ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವ ಮುನ್ನ ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು!

ಕಾರು ಖರೀದಿಸುವ ಮುನ್ನ ಟೆಸ್ಟ್‌ ಡ್ರೈವ್‌ ಅನ್ನೊದು ಬಹಳ ಮುಖ್ಯವಾಗಿದೆ. ಟೆಸ್ಟ್‌ ಡ್ರೈವ್‌ ಮಾಡದೇ ಕಾರು ಖರೀದಿಸಿದರೆ ನಿಮಗೆ ಒಂದು ಅಳುಕು ಇದ್ದೆ ಇರಲಿದೆ. ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವುದರಿಂದ ಕಾರಿನೊಂದಿಗೆ ನಿಕಟವಾದ ಸಂಬಂಧಹೊಂದುವುದಕ್ಕೆ ಅವಕಾಶ ಸಿಗಲಿದೆ. ಇದರಿಂದ ಕಾರಿನ ಟೆಸ್ಟ್‌ ಡ್ರೈವ್‌ ಅತಿ ಮುಖ್ಯವಾದ ಸಂಗತಿಯಾಗಿದೆ.

ಹೌದು, ಕಾರನ್ನು ಟೆಸ್ಟ್‌ ಡ್ರೈವ್‌ ಮಾಡಬೇಕೆನ್ನುವುದು ಕಾರು ಖರೀದಿಸುವ ಮುನ್ನ ಗಮನಿಸಬೇಕಾದ ವಿಚಾರವಾಗಿದೆ. ಇದರಿಂದ ಕಾರು ಖರೀದಿಸುವವರಿಗೆ ಕಾರಿನ ಕಾರ್ಯಕ್ಷಮತೆ ಮತ್ತು ಒಂದು ಸ್ಥಿರತೆಯನ್ನು ಅನುಭವಿಸಲು ಸಾಧ್ಯವಾಗಲಿದೆ. ಆದರೆ ಕಾರು ಟೆಸ್ಟ್‌ ಡ್ರೈವ್‌ ಮಾಡಬೇಕಾದ ನೀವು ಕೆಲವು ವಿಚಾರಗಳನ್ನು ಮನದಟ್ಟುಮಾಡಿಕೊಳ್ಳಬೇಕಿದೆ. ಹಾಗಾದ್ರೆ ಕಾರು ಟೆಸ್ಟ್‌ ಡ್ರೈವ್‌ ಆಯ್ಕೆ ಮಾಡುವಾಗ ನೀವು ಗಮನಿಸಬೇಕಾದ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

car-test-drive

ಕಾರು ಟೆಸ್ಟ್‌ ಡ್ರೈವ್‌ಗೆ ನೋಂದಾಯಿಸಿಕೊಳ್ಳುವುದು ಹೇಗೆ?

* ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವ ಮುನ್ನ ನೀವು ಖರೀದಿಸಬೇಕಾದ ಕಾರಿನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ
* ನಿಮ್ಮ ಬಜೆಟ್‌ಗೆ ಹೊಂದುವ ಹಾಗೂ ನೀವು ಬಯಸುವ ಫೀಚರ್ಸ್‌ ಒಳಗೊಂಡ ಕಾರನ್ನು ಶಾರ್ಟ್‌ ಲಿಸ್ಟ್‌ ಮಾಡಿ
* ಕನಿಷ್ಠ ಒಂದೆರಡು ಕಾರುಗಳನ್ನು ಪ್ರಯತ್ನಿಸಿ ಮತ್ತು ಶಾರ್ಟ್‌ಲಿಸ್ಟ್ ಮಾಡಿ.
* ಕಾರು ತಯಾರಕರ ಹತ್ತಿರದ ಟಚ್‌ಪಾಯಿಂಟ್ ಅಥವಾ ಅದರ ವೆಬ್‌ಸೈಟ್‌ಗೆ ಭೇಟಿ ನೀಡಿ
* ನಂತರ ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ಮಾಹಿತಿಯನ್ನು ಒದಗಿಸುವ ಮೂಲಕ ಟೆಸ್ಟ್ ಡ್ರೈವ್‌ಗಾಗಿ ನೋಂದಾಯಿಸಿ.
* ಜೊತೆಗೆ ನಿಮ್ಮ ಹತ್ತಿರದ ಕಾರು ಡೀಲರ್ ಜೊತೆಗೆ ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆಮಾಡಿ.
* ಕಾರು ಬುಕಿಂಗ್ ರಿಕ್ವೆಸ್ಟ್‌ ಮಾಡಿದ ನಂತರ, ಪ್ರಕ್ರಿಯೆಯನ್ನು ಸುಲಭಗೊಳಿಸಲು ಕಂಪನಿಯ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

car-test-drive

ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವ ಮುನ್ನ ಗಮನಿಸಬೇಕಾದ ವಿಷಯಗಳು!

* ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವಾಗ ವಿವಿಧ ಪುಶ್ ಬಟನ್‌ಗಳು, ಮ್ಯೂಸಿಕ್ ಸಿಸ್ಟಮ್, ಕಂಪಾರ್ಟ್‌ಮೆಂಟ್‌ಗಳು, ವೆಂಟ್‌ಗಳು, ವೈಪರ್ ಮತ್ತು ಹೆಚ್ಚಿನದನ್ನು ಪರಿಶೀಲಿಸುವುದರ ಸೂಕ್ತ. ಜೊತೆಗೆ ಲೆಗ್ ರೂಮ್, ಹಿಂಬದಿಯಲ್ಲಿರುವ ಹೆಡ್ ರೂಮ್, ಬೂಟ್ ಸ್ಪೇಸ್, ಒಟ್ಟಾರೆ ಆಯಾಮಗಳು, ಫಿನಿಶ್ ಮತ್ತು ಬಿಲ್ಡ್ ಕ್ವಾಲಿಟಿಯ ಬಗ್ಗೆ ನಿಮಗೆ ತೃಪ್ತಿ ಇದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಿ.
* ಕಾರಿನಲ್ಲಿನ ಪ್ರಾಥಮಿಕ ತಪಾಸಣೆಗಳನ್ನು ಅನುಸರಿಸಿ, ಸ್ಟೀರಿಂಗ್ ವೀಲ್ ಸೆಟ್ಟಿಂಗ್‌, ಸಿಟ್‌ ಹೈಟ್‌ ಸೆಟ್ಟಿಂಗ್‌, ಗೋಚರತೆ ಮತ್ತು ಸೌಕರ್ಯಗಳು ನಿಮ್ಮ ಆಯ್ಕೆಗೆ ಸರಿಹೊಂದಲಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಿ.
* ಇದೀಗ ಕಾರನ್ನು ನೀವು ಚಾಲನೆ ಮಾಡುವಾಗ, ಎಂಜಿನ್ ಕ್ಷಮತೆ ಮತ್ತು ಕಾರಿನ ಕಾರ್ಯಕ್ಷಮತೆಯನ್ನು ಅನುಭವಿಸಿ. ಅಲ್ಲದೆ ವಿಭಿನ್ನ ವೇಗಗಳು ಮತ್ತು ಪರಿಸ್ಥಿತಿಗಳಲ್ಲಿ ವಿಭಿನ್ನ ಗೇರ್‌ಗಳನ್ನು ಬಳಸಲು ಪ್ರಯತ್ನಿಸಬಹುದು.
* ಇದಲ್ಲದೆ ಒರಟು ಮತ್ತು ದಟ್ಟಣೆಯ ರಸ್ತೆಗಳಲ್ಲಿ ಕಾರು ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಗಮನಿಸಿ
* ಇನ್ನು ಕಾರನ್ನು ಪಾರ್ಕಿಂಗ್ ಮಾಡುವಾಗ, ರಿವರ್ಸ್‌ ತೆಗೆಯುವಾಗ ಮತ್ತು ಹೆದ್ದಾರಿಯಲ್ಲಿ ಲೇನ್ ಬದಲಾಯಿಸುವಾಗ ಎಲ್ಲಾ ಮಿರರ್‌ಗಳ ಮತ್ತು ಗೋಚರತೆಯ ಬಗ್ಗೆ ಗಮನಿಸಿ.

car-test-drive

ಹೀಗೆ ನಿಮ್ಮ ಟೆಸ್ಟ್‌ ಡ್ರೈವ್‌ ಮುಗಿದ ನಂತರ ನಿಮ್ಮ ಬಳಿ ಇರುವಂತಹ ಸಂದೇಹಗಳು ಮತ್ತು ಅನುಭವದ ಆಧಾರದ ಮೇಲೆ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಬಹುದಾಗಿದೆ. ನಂತರ ನಿಮ್ಮ ಆಯ್ಕೆಗೆ ಸೂಕ್ತವಾದ ಕಾರನ್ನು ಖರೀದಿಸಬಹುದಾಗಿದೆ.

More from DriveSpark

Article Published On: Saturday, May 13, 2023, 10:45 [IST]
English summary
Here's how to test drive a car? entire process details in kannada!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+