ಕಾರು ವಾರಂಟಿ: ಏನ್ಮಾಡಬೇಕು? ಏನ್ಮಾಡ್ಬರ್ದು?

ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ಕಾರು ತಯಾರಕ ಕಂಪನಿ ಕಾರಣವೆಂದು ವರ್ಕ್ ಶಾಪ್ ನವರು ಒಪ್ಪಿಕೊಂಡರೆ ರಿಪೇರಿ ಕೆಲಸ ಸಲೀಸು. ಆದ್ರೆ ಅವರು ರಿಪೇರಿ ಮಾಡುವ ವಿಷಯದಲ್ಲಿ ನಿಮ್ಮ ತಕರಾರು ಇದ್ದರೆ ಮೊದಲು ಡೀಲರಿಗೆ ಲಿಖಿತವಾಗಿ ದೂರು ನೀಡಿ. ನಂತರ ಕಾರು ಕಂಪನಿಗೆ ದೂರು ನೀಡಬಹುದು.
ಕೆಲವೊಮ್ಮೆ ವಾರಂಟಿ ಮುಗಿಯೋ ಸಮಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಆಗ ರಿಪೇರಿ ಮಾಡಲು ವಿಳಂಬ ಮಾಡಿ ವಾರೆಂಟಿ ಮುಗಿಯಿತು ಎಂದು ತಿಳಿಸಬಹುದು. ಈ ಸಮಯದಲ್ಲಿ ಅನಾವಶ್ಯಕ ವಾದ ಮಾಡಬೇಡಿ. ಲಿಖಿತವಾಗಿ ಯಾವಾಗ ಕಾರು ಹಾಳಾಯಿತು ಇತ್ಯಾದಿ ಮಾಹಿತಿಗಳನ್ನು ಬರೆದು ದೂರು ನೀಡಿ.
ವಾರಂಟಿ ಮುಗಿದಾಕ್ಷಣ ಪ್ರಮುಖ ಸಮಸ್ಯೆ ಕಂಡರೆ: ವಾರೆಂಟಿ ಮುಗಿದ ನಂತರ ಕಾರು ಕಂಪನಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಾಧ್ಯತೆಯಿದೆ. ವಾದ ಮಾಡಲು ನಮಗೂ ಆಧಾರವಿರುವುದಿಲ್ಲ. ಆದ್ರೆ ಕೆಲವೊಂದು ಗಂಭೀರ ಸಮಸ್ಯೆಗಳನ್ನು ಕಾರು ಕಂಪನಿಗಳು ಒಳ್ಳೆಯ ಗ್ರಾಹಕ ಸಂಬಂಧಕ್ಕಾಗಿ ಸರಿಪಡಿಸಿಕೊಡುತ್ತವೆ.
ಕೆಲವೊಮ್ಮೆ ಡೀಲರುಗಳು ರಿಪೇರಿ ಮಾಡಿಕೊಟ್ಟದ್ದು ಗ್ರಾಹಕರಿಗೆ ತೃಪ್ತಿದಾಯಕವಾಗಿರುವುದಿಲ್ಲ. ಅನಾನುಭವಿಗಳು ಒಮ್ಮೊಮ್ಮೆ ರಿಪೇರಿ ಮಾಡ್ತಾರೆ. ನಮ್ಮ ಓದುಗರೊಬ್ಬರು ಹ್ಯುಂಡೈ ಡೀಲರ್ ಬಳಿ ಅನುಭವಿಸಿದ ಕಷ್ಟದ ಕಥೆ ನೀವು ಓದಿರಬಹುದು.
ವಾರಂಟಿ ವಿಷಯದಲ್ಲಿ ನಿಮಗೆ ಕಾರು ಕಂಪನಿ ಅನಗತ್ಯ ಕಿರಿಕಿರಿ ಮಾಡಿದ್ರೆ, ಕಾನೂನು ಪ್ರಕಾರವಾಗಿ ನಿಮಗೆ ಸೇವೆ ನೀಡದಿದ್ರೆ ನೀವು ಕಾನೂನು ನೆರವು ಪಡೆಯಬಹುದು. ದುಡ್ಡಿದ್ರೆ ಕಾರು ಖರೀದಿಸುವುದು ಸುಲಭ. ಆದರೆ ಖರೀದಿಸಿದ ನಂತರದ ಕಷ್ಟ ಅನುಭವಿಸಿದವರಿಗೆ ಗೊತ್ತು.
ಓದುಗರೇ ಕಾರು ವಾರಂಟಿ ಸಂಬಂಧಿತ ಅನುಭವಗಳನ್ನು ನೀವ್ಯಾಕೆ ನಮ್ಮೊಂದಿಗೆ ಹಂಚಿಕೊಳ್ಳಬಾರದು. ಈಗ್ಲೇ ಈ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ. ಅಥವಾ ನೇರವಾಗಿ ನಿಮ್ಮ ಅನುಭವದ ಕಥೆಯನ್ನು ನಿಮ್ಮದೇ ಮಾತುಗಳಲ್ಲಿ ಬರೆದುಕಳುಹಿಸಿ.
ನಮ್ಮ ವಿಳಾಸ: [email protected]


Click it and Unblock the Notifications








