ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ವಾಹನ ಸವಾರರು ವಾಹನಗಳನ್ನು ಹೊಂದಿದ್ದರೆ ಮಾತ್ರ ಸಾಲದು. ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಸಹ ಮುಖ್ಯ. ಬೈಕ್ ಆಗಿರಲಿ ಅಥವಾ ಕಾರ್ ಆಗಿರಲಿ ನಿಯಮಿತವಾಗಿ ವಾಹನಗಳನ್ನು ಸರ್ವೀಸ್ ಮಾಡಿಸುವುದು ಅತ್ಯಗತ್ಯ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ಈ ಎಲ್ಲದರ ಜೊತೆಗೆ ವಾಹನಗಳನ್ನು ತೊಳೆಯುವುದು ಸಹ ಬಹಳ ಮುಖ್ಯ. ಕೆಲವರು ತಮ್ಮ ವಾಹನಗಳನ್ನು ತೊಳೆಯುವುದೇ ಇಲ್ಲ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕಾರನ್ನು ತೊಳೆಯುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ಸ್ವಚ್ಛವಾದ ಕಾರನ್ನು ಹೊಂದುವ ದೊಡ್ಡ ಅನುಕೂಲವೆಂದರೆ ಕಾರಿನ ಹೊರಭಾಗವು ದೀರ್ಘಕಾಲದವರೆಗೆ ಹೊಳೆಯುತ್ತಿರುತ್ತದೆ. ಕಾರುಗಳನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತೊಳೆಯುವುದರಿಂದ ಅನೇಕ ಪ್ರಯೋಜನಗಳಿವೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

1. ಕಾರ್ ವಾಶ್ ಕಾರಿನ ಎಕ್ಸ್'ಟಿರಿಯರ್ ಅನ್ನು ಸುರಕ್ಷಿತಗೊಳಿಸುತ್ತದೆ

ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ಕಾರು ತೊಳೆಯುವುದರಿಂದ ಕಾರಿನ ಎಕ್ಸ್ ಟಿರಿಯರ್ ಮೇಲಿರುವ ಕೊಳೆ, ಧೂಳು ನಿರ್ಮೂಲನೆಯಾಗುತ್ತದೆ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳು ಅತ್ಯುತ್ತಮ ಬಣ್ಣವನ್ನು ಹೊಂದಿರುತ್ತವೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ಈ ಬಣ್ಣದ ಮೇಲೆ ಕೊಳೆ, ಧೂಳು ಕೂತರೆ ಬಣ್ಣ ಹಾಳಾಗುತ್ತದೆ. ಬಣ್ಣ ಹಾಳಾದ ನಂತರ ಕಾರು ತುಕ್ಕು ಹಿಡಿಯಲು ಆರಂಭಿಸುತ್ತದೆ. ಕಾರನ್ನು ತೊಳೆಯಲು ಗುಣಮಟ್ಟದ ವ್ಯಾಕ್ಸಿಂಗ್ ಬಳಸುವುದು ಒಳ್ಳೆಯದು.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ಇದರಿಂದ ಕಾರಿನ ಹೊರಭಾಗವು ದೀರ್ಘಕಾಲ ಉತ್ತಮವಾಗಿರುತ್ತದೆ. ವ್ಯಾಕ್ಸಿಂಗ್ ಕೋಟ್ ಕಾರನ್ನು ಧೂಳಿನ ಕಣಗಳಿಂದ ರಕ್ಷಿಸುವುದರ ಜೊತೆಗೆ ಕಾರಿಗೆ ಹೊಳಪನ್ನು ನೀಡುತ್ತದೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

2. ಇಂಧನ ದಕ್ಷತೆ

ಕಾರಿಗೆ ಧೂಳು, ಮಣ್ಣು ಅಂಟಿಕೊಳ್ಳುವುದು ಅದರ ಇಂಧನ ದಕ್ಷತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಕಾರಿನ ಮೈಲೇಜ್ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

ಕಾರಿನಿಂದ ಉತ್ತಮ ಮೈಲೇಜ್ ಪಡೆಯಲು ಬಯಸಿದರೆ ಕಾರ್ ಅನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಇದರಿಂದ ಕಾರಿನ ಮೈಲೇಜ್ 10%ನಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

3. ಸ್ವಚ್ಚವಾದ ಕಾರು ಸುರಕ್ಷಿತ ಕಾರು

ಕಾರಿನ ಹೊರಭಾಗವನ್ನು ತೊಳೆಯುವಾಗ ಕಾರಿನ ಅದರ ವಿಂಡ್‌ಶೀಲ್ಡ್ ಹಾಗೂ ವಿಂಡೋಗಳನ್ನು ಸಹ ತೊಳೆಯಲಾಗುತ್ತದೆ. ಇದರಿಂದ ವಿಂಡ್‌ಶೀಲ್ಡ್ ಹಾಗೂ ವಿಂಡೋಗಳ ಮೇಲಿರುವ ಧೂಳು ಅಥವಾ ಕೊಳೆ ಇಲ್ಲವಾಗಿ ಹೊರಗಿನ ನೋಟ ಸ್ಪಷ್ಟವಾಗಿ ಕಾಣುತ್ತದೆ.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

4. ಇತರ ಸಮಸ್ಯೆಗಳ ಬಗ್ಗೆ ತಿಳಿಯಲು ಅನುಕೂಲ

ಕಾರನ್ನು ನಿಯಮಿತವಾಗಿ ತೊಳೆಯುತ್ತಿದ್ದರೆ ಇತರ ಯಾವುದೇ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಕಾರಿನ ಹೊರಭಾಗವನ್ನು ಬ್ರಷ್ ಅಥವಾ ಬಟ್ಟೆಯಿಂದ ಸ್ವಚ್ಛಗೊಳಿಸುವಾಗ ಕಾರಿನಲ್ಲಿರುವ ಡೆಂಟ್ ಅಥವಾ ಗೀರುಗಳನ್ನು ಸುಲಭವಾಗಿ ಗಮನಿಸಬಹುದು.

ಆಗಾಗ್ಗೆ ಕಾರು ತೊಳೆಯುವುದರಿಂದ ಉಂಟಾಗುವ ಪ್ರಯೋಜನಗಳಿವು

5. ರೀ ಸೇಲ್ ಮೌಲ್ಯ

ಸ್ವಚ್ಛವಾದ ಕಾರುಗಳು ಒಳ್ಳೆಯ ಮೂಡ್ ನೀಡಲು ನೆರವಾಗುತ್ತವೆ. ಇದು ಮಾತ್ರವಲ್ಲದೇ ಕಾರ್ ಅನ್ನು ಮಾರಾಟ ಮಾಡಲು ಬಯಸಿದಾಗ ಧೂಳು, ಕೊಳೆ ತುಂಬಿರುವಂತಹ ಕಾರುಗಳಿಗಿಂತ ಸ್ವಚ್ಛವಾಗಿರುವ ಕಾರುಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

Most Read Articles

Kannada
English summary
Benefits of washing cars weekly or monthly. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X