ಕಾರಿನ ಆಯಸ್ಸು ಹೆಚ್ಚಿಸಲು ಹತ್ತು ಸಲಹೆಗಳು
ಈಗ ಕಾರು ರಿಪೇರಿ ತುಂಬಾ ದುಬಾರಿ. ಕಾರನ್ನು ಬೇಕಾಬಿಟ್ಟಿಯಾಗಿ ಚಲಾಯಿಸಿ, ಸರಿಯಾಗಿ ಕೇರ್ ತೆಗೆದುಕೊಳ್ಳದಿದ್ದರೆ ನಿತ್ಯ ಕಿಸೆಗೆ ಕತ್ತರಿ ಬೀಳೋದು ಗ್ಯಾರಂಟಿ. ಕಾರಿನ ಆಯಸ್ಸು ಹೆಚ್ಚಿಸಲು ಇಲ್ಲೊಂದಿಷ್ಟು ಸಲಹೆಗಳಿವೆ.
1. ಕಾರಿನ ಮ್ಯಾನುಯಲ್ ಪುಸ್ತಕ ಓದಿ. ಅದರಲ್ಲಿ ತಿಳಿಸಿದ ಸಮಯಕ್ಕೆ ತಕ್ಕಂತೆ ಮೇಟೆಂನ್ ಮಾಡಿ. ಅಂದ್ರೆ ಕೂಲಿಂಗ್ ಸಿಸ್ಟಮ್, ಸಸ್ಪೆನ್ಷನ್ ಇತ್ಯಾದಿ ಬಿಡಿಭಾಗಕ್ಕೆ ಹಾನಿಯಾದರೆ ರಿಪೇರಿ ವೆಚ್ಚ ದುಬಾರಿಯಾಗಬಹುದು. ಕಂಪನಿ ತಿಳಿಸಿದಂತೆ ಸೂಕ್ತವಾಗಿ ಸಮರ್ಪಕವಾಗಿ ಕಾರನ್ನು ನಿರ್ವಹಣೆ ಮಾಡಿದರೆ ಕಾರಿನ ಆಯಸ್ಸು ಹೆಚ್ಚುವುದು.
2. ಹತ್ತಿರದ ಸ್ಥಳಗಳಿಗೆ ಕಾರು ಬಳಸದಿರಿ. ಎಂಜಿನ್ ಸ್ಟಾರ್ಟ್ ಮಾಡಿದ್ಮೇಲೆ ಕೊಂಚ ದೂರವಾದರೂ ಪ್ರಯಾಣಿಸಲೇಬೇಕು.
3. ಫ್ಲೂಯಿಡ್ಸ್ ಚೆಕ್ ಮಾಡಿ: ಆಂಟಿ ಪ್ರೀಜ್, ಆಯಿಲ್ ಟ್ರಾನ್ಸ್ ಮಿಷನ್, ಪವರ್ ಸ್ಟಿಯರಿಂಗ್ ಪ್ಲೂಯಿಡ್ ಮತ್ತು ಬ್ರೇಕ್ ಫ್ಲೂಯಿಡ್ ಇತ್ಯಾದಿಗಳನ್ನು ನಿಯಮಿತವಾಗಿ ಚೆಕ್ ಮಾಡುತ್ತಿರಿ.
4. ನಿಯಮಿತವಾಗಿ ಆಯಿಲ್ ಬದಲಾಯಿಸುತ್ತಿರಿ: ಸುಮಾರು 3-5 ಸಾವಿರ ಮೈಲು ಪ್ರಯಾಣಕ್ಕೆ ತಕ್ಕಂತೆ ಆಯಿಲ್ ಚೇಂಜ್ ಮಾಡುತ್ತಿರಿ. ಇದರಿಂದ ಕಾರಿನ ಮೈಲೇಜ್ ಜಾಸ್ತಿಯಾಗುತ್ತದೆ. ಜೊತೆಗೆ ಕಾರಿನ ಎಂಜಿನ್ ಆಯಸ್ಸು ಕೂಡ ಹೆಚ್ಚಾಗುತ್ತದೆ.
5. ಏರ್ ಫಿಲ್ಟರ್ ಬದಲಾವಣೆ: ಏರ್ ಫಿಲ್ಟರ್ ಬದಲಾಯಿಸುವುದು ಕಷ್ಟವಲ್ಲ. ಸುಮಾರು 12 ಸಾವಿರ ಮೈಲು ಪ್ರಯಾಣಕ್ಕೊಮ್ಮೆಯಾದರೂ ಏರ್ ಫಿಲ್ಟರ್ ಬದಲಾಯಿಸಬೇಕು. ನಿಮ್ಮ ಕಾರಿಗೆ ಸೂಕ್ತವಾದ ಏರ್ ಫಿಲ್ಟರ್ ಖರೀದಿಸಿ ನೀವೇ ಅಳವಡಿಸಬಹುದು. ಕೊಳಕು ತುಂಬಿದ ಏರ್ ಫಿಲ್ಟರಿನಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ.
6. ಬ್ರೇಕ್ ಪ್ಯಾಡ್ ಚೆಕ್ ಮಾಡಿ: ದಿನಾ ತುಳಿಯುವ ಬ್ರೇಕ್ ಪ್ಯಾಡ್ ಸವೆದಿರಬಹುದು. ಇದನ್ನು ಬದಲಾಯಿಸಿ.
7. ಟೈರುಗಳು ಫ್ಲಾಟ್ ಆಗಿರದಂತೆ ಎಚ್ಚರ ವಹಿಸಿ: ಫ್ಲಾಟ್ ಆದ ಟೈರಿನಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ಟೈರ್ ಪ್ರೆಷರ್ ಪರಿಶೀಲಿಸಿ. ಒಟ್ಟಾರೆ ಹೆಚ್ಚು ಸವೆದ ಟೈರಿನ ಬಳಕೆ ಬೇಡ.
8. ಆರಂಭದಲ್ಲಿ ಹೆಚ್ಚು ವೇಗ ಬೇಡ: ಕಾರನ್ನು ಸ್ಟಾರ್ಟ್ ಮಾಡಿ ಒಮ್ಮೆಗೆ ಎಕ್ಸಿಲರೇಟರ್ ಕೊಡಬೇಡಿ. ಕೊಂಚ ದೂರ ಸ್ಲೋ ಪ್ರಯಾಣಿಸಿ ನಂತರ ವೇಗ ಪಡೆದುಕೊಳ್ಳಿ. ಯಾಕೆಂದರೆ ಎಂಜಿನ್ ಸರಿಯಾಗಿ ಕೆಲಸ ನಿರ್ವಹಿಸಲು ಕೊಂಚ ಸಮಯ ಹಿಡಿಯುತ್ತದೆ.
9. ಪಾರ್ಕಿಂಗ್ ಬ್ರೇಕ್ ಬಳಸಿರಿ: ಆಟೋಮ್ಯಾಟಿಕ್ ಗೇರಿನ ಕಾರು ಹೊಂದಿದ್ದರೆ ನಿಯಮಿತವಾಗಿ ಪಾರ್ಕಿಂಗ್ ಬ್ರೇಕ್ ಬಳಸಿರಿ.
10. ಕಾರನ್ನು ವಾಷ್ ಮಾಡಿ: ರಸ್ತೆಯಲ್ಲಿರುವ ಉಪ್ಪಿನಂಶ ಇತ್ಯಾದಿಗಳು ಕಾರಿನ ಆಯಸ್ಸು ತಗ್ಗಿಸುತ್ತದೆ. ಕಾರಿನ ಪ್ರಮುಖ ಬಿಡಿಭಾಗಗಳಿಗೆ ತುಕ್ಕು ಹಿಡಿಯುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ ಕಾರನ್ನು ನಿಯಮಿತವಾಗಿ ತೊಳೆಯಲು ಮರೆಯದಿರಿ.


Click it and Unblock the Notifications