ಇಬ್ಬನಿ ತಬ್ಬಿದ ಇಳೆಯಲಿ ಡ್ರೈವಿಂಗ್ ಮಾಡೋದು ಹೇಗೆ?

Posted By:
To Follow DriveSpark On Facebook, Click The Like Button
Car driving tips in foggy winter days
ಇಡೀ ಭೂಮಿಗೆ ಚಾದರ ಹೊದ್ದಂತೆ ಮಂಜು ಕವಿದಿರುತ್ತದೆ. ಅದೆರಡೆಯಲ್ಲಿ ಚಳಿಚಳಿ ತಾಳೇನು ಎನ್ನುವ ಕೂಗು ಬೇರೆ. ಈ ಸಮಯದಲ್ಲಿ ವೈನ್ ಕುಡಿದು ಮನೆಯಲ್ಲಿ ಬೆಚ್ಚಿಗಿರುವುದು ಸುಲಭ. ಅಥವಾ ಏನಾದರೂ ಮಾಡಿಕೊಂಡು ಬೆಚ್ಚಗಿರಬಹುದು. ಆದ್ರೆ ಕಾರು ಚಾಲಕರ ಕಷ್ಟವೇ ಬೇರೆ. ಇಬ್ಬನಿ ತಬ್ಬಿದ ಇಳೆಯಲಿ ಡ್ರೈವಿಂಗ್ ಮಾಡೋ ಅನಿವಾರ್ಯತೆ.

ಭೂಮಿನ್ ತಬ್ಬಿದ ಮೋಡಿದ್ದಂಗೆ

ಬೆಳ್ಳಿ ಬಳಿದಿದ್ ರೋಡಿದ್ದಂಗೆ

ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ

ಮಡಗಿದ್ದಲ್ಲೆ ಮಡಗಿದ್ದಂಗೆ.. ಜೆ ಪಿ ರಾಜರತ್ನಂ ಹೇಳಿದ್ದಾಂಗೆ ರಸ್ತೆಯಲ್ಲಿ ಮಂಜು ಕವಿದಿರುತ್ತದೆ.

ಆದರೆ ಕೆಲವರಿಗೆ ಚಳಿಯಿರಲಿ, ಹಿಮವಿರಲಿ, ಮಂಜು ಮುಸುಕಿರಲಿ. ಪ್ರಯಾಣ ಅನಿವಾರ್ಯ. ಆದರೆ ಚಳಿಗಾಲದಲ್ಲಿ ಕಾರು ಪ್ರಯಾಣ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ರಸ್ತೆಯೇ ಕಾಣದಂತೆ ಕವಿದಿರುವ ಮಂಜಿಗೆ ಕಣ್ಣು ಮಂಜಾಗಿಸುವುದು ಬೇಡ. ಒಂದಿಷ್ಟು ಮುಂಜಾಗ್ರತೆ ಸಾಕು. ಈ ಟಿಪ್ಸ್ ಬಳಸಿ ಡ್ರೈವ್ ಮಾಡಿ.

ಕಾರಿನ ಹೆಡ್ ಲೈಟ್ ಫಸ್ಟ್ ನೋಡಿ: ಚಳಿಗಾಲದಲ್ಲಿ, ಮಂಜುಮುಸುಕಿದ ಹಾದಿಯಲ್ಲಿ ಬ್ರೈಟ್ ಆಗಿರುವ ಹೆಡ್ ಲೈಟ್ ಸುಖಕರ ಪ್ರಯಾಣಕ್ಕೆ ದಾರಿತೋರಿಸುತ್ತದೆ. ಬೈ-ಕ್ಷೆನನ್ ಅಥವಾ ಹೆಚ್ಚು ಪ್ರಖರ ಹೆಡ್ ಲೈಟ್ ಬಳಸುವುದು ಸೂಕ್ತ. ಅಥವಾ ಕಾರಿನಲ್ಲಿ ಕಂಪನಿ ಕೊಟ್ಟ ಹಾಲೊಜಿನ್ ಲೈಟ್ ಇದ್ದರೆ ಅದನ್ನು ಸ್ವಚ್ಛಮಾಡಿಕೊಳ್ಳುವುದು ಮುಖ್ಯ. ಆದ್ರೆ ಹೈಬೀಮ್ ಲೈಟ್ ಬಳಸದಿರಿ. ಯಾಕೆಂದರೆ ಟ್ರಾಫಿಕ್ ಪೊಲೀಸರು ನಿಮ್ಮ ಮೇಲೆ ಕಣ್ಣಿಟ್ಟಿದ್ದಾರೆ.

ವೈಪರ್ ಸರಿಯಾಗಿದೆಯಾ?: ಕಾರಿನ ವೈಂಡ್ ಸ್ಕ್ರೀನ್ ವೈಪರ್ ಕುರಿತು ಗಮನ ಹರಿಸಿ. ಚಳಿಗಾಲದಲ್ಲೂ ವೈಪರ್ ಬಳಸಬೇಕೆ ಎಂದು ಪ್ರಶ್ನಿಸದಿರಿ. ಕೆಲವೊಂದು ಸಂದರ್ಭಗಳಲ್ಲಿ ಕಾರಿನ ಕನ್ನಡಿ ತುಂಬಾ ಮಂಜು ಕುಳಿತುಕೊಂಡಿರುತ್ತದೆ. ಹೀಗಾಗಿ ವೈಪರ್ ಕೆಲಸ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಪ್ರಯಾಣ ಹೊರಡಿ.

ಡಿಫಾಗರ್ ಸರಿಯಾಗಿ ಕೆಲಸ ಮಾಡುತ್ತೋ ಪರಿಶೀಲಿಸಿ: ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿರುವ ಡಿಫಾಗರ್ ಲೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತೋ ಇಲ್ಲವೋ ಪರಿಶೀಲಿಸಿರಿ. ಕಾರಿನೊಳಗೆ ಹೆಚ್ಚು ತಂಪು ಗಾಳಿ ಬರದಂತೆ ನೋಡಿಕೊಳ್ಳಿ.

ಫಾಗ್ ಲ್ಯಾಂಪ್ ಮತ್ತು ಮಿಣುಕು ದೀಪ: ನಿಮ್ಮ ಕಾರಿನಲ್ಲಿರುವ ಮಿಣುಕು ದೀಪ ಅಥವಾ ಫಾಗ್ ಲ್ಯಾಂಪ್ ಸರಿಯಾಗಿ ಕಾರ್ಯನಿರ್ಹಹಿಸುವುದೇ ಪರಿಶೀಲಿಸಿ. ಮಂಜು ಕವಿದ ವಾತಾವರಣದಲ್ಲಿ ಫಾಗ್ ಲ್ಯಾಂಪ್ ಅತ್ಯಂತ ಅಗತ್ಯ.

ಮಂಜು ಮುಸುಕಿದ ಹಾದಿಯಲ್ಲಿ ಈ ರೀತಿಯ ಮುಂಜಾಗ್ರತೆ ವಹಿಸಿಕೊಂಡು ಡ್ರೈವಿಂಗ್ ಮಾಡಬಹುದು. ಜಾಸ್ತಿ ಚಳಿಯಾದರೆ ಶುಂಠಿ ಕಷಾಯ ಕುಡಿಯಬಹುದು.

English summary
Car driving tips in foggy winter days. Snowfall, downpours, thick fog and blowing dust winter days driving is difficult. Fog can be quite a pain for drivers. Follow this tips in winter car driving.
Story first published: Saturday, December 24, 2011, 15:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark