ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಮಳೆಗಾಲ ಬಂತೆಂದರೆ ಸಾಕು ಅದೇನು ಒಂಥರ ಖುಷಿ, ಮಳೆಗಾಲದಲ್ಲಿ ಒಂದು ಜಾಲಿ ರೈಡ್ ಹೋಗಲು ಪ್ರತಿಯೊಬ್ಬರಿಗೂ ಬಯಸುತ್ತಾರೆ. ಅಲ್ಲದೇ ಮಳೆಗಾಲದಲ್ಲಿ ನಾವು ದಿನನಿತ್ಯ ಕಾರುಗಳಲ್ಲಿ ಪ್ರಯಾಣ ಮಾಡುವಾಗಲೂ ಕೂಡ ನಾವು ತುಂಬ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಮಳೆ ಬಂದರೆ ಸಾಕು ಕೆಲವು ರಸ್ತೆಗಳು ಕಾಲುವೆಗಳ ರೀತಿಯಲ್ಲಿ ನೀರು ಹರಿಯುತ್ತದೆ. ಇನ್ನು ಕೆಲವು ರಸ್ತೆಗಳು ಕೆಸರು ತುಂಬಿ ವಾಹನ ಸವಾರರು ಮುಂದೆ ಸಾಗಲು ಹರಸಾಹಸ ಪಡಬೇಕಾಗುತ್ತದೆ. ಮಳೆಗಾಲದಲ್ಲಿ ಡ್ರೈವ್ ಮಾಡುವುದು ಒಂದು ಸವಾಲಾಗಿದೆ, ಮಳೆಗಾಲದಲ್ಲಿ ಡ್ರೈವ್ ಮಾಡುವಾಗ ನಾವು ತುಂಭಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ಮಳೆನಾಡು ರೀತಿಯ ಪ್ರದೇಶಗಳಲ್ಲಿ ಡ್ರೈವ್ ಮಾಡುವಾಗ ತುಂಬಾ ಮುನ್ನಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಕಾರು ಚಾಲಕರಿಗೆ ಪ್ರಮುಖದ ಕೆಲವು ಟಿಪ್ಸ್ ಗಳನ್ನು ನಾವು ಇಲ್ಲಿ ನೀಡುತ್ತೇವೆ.

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ನೀರು ನಿಂತಿರುವ ಪ್ರದೇಶದಲ್ಲಿ ಎಂಜಿನ್ ಸ್ಟಾರ್ಟ್ ಮಾಡಬೇಡಿ

ಮಳೆಗಾಲದಲ್ಲಿ ಎಲ್ಲಾ ರಸ್ತೆಗಳು ನೀರು ನಿಲ್ಲುವುದು ಸಾಮಾನ್ಯವಾಗಿದೆ. ಆದರೆ ಭಾರೀ ಮಳೆ ಬಂದು ರಸ್ತೆ ತುಂಬಾ ನೀರು ತುಂಬಿ ಹರಿಯುವ ಪ್ರದೇಶಗಳಲ್ಲಿ ನಿಮ್ಮ ಕಾರಿನ ಎಂಜಿನ್ ಅನ್ನು ಸ್ಟಾರ್ಟ್ ಮಾಡುವ ಪ್ರಯತ್ನ ಮಾಡಬೇಡಿ. ಇದರಿಂದ ಕಾರಿನ ಎಂಜಿನ್‌ಗೆ ನೀರು ಪ್ರವೇಶಿಸಿ ಹಾನಿಯಾಗುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಕಾರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ

ಮಳೆಗಾಲದಲ್ಲಿ ಹೆಚ್ಚಿನ ದೂರ ಪ್ರಯಾಣ ಮಾಡುವಾಗ ಎಂಜಿನ್ ಪ್ರೊಟೆಕ್ಟರ್ ಆಡ್-ಆನ್ ಅನ್ನು ಖರೀದಿಸುವುದು ಉತ್ತಮವಾಗಿದೆ. ಇದು ಮಳೆಗಾಲದಲ್ಲಿ ಕಾರಿನ ಎಂಜಿನ್‌ಗೆ ನೀರು ಪ್ರವೇಶಿಸದ ರೀತಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಅಪಘಾತದ ನಂತರ ವಿಮೆದಾರರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿ

ನಿಮ್ಮ ಕಾರು ಅಪಘಾತಕ್ಕೀಡಾದರೆ ಅದನ್ನು ಹತ್ತಿರದ ಗ್ಯಾರೇಜ್‌ಗೆ ಕೊಂಡೊಯ್ಯುವ ಬದಲು, ನಿಮ್ಮ ವಿಮಾದಾರರಿಗೆ ಈ ಘಟನೆಯ ಬಗ್ಗೆ ಆದಷ್ಟು ಬೇಗ ಮಾಹಿತಿಯನ್ನು ನೀಡಿ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿದ್ದರೆ ಅಥವಾ ಸಾವು ಸಂಭವಿಸಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

MOST READ: ವಾಹನ ಸಲಹೆ: ಕಾರಿನಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಮೆಕಾನಿಕ್ ಸಂಪರ್ಕಿಸಿ

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಅಂತಹ ಸಂದರ್ಭಗಳಲ್ಲಿ ವಿಮಾ ವಿಮಾದಾರರ ಮತ್ತು ಪೊಲೀಸರ ಅನುಮತಿಯಿಲ್ಲದೆ ನಿಮ್ಮ ಕಾರನ್ನು ಆ ಪ್ರದೇಶದಿಂದ ತೆಗೆದುಕೊಳ್ಳಬಾರದು. ವಿಮಾದಾರರು ಪರಿಶೀಲಿಸಿದ ನಂತರ ಅದನ್ನು ಗ್ಯಾರೇಜ್‌ಗೆ ಕಳಿಹಿಸಬಹುದಾಗಿದೆ.

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಡಿಜಿಟಲ್ ಆ್ಯಪ್ ಬಳಸಿ

ಸಾಮಾನ್ಯ ವಿಮೆದಾರರಾದ ಐಸಿಐಸಿಐ ಲೊಂಬಾರ್ಡ್, ಇಫ್ಕೊ-ಟೋಕಿಯೊ ಮತ್ತು ಬಜಾಜ್ ಅಲಿಯಾನ್ಸ್ ಜನರಲ್ ವೆಬ್ ಅಥವಾ ಅಪ್ಲಿಕೇಶನ್ ಆಧಾರಿತ ಡಿಜಿಟಲ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯಗಳನ್ನು ಪರಿಚಯಿಸಿದ್ದಾರೆ. ಅಪಘಾತವಾದ ಸಂದರ್ಭದಲ್ಲಿ ನಿಮ್ಮ ಕಾರಿನ ಫೋಟೋಗಳು ಅಥವಾ ವೀಡಿಯೊಗಳನ್ನು ಸಂಬಂಧಿತ ದಾಖಲೆಗಳನ್ನು ನೀಡಿದಾಗ ರೂ.20,000 ದಿಂದ ರೂ.50,000 ಗಳವರೆಗೆ ವಿಮೆ ದೊರೆಯುತ್ತದೆ.

ಮಳೆಗಾಲದಲ್ಲಿ ನಿಮ್ಮ ಕಾರು ಸುರಕ್ಷತೆಗಾಗಿ ಪ್ರಮುಖ ಸಲಹೆಗಳು

ಸಣ್ಣ ಪುಟ್ಟ ಅಪಘಾತಗಳಿಗೆ ವಿಮೆ ಬಳಸದಿರಿ

ಅಪಘಾತದಲ್ಲಿ ಕಾರುಗಳಿಗೆ ಸಣ್ಣ ಪುಟ್ಟ ಡ್ಯಾಮೆಜ್ ಸಂಭವಿಸಿದರೆ ವಿಮೆ ಕ್ಲೈಮ್ ಮಾಡದಿರುವುದು ಒಳ್ಳೆಯದು. ಕ್ಲೈಮ್ ಮಾಡದೇ ಇದ್ದರೇ ಕೆಲವು ಪ್ರೀಮಿಯಂ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಮೊದಲ ವರ್ಷದಲ್ಲಿ ಶೇ.20 ರಷ್ಟು ಮತ್ತು ಐದನೇ ವರ್ಷದ ನಂತರ ಕ್ಲೈಮ್ ಮಾಡುವಾಗ ಶೇ.50 ರಿಯಾಯಿತಿಯನ್ನು ಪಡೆಯಬಹುದಾಗಿದೆ

Most Read Articles

Kannada
English summary
5 Car Tips For Rainy Season. Read In Kannada.
Story first published: Saturday, August 29, 2020, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X