YouTube

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಕಾರು ಖರೀದಿಸಲು ಬಯಸುವವರ ಉತ್ಸಾಹವನ್ನು ಕುಂದಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬದಲಿಗೆ ಸಿಎನ್‌ಜಿ ವಾಹನಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಸಿಎನ್‌ಜಿ ಬೆಲೆ ಪೆಟ್ರೋಲ್, ಡೀಸೆಲ್‌ಗಿಂತ ತೀರಾ ಕಡಿಮೆ. ಸಿಎನ್‌ಜಿಯೊಂದಿಗೆ ಕಾರನ್ನು ಚಾಲನೆ ಮಾಡುವುದು ಕಡಿಮೆ ವೆಚ್ಚದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಚಾಲಿತ ಕಾರುಗಳನ್ನು ದೇಶದೆಲ್ಲೆಡೆ ಕಾಣಬಹುದು.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಪ್ರತಿಯೊಬ್ಬರೂ ಸಿಎನ್‌ಜಿಯ ಅನುಕೂಲಗಳನ್ನು ಮಾತ್ರ ತಿಳಿದಿದ್ದಾರೆ. ಆದರೆ ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲತೆಗಳ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಸಿ‌ಎನ್‌ಜಿ ವಾಹನಗಳಿಂದಾಗುವ ಅನಾನುಕೂಲಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಸ್ಥಳಾವಕಾಶದ ಕೊರತೆ

ಸಿಎನ್‌ಜಿ ಕಾರುಗಳಲ್ಲಿ ಸಿಲಿಂಡರ್‌ಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಸಾಮಾನ್ಯವಾಗಿ ಸಿಎನ್‌ಜಿ ಕಾರುಗಳಲ್ಲಿ, ಸಿಲಿಂಡರ್‌ಗಳನ್ನು ಬೂಟ್ ಸ್ಪೇಸ್'ನಲ್ಲಿ ಅಳವಡಿಸಲಾಗುತ್ತದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಇದು ಸಹಜವಾಗಿಯೇ ಬೂಟ್ ಸ್ಪೇಸ್ ಕೊರತೆಗೆ ಕಾರಣವಾಗುತ್ತದೆ. ಕಾರಿನಲ್ಲಿ ಸಾಕಷ್ಟು ಲಗೇಜ್'ಗಳೊಂದಿಗೆ ಪ್ರಯಾಣಿಸುವವರಿಗೆ ಸಿಎನ್‌ಜಿ ಕಾರುಗಳಿಂದ ಅನಾನುಕೂಲವಾಗುತ್ತದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಲಭ್ಯತೆಯ ಕೊರತೆ

ಪ್ರತಿ ಸಣ್ಣ ಹಾಗೂ ದೊಡ್ಡ ನಗರ ಅಥವಾ ಹಳ್ಳಿ, ಪಟ್ಟಣಗಳಲ್ಲಿ ಪೆಟ್ರೋಲ್, ಡೀಸೆಲ್ ಬಂಕ್'ಗಳನ್ನು ಕಾಣಬಹುದು. ಆದರೆ ಭಾರತದಲ್ಲಿ ಇನ್ನೂ ಸಹ ಸಿಎನ್‌ಜಿ ಕೇಂದ್ರಗಳ ಕೊರತೆಯಿದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಒಂದು ವೇಳೆ ನೀವು ನಗರದಿಂದ ಹೊರಗೆ ಹೋದರೆ ಅಥವಾ ದೀರ್ಘ ಪ್ರಯಾಣಕ್ಕೆ ಹೋಗಲು ನಿರ್ಧರಿಸಿದರೆ ಹೊರಡುವ ಮುನ್ನ ಸಿಎನ್‌ಜಿ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸುವುದು ಅವಶ್ಯಕ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಹಲವು ನಗರಗಳಲ್ಲಿ ಸಿಎನ್‌ಜಿ ಕೇಂದ್ರಗಳು ಇರುವುದೇ ಇಲ್ಲ. ಇದರಿಂದ ಸಿ‌ಎನ್‌ಜಿ ಕಾರುಗಳನ್ನು ಹೊಂದಿರುವವರು ತೊಂದರೆ ಅನುಭವಿಸುವುದು ತಪ್ಪುವುದಿಲ್ಲ.ಸಿಎನ್‌ಜಿ ಕಾರುಗಳು ಎಲ್ಲರಿಗೂ ಇಷ್ಟವಾಗದಿರಲು ಇದು ಒಂದು ಕಾರಣವಾಗಿದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಕಡಿಮೆಕಾರ್ಯಕ್ಷಮತೆ

ಸಿಎನ್‌ಜಿ ಕಾರುಗಳನ್ನು ಚಾಲನೆ ಮಾಡುವವರು ಕಾರು ನಿರೀಕ್ಷಿಸಿದಷ್ಟು ಪರ್ಫಾಮೆನ್ಸ್ ನೀಡುವುದಿಲ್ಲವೆಂದು ದೂರುತ್ತಾರೆ. ಸಿಎನ್‌ಜಿ ಕಾರುಗಳು ಪೆಟ್ರೋಲ್ ಚಾಲಿತ ಕಾರುಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗಲು ಇದು ಸಹ ಕಾರಣವಾಗಿದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಸಿಎನ್‌ಜಿ ಕಾರುಗಳ ಆಕ್ಸಲರೇಷನ್ ಪೆಟ್ರೋಲ್ ಕಾರುಗಳಿಗಿಂತ ಕಡಿಮೆ. ಈ ಕಾರುಗಳನ್ನು ಚಾಲನೆ ಮಾಡುವಾಗ ಕಡಿಮೆ ಪವರ್ ಭಾವನೆ ಉಂಟಾಗುತ್ತದೆ. ಪೆಟ್ರೋಲ್ ಕಾರು ಬಳಸಿ ಸಿಎನ್‌ಜಿ ಕಾರು ಚಾಲನೆ ಮಾಡಿದರೆ ಸಿಎನ್‌ಜಿ ಕಾರಿನಲ್ಲಿ ಕಡಿಮೆ ಪವರ್ ಗಮನಿಸಬಹುದು. ಸಿಎನ್‌ಜಿ ಕಾರಿನ ಕಾರ್ಯಕ್ಷಮತೆ ಪೆಟ್ರೋಲ್ ಕಾರಿಗಿಂತ 10-20%ನಷ್ಟು ಕಡಿಮೆ ಇರುತ್ತದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಎಂಜಿನ್‌ ತೊಂದರೆಗಳು

ಸಿಎನ್‌ಜಿ ಕಾರುಗಳನ್ನು ಬಳಸುತ್ತಿದ್ದರೆ ಕಾರಿನ ಸರ್ವೀಸ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇದಕ್ಕೆ ಕಾರಣವೆಂದರೆ ಪೆಟ್ರೋಲ್‌ ಕಾರುಗಳಿಗೆ ಹೋಲಿಸಿದರೆ ಸಿ‌ಎನ್‌ಜಿ ಕಾರುಗಳಲ್ಲಿರುವ ಸ್ಪಾರ್ಕ್ ಪ್ಲಗ್‌ಗಳು ಬಹು ಬೇಗ ಹಾಳಾಗುತ್ತವೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಸಿಎನ್‌ಜಿ ಕಾರ್ ಅನ್ನು ಹೆಚ್ಚು ಬಳಸುತ್ತಿದ್ದರೆ ಆ ಕಾರಿನ ಎಂಜಿನ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸರ್ವೀಸ್ ಮಾಡಿಸುವಾಗ ತೋರುವ ನಿರ್ಲಕ್ಷ್ಯದಿಂದ ಎಂಜಿನ್‌ಗೆ ದೊಡ್ಡ ಪ್ರಮಾಣದ ಹಾನಿಯುಂಟಾಗುತ್ತದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ನಿಮ್ಮ ಕಾರು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ನೀವು ಗಮನ ಹರಿಸಬೇಕು. ಅದರಲ್ಲೂ ಸಿಎನ್‌ಜಿ ಕಾರುಗಳನ್ನು ಚಾಲನೆ ಮಾಡುವವರು ಹೆಚ್ಚು ಗಮನ ಹರಿಸಬೇಕು.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಕಡಿಮೆ ರಿಸೇಲ್ ವ್ಯಾಲ್ಯೂ

ಸಿಎನ್‌ಜಿ ಕಾರುಗಳ ಮರುಮಾರಾಟ ಮೌಲ್ಯವು ಪೆಟ್ರೋಲ್, ಡೀಸೆಲ್ ಕಾರುಗಳಿಗಿಂತ ಕಡಿಮೆಯಾಗಿರುತ್ತದೆ. ಕಾರಿನಲ್ಲಿ ಆಫ್ಟರ್ ಮಾರ್ಕೆಟ್ ಸಿಎನ್‌ಜಿ ಕಿಟ್ ಅನ್ನು ಅಳವಡಿಸಿ ಅದನ್ನು ಮಾರಾಟಗಾರರ ಬಳಿಗೆ ತೆಗೆದುಕೊಂಡು ಹೋದರೆ ಕಡಿಮೆ ಮರುಮಾರಾಟ ಮೌಲ್ಯವನ್ನು ಪಡೆಯಬೇಕಾಗುತ್ತದೆ.

ಸಿ‌ಎನ್‌ಜಿ ಕಾರುಗಳಿಂದಾಗುವ ಅನಾನುಕೂಲಗಳಿವು

ಸೆಕೆಂಡ್ ಹ್ಯಾಂಡ್ ಕಾರನ್ನು ಕಡಿಮೆ ಬೆಲೆಯಲ್ಲಿ ಖರೀದಿಸ ಬಯಸುವವರು ಸಿ‌ಎನ್‌ಜಿ ಕಾರನ್ನು ಪೆಟ್ರೋಲ್ ಕಾರುಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Most Read Articles

Kannada
English summary
Disadvantages of CNG cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X