ಹೆಲ್ಮೆಟಾಯಾಣ: ಪ್ರಾಣರಕ್ಷಕ ಶಿರಸ್ತ್ರಾಣಕ್ಕೆ ಸಾವಿರ ಪ್ರಣಾಮ

ಹೆಲ್ಮೆಟ್ ಎಂದರೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ತಲೆಕಾಪು, ಶಿರಸ್ತ್ರಾಣ ಎಂಬರ್ಥವಿದೆ. ವಿಕಿಪೀಡಿಯಾದಲ್ಲಿ ಶಿರಸ್ತ್ರಾಣವೆಂದರೆ ಟೌಳಿ, ಲೋಹದ ಟೊಪ್ಪಿಗೆ, ಸೀಸಕ. ಒಟ್ಟಾರೆ ಹೆಲ್ಮೆಟ್ ಎಂದರೆ ಶಿರರಕ್ಷಕ ಕವಚ.
ಹೆಲ್ಮೆಟ್ ಧರಿಸದೇ ರಸ್ತೆಗಿಳಿದರೆ ಟ್ರಾಫಿಕ್ ಪೊಲೀಸ್ ಫೈನ್ ಹಾಕುತ್ತಾನೆ. ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡೋದು ಕೆಲವು ಯುವಕರಿಗೆ ಇಷ್ಟವೇ ಇಲ್ಲ. ಹೆಲ್ಮೆಟ್ ಧರಿಸಿದರೆ ತಲೆ ತಂಪಾಗಿರುತ್ತದೆ. ಕೆಲವರು ತಲೆಕೂದಲು ಉದುರುತ್ತದೆ ಎಂದು ಹೆಲ್ಮೆಟ್ ಧರಿಸಲು ಹಿಂಜರಿಯುತ್ತಾರೆ.
ಮೋಟರ್ ಬೈಕ್ ಸವಾರರು ಅತ್ಯುತ್ತಮ ದರ್ಜೆಯ ಹೆಲ್ಮೆಟ್ ಖರೀದಿಸುವುದು ಹೇಗೆ? ಮಾನದಂಡಗಳೇನು? ವಹಿಸಬೇಕಾದ ಎಚ್ಚರಿಕೆಯೇನು? ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಹೆಲ್ಮೆಟ್ ಖರೀದಿಸಬಹುದೇ? ಯಾವ ಬಣ್ಣದ ಹೆಲ್ಮೆಟ್ ಉತ್ತಮ? ಯಾವ ಹೆಲ್ಮೆಟ್ ಅಧಮ?
ಹೀಗೆ ಹೆಲ್ಮೆಟ್ ಮೇಲೆ ಸಾಕಷ್ಟು ಪ್ರಶ್ನೆಗಳಿವೆ. ಹೆಲ್ಮೆಟ್ ಕುರಿತು ಹೇಳಲು ಸುಮಾರು ವಿಷಯವಿದೆ. ಹೆಲ್ಮೆಟ್ ಬಗ್ಗೆ ನಿಮ್ಮಲ್ಲಿ ಹಲವು ಸಂಶಯಗಳಿರಬಹುದು. ಉತ್ತರಕ್ಕಾಗಿ ಹೆಲ್ಮೆಟಾಯಾಣದ ಮುಂದಿನ ಲೇಖನಕ್ಕಾಗಿ ಕೊಂಚ ಕಾಯಿರಿ.


Click it and Unblock the Notifications