾರ ಯಾವುದೇ ಮಾಲೀಕ ತಮ್ಮ ವಾಹನಕ್ಕೆ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ರೆ ಇಲ್ಲಿ ತಿಳಿಸಿರುವ ಮಾಡಿಫೈಗಳು ಕಾನೂನಿಗೆ ಒಳಪಟ್ಟಿವೆ.

ವೀಲ್ ಕ್ಯಾಪ್ಸ್: ಹೆಚ್ಚಿನ ಕಾರುಗಳು ಈಗ ಅಲಾಯ್ ಗಳೊಂದಿಗೆ ಬರುತ್ತವೆಯಾದರೂ, ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ಗಳ ಮೂಲ ರೂಪಾಂತರಗಳು, ಸೆಡಾನ್‌ಗಳು ಇತ್ಯಾದಿಗಳು ಸ್ಟೀಲ್ ವೀಲ್ ಅನ್ನು ಆವರಿಸುವ ವೀಲ್ ಹಬ್‌ಗಳೊಂದಿಗೆ ಬರುತ್ತವೆ. ನೀವು ಈ ವೀಲ್ ಬಬ್‌ಗಳನ್ನು ಬದಲಾಯಿಸಬಹುದು. ಜನಪ್ರಿಯ ಬ್ರ್ಯಾಂಡ್‌ಗಳಿಂದ ಈ ಆಫ್ಟರ್‌ಮಾರ್ಕೆಟ್ ಅಲಾಯ್‌ಗಳನ್ನು ಖರೀದಿಸಿದರೆ ಉತ್ತಮ.

7-car-modifications-without-breaking-the-law

ಹೊಸ ಬಲ್ಬ್ಗಳು: ಹೆಚ್ಚಿನ ಕಾರು ತಯಾರಕರು ಈಗ ತಮ್ಮ ಕಾರುಗಳನ್ನು ಎಲ್ಇಡಿ ಬಲ್ಬ್ಗಳೊಂದಿಗೆ ಬಿಡುಗಡೆ ಮಾಡುತ್ತಿದ್ದಾರೆ. ಆದಾಗ್ಯೂ, ಕೆಲವು ಮಾದರಿಗಳ ಮೂಲ ಟ್ರಿಮ್‌ಗಳು ಇನ್ನೂ ಹ್ಯಾಲೊಜೆನ್ ಬಲ್ಬ್ಗಳೊಂದಿಗೆ ಅಳವಡಿಸಲ್ಪಟ್ಟಿವೆ. ಆದ್ದರಿಂದ, ನಂತರದ ದಿನಗಳಲ್ಲಿ ಹೊಳಪು ಸಾಕಷ್ಟು ಗೋಚರಿಸುವುದಿಲ್ಲ ಎಂದು ನೀವು ಭಾವಿಸಿದರೆ, ಅವುಗಳನ್ನು ಬದಲಾಯಿಸಬಹುದು.

ಕ್ರೋಮ್: ನಿಮ್ಮ ಕಾರಿನಲ್ಲಿ ನೀವು ಕ್ರೋಮ್ ಅನ್ನು ಬಳಸಬಹುದು, ಆದ್ರೆ ವಾಹನವನ್ನು ಗುರುತಿಸಲು ಸಾಧ್ಯವಾಗದ ಮಟ್ಟಿಗೆ ಕ್ರೋಮ್‌ನೊಂದಿಗೆ ಮಾರ್ಪಾಡುಗಳನ್ನು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಆದ್ದರಿಂದ, ನಿಮ್ಮ ವಾಹನವನ್ನು ಕ್ರೋಮ್‌ಗಳೊಂದಿಗೆ ಮಾರ್ಪಡಿಸುವ ಮೊದಲು ಯಾವಮಟ್ಟಿಗೆ ಕ್ರೋಮ್ ಇರಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ.

7-car-modifications-without-breaking-the-law

ಡ್ಯುಯಲ್ ಟೋನ್: ಹೆಚ್ಚಿನ ವಾಹನ ತಯಾರಕರು ತಮ್ಮ ಕಾರುಗಳನ್ನು ಇತ್ತೀಚೆಗೆ ಡ್ಯುಯಲ್ ಟೋನ್‌ ಬಣ್ಣದಲ್ಲಿ ಬಿಡುಗಡೆ ಮಾಡಿದ್ದಾರೆ. i20 ಮತ್ತು ಹಿಂದಿನ ಜನ್ ವೆರ್ನಾ ಇದಕ್ಕೆ ಉತ್ತಮ ಉದಾಹರಣೆಗಳಾಗಿದ್ದು, ಎರಡೂ ಕಾರುಗಳು ಡ್ಯುಯಲ್-ಟೋನ್ ಆಯ್ಕೆಯ ರೂಪದಲ್ಲಿ ಬ್ಲಾಕ್ ರೂಫ್‌ನೊಂದಿಗೆ ಬರುತ್ತವೆ. ಹಳೆಯ ಮಾದರಿಗಳನ್ನು ಹೊಂದಿರುವವರು ನಿಮ್ಮ ಸಿಂಗಲ್-ಟೋನ್ ಬಣ್ಣದ ಕಾರಿಗೆ ಡ್ಯುಯಲ್ ಟೋನ್ ಮಾಡಿಸಬಹುದು.

ಹೊಸ ಬಣ್ಣ: ಕಾರಿನ ಮೇಲಿನ ಹೊಸ ಬಣ್ಣದ ಸ್ಕೀಮ್ ನವೀಕರಣವು ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ಅಪ್‌ಡೇಟ್ ಆಗುವವರೆಗೆ ಭಾರತದಲ್ಲಿ ಇದು ಕಾನೂನುಬದ್ಧವಾಗಿದೆ. ಕಾನೂನಿನ ದೃಷ್ಟಿಯಲ್ಲಿ ಸಂಪೂರ್ಣವಾಗಿ ಉತ್ತಮವಾದ ಯಾವುದೇ ಮಾರ್ಪಾಡುಗಳು ನಿಮಗೆ ತಿಳಿದಿದ್ದರೇ ಕಮೆಂಟ್‌ನಲ್ಲಿ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ವೆಬ್‌ತಾಣದೊಂದಿಗೆ ಸಂಪರ್ಕದಲ್ಲಿರಿ.

7-car-modifications-without-breaking-the-law

ಪಿಪಿಎಫ್ ಲೇಪನ: PPF ಅಥವಾ ಪೇಂಟ್ ಪ್ರೊಟೆಕ್ಷನ್ ಫಿಲ್ಮ್ ಎನ್ನುವುದು ನಿಮ್ಮ ಕಾರಿನ ಬಾಹ್ಯ ಬಣ್ಣವನ್ನು ರಕ್ಷಿಸಲು ಮಾಡಲಾದ ಮಾಡಿಫೈ. ಇದು ಸಾಮಾನ್ಯವಾಗಿ ತೆಳುವಾದ ಫಿಲ್ಮ್ ಆಗಿದ್ದು ಕಾರುಗಳನ್ನು ಆವರಿಸುತ್ತದೆ. ಕಾರಿನ ಬಣ್ಣವು ಹೆಚ್ಚು ಕಾಲ ಹೊಸದಾಗಿ ಕಾಣಲು ಸಹಾಯ ಮಾಡುತ್ತದೆ. ನೀವು ಈಗ ತಾನೇ ಹೊಚ್ಚಹೊಸ ಕಾರನ್ನು ಪಡೆದಿದ್ದರೆ, ನೀವು ಅದನ್ನು ತಕ್ಷಣವೇ PPF ಮಾಡಿಸಿದರೆ ಉತ್ತಮ. ಈ ಮಾರ್ಪಾಡು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ.

ಹೊಸ ಟೈರುಗಳು: ಈ ಮಾರ್ಪಾಡು ಕಾರು ಚಾಲನೆ ಮಾಡುವ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. ವೀಲ್‌ಗಳನ್ನು ಮಾರ್ಪಡಿಸುವಲ್ಲಿ ಪ್ರಮುಖವಾಗಿ ಎರಡು ರೀತಿಯ ಜನರನ್ನು ನೋಡಬಹುದು. ಒಬ್ಬರು ಆಕರ್ಷಣೆಗಾಗಿ ಎದ್ದು ಕಾಣುವಂತೆ ಮಾಡಿದರೆ ಮತ್ತೊಬ್ಬರು ಹೆಚ್ಚು ಪರ್ಫಾಮೆನ್ಸ್ ಹೊರತೆಗೆಯಲು ಮಾಡುತ್ತಾರೆ. ಈ ರೀತಿ ನಿಮ್ಮ ವಾಹನವನ್ನು ಮಾರ್ಪಡಿಸಲು ನೀವು ಬಯಸಿದರೆ, ಒಂದು ವಿಷಯದ ಬಗ್ಗೆ ಜಾಗರೂಕರಾಗಿರಿ ಚಕ್ರದ ಗಾತ್ರ, ವ್ಯಾಸವು ನೀಡಿರುವ ಅನುಮತಿಗೆ ಒಳಪಟ್ಟಿರಬೇಕು.

7-car-modifications-without-breaking-the-law

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Sunday, January 21, 2024, 14:00 [IST]
English summary
7 car modifications without breaking the law
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+