ನಿಮ್ಮ ಕಾರಿಗೆ ಖರ್ಚು ಮಾಡುವ ವೆಚ್ಚ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಯಾವುದೇ ಕಾರು ಮಾಲೀಕರಿಗೆ ತಮ್ಮ ಕಾರಿನ ನಿರ್ವಹಣೆ ಮಾಡುವುದು ದೊಡ್ಡ ತಲೆನೋವು. ಕಾರಿನ ಮೂಲ ನಿರ್ವಹಣಾ ಕಾರ್ಯಗಳನ್ನು ನಿರ್ಲಕ್ಷಿಸುವುದು ಪ್ರಮುಖ ರಿಪೇರಿಗೆ ಕಾರಣವಾಗಬಹುದು, ಇದು ಕಾರ್ ಮಾಲೀಕರ ಉಳಿತಾಯದ ಮೇಲೆ ಭಾರಿ ವೆಚ್ಚ ವ್ಯಯಿಸಬೇಕಾಗುತ್ತದೆ. ವಾಹನವನ್ನು ಸ್ವಲ್ಪ ದಿನನಿತ್ಯ ಪರಿಶೀಲನೆ ನಡೆಸುವುದು ಉತ್ತಮ ಅಭ್ಯಾಸವಾಗಿದೆ. ಏಕೆಂದರೆ ಇದು ಪ್ರಮುಖ ಕಾರು ರಿಪೇರಿಗೆ (Car Repair) ಸಂಬಂಧಿತ ವೆಚ್ಚಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.

ಆಯಿಲ್ ಬದಲಾಯಿಸಿ: ಎಂಜಿನ್ ಆಯಿಲ್, ಟ್ರಾನ್ಸ್ಮಿಷನ್ ಆಯಿಲ್ ಮತ್ತು ಬ್ರೇಕ್ ಆಯಿಲ್ ಸೇರಿದಂತೆ ಆಯಿಲ್ ಬದಲಾವಣೆಗಳನ್ನು ಬಿಟ್ಟುಬಿಡುವುದು ಭಾರೀ ರಿಪೇರಿಗೆ ಕಾರಣವಾಗಬಹುದು. ಆಯಿಲ್ ಸಮಸ್ಯೆಗಳು ಸರಿಪಡಿಸಲು ಕೆಲವು ದುಬಾರಿ ಕಾರು ನಿರ್ವಹಣೆ ವೆಚ್ಚವಾಗಬಹುದು. ಆದ್ದರಿಂದ ಅದನ್ನು ಎಂದಿಗೂ ಮರೆಯದಿರಿ. ಪ್ರತಿ 8,000 ಕಿಮೀ ಆಯಿಲ್ ಬದಲಾಯಿಸಿ ಅಥವಾ ಕಾರು ತಯಾರಕರ ಶಿಫಾರಸುಗಳನ್ನು ಅನುಸರಿಸಿ.

Car Repair

ಕ್ಯಾಬಿನ್ ಏರ್ ಫಿಲ್ಟರ್: ಕಾರ್ ಕ್ಯಾಬಿನ್ ಏರ್ ಫಿಲ್ಟರ್ ಎಸಿ ವೆಂಟ್‌ಗಳ ಮೂಲಕ ಮಾಲಿನ್ಯಕಾರಕಗಳು ಬರದಂತೆ ತಡೆಯುತ್ತದೆ. ಇದರಿಂದ ಏರ್ ಫಿಲ್ಟರ್ ಗಳನ್ನು ಹಾನಿಯಾಗದಂತೆ ನೋಡಿಕೊಳ್ಳಿ. ಹಳೆಯ ಏರ್ ಫಿಲ್ಟರ್ ಆದರೆ ಅದರ ಕಾಲವಧಿಯಲ್ಲಿ ಬಳಸುವುದರಿಂದ ಎಸಿ ಸಿಸ್ಟಂ ಪ್ರಮುಖ ಸಮಸ್ಯೆಗಳು ಉಂಟಾಗಬಹುದು. ಎಸಿ ಸಿಸ್ಟಂನಲ್ಲಿ ಸಮಸ್ಯೆಯಾದರೆ ಅದನ್ನು ಸರಿಪಡಿಸಲು ದೊಡ್ಡ ವೆಚ್ಚ ಬೇಕಾಗುತ್ತದೆ. ಹೆಚ್ಚು ಧೂಳಿನಿಂದ ಕೂಡಿದರೆ ಸಿಸ್ಟಂ ಅನ್ನು ಬದಲಾಯಿಸಲು ಸೂಚಿಸುತ್ತಾರೆ.

ವಿಂಡ್‌ಶೀಲ್ಡ್ ವೈಪರ್: ವಿಂಡ್‌ಶೀಲ್ಡ್ ವೈಪರ್‌ಗಳು ಉತ್ತಮ ಗೋಚರತೆಯನ್ನು ಖಾತ್ರಿಪಡಿಸುವಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಮಳೆಯ ಸಮಯದಲ್ಲಿ. ವಿಂಡ್‌ಶೀಲ್ಡ್ ವೈಪರ್ ಸುರಕ್ಷತೆ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಸಮರ್ಪಕ ವಿಂಡ್‌ಶೀಲ್ಡ್ ವೈಪರ್ ಅಸಾಮಾನ್ಯ ಶಬ್ದಗಳಿಗೆ ಕಾರಣವಾಗಬಹುದು ಮತ್ತು ಗಾಜಿನ ಮೇಲೆ ಗುರುತುಗಳನ್ನು ಬಿಡಬಹುದು. ಆದ್ದರಿಂದ, ಅಗತ್ಯವಿರುವಾಗ ಮತ್ತು ಸಮಯಕ್ಕೆ ಅವುಗಳನ್ನು ಬದಲಾಯಿಸುವುದು ಉತ್ತಮ.

Car Repair

ಬ್ಯಾಟರಿ ಸ್ವಚ್ಛವಾಗಿಡಿ: ಬ್ಯಾಟರಿ ಟರ್ಮಿನಲ್‌ಗಳು ವಾಹನದ ಸಂಪೂರ್ಣ ಎಲೆಕ್ಟ್ರಿಕಲ್ ಪವರ್ ಸಿಸ್ಟಂ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸವೆತವನ್ನು ಉಂಟುಮಾಡಬಹುದು. ಅಂತಿಮವಾಗಿ, ಬ್ಯಾಟರಿಯು ಕ್ರ್ಯಾಕ್ ಅಥವಾ ಸರಳವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಆದ್ದರಿಂದ, ಅವುಗಳನ್ನು ಯಾವಾಗಲೂ ಸ್ವಚ್ಛವಾಗಿಡಿ. ವರ್ಷಕ್ಕೆ ಎರಡು ಬಾರಿ ಬ್ಯಾಟರಿ ಪರೀಕ್ಷಿಸಿ.

ಎಲ್ಲಾ ಲೈಟ್ ಗಳನ್ನು ಪರಿಶೀಲಿಸಿ: ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಕಾರಿನ ಲೈಟ್ ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಹೆಡ್‌ಲೈಟ್‌ಗಳು ಡಾರ್ಕ್ ಡ್ರೈವಿಂಗ್ ಪರಿಸ್ಥಿತಿಗಳಲ್ಲಿ ಉತ್ತಮ ಗೋಚರತೆಯನ್ನು ಖಚಿತಪಡಿಸಿದರೆ, ಟರ್ನ್ ಇಂಡಿಕೇಟರ್‌ಗಳು, ಬ್ರೇಕ್ ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಇತರ ಚಾಲಕರು ಮತ್ತು ಪಾದಚಾರಿಗಳು ನಿಮ್ಮ ವಾಹನದ ಸ್ಥಾನ ಮತ್ತು ಉದ್ದೇಶಿತ ದೂರದವರೆಗೂ ಕಾಣುತ್ತದೆಯೇ ಎಂದು ನೋಡಿಕೊಳ್ಳಿ. ಕಾರಿನ ಎಲ್ಲಾ ಲೈಟ್ ಗಳನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ನಿಯಮಿತವಾಗಿ ಪರಿಶೀಲಿಸಿ.

Car Repair

ಟೈರ್‌ಗಳನ್ನು ಪರಿಶೀಲಿಸಿ: ನಿಮ್ಮ ಕಾರಿನಲ್ಲಿ ಯಾವಾಗಲೂ ಸ್ಪೇರ್ ವ್ಹೀಲ್ ಅನ್ನು ಇಟ್ಟುಕೊಳ್ಳುವುದು ಉತ್ತಮ. ಕಾರಿನ ಎಲ್ಳಾ ಟೈರ್‌ಗಳ ಟೈರ್ ಪ್ರೆಶರ್ ಅನ್ನು ಸರಿಯಾಗಿ ಪರೀಶಿಲಿಸಿ. ಜೊತೆಗೆ ಸ್ಪೇರ್ ಟೈರ್ ಉತ್ತಮ ಸ್ಥಿತಿಯಲ್ಲಿದೆಯೇ ಎಂದು ಕೂಡ ಪರಿಶೀಲಿಸಿ. ನೀವು ಲಾಂಗ್ ಡ್ರೈವ್ ಎಲ್ಲಾ ಹೋಗುವಾಗ ಎಲ್ಲಾ ನಾಲ್ಕು ಟೈರ್ ಗಳನ್ನು ಪರಿಶೀಲಿಸಿ. ಟೈರ್‌ಗಳು ಹೆಚ್ಚು ಸವೆದುಹೋಗಿದ್ದರೆ, ಅದನ್ನು ಬದಲಾಯಿಸಿ

ಸಸ್ಪೆಕ್ಷನ್ ಸೆಟಪ್: ಕಾರಿನ ಸಸ್ಪೆಕ್ಷನ್ ಸೆಟಪ್ ಬಹುಶಃ ನಿಮ್ಮ ಮನಸ್ಸಿಗೆ ಬರುವುದಿಲ್ಲ, ಆದರೆ ನಮ್ಮನ್ನು ನಂಬಿರಿ, ಇದು ಒರಟು ರಸ್ತೆಗಳು, ಹೊಂಡಗಳು ಮತ್ತು ಭಾರತೀಯ ರಸ್ತೆಗಳು ನಿಮ್ಮ ಕಾರಿನ ಎಲ್ಲಾ ಭಾರವನ್ನು ಹೊಂದಿರುವ ಸಂಕೀರ್ಣ ಕಾರ್ಯವಿಧಾನವಾಗಿದೆ. ಉತ್ತಮ ಸಸ್ಪೆಕ್ಷನ್ ಸೆಟಪ್ ಅನ್ನು ಖಚಿತಪಡಿಸಿಕೊಳ್ಳಿ. ಸಸ್ಪೆಕ್ಷನ್ ಸೆಟಪ್ ಅನ್ನು ನಿಯತಕಾಲಿಕವಾಗಿ ಪರಿಶೀಲಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Friday, September 1, 2023, 19:12 [IST]
English summary
Tips to avoid car repair cost effectively details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+