ಸ್ವಉದ್ಯೋಗಿಗಳು ಕಾರು ಖರೀದಿಸುವುದು ಹೇಗೆ?

* 8 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
* ಕಚೇರಿ ವಿಳಾಸ ದೃಡೀಕರಣಕ್ಕೆ ಟೆಲಿಫೋನ್ ಬಿಲ್ ಮತ್ತು ಸ್ವಉದ್ಯೋಗ ರಿಜಿಸ್ಟ್ರೇಷನ್ ದಾಖಲೆ
* ಆರುತಿಂಗಳ ಬ್ಯಾಂಕಿಂಗ್ ಸ್ಟೇಟ್ಮೆಂಟ್
* ವಾಸ ಪ್ರಮಾಣಪತ್ರ/ ಲ್ಯಾಂಡ್ ಲೈನ್ ಬಿಲ್/ ಪೋಸ್ಟ್ ಪೆಯ್ಡ್ ಬಿಲ್/ ಎಲೆಕ್ಟ್ರಿಕ್ ಬಿಲ್
* ಐಡೆಂಟೆಟಿ ಪ್ರೂಫ್- ಪಾನ್ ಕಾರ್ಡ್ ಅಥವಾ ಪಾಸ್ ಪೋರ್ಟ್
* ಸ್ವಉದ್ಯೋಗ ಲಾಭ ಮತ್ತು ನಷ್ಟ ಖಾತೆಯ ಇತ್ತೀಚಿನ 2 ವರ್ಷದ ಐಟಿಆರ್
* 11 ಚೆಕ್
* ಈ ಹಿಂದಿನ ಕಾರಿನ ಆರ್ ಸಿ ಬುಕ್ ನೆರಳಚ್ಚು ಪ್ರತಿ
* ಈ ಹಿಂದೆ ಮಾಡಿದ ಸಾಲದ ಮಾಹಿತಿ
ಪಾಲುದಾರ ಕಂಪನಿ/ಲಿಮಿಟೆಡ್ ಕಂಪನಿ/ಪ್ರೈವೇಟ್ ಲಿಮಿಟೆಡ್ ಉದ್ದಿಮೆದಾರರು ಕಾರು ಖರೀದಿಗೆ ನೀಡಬೇಕಾದ ದಾಖಲೆಗಳು
* 3 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ, ಪಾಲುದಾರ/ನಿರ್ದೇಶಕರ ಐಡೆಂಟೆಟಿ ಪ್ರೂಫ್
* ಕಚೇರಿ ವಿಳಾಸ ದೃಡೀಕರಣಕ್ಕೆ ಟೆಲಿಫೋನ್ ಬಿಲ್ ಮತ್ತು ಸ್ವಉದ್ಯೋಗ ರಿಜಿಸ್ಟ್ರೇಷನ್ ದಾಖಲೆ
* ಬ್ಯಾಂಕಿನಿಂದ ಸಹಿ ದೃಢೀಕರಣ
* ಆರುತಿಂಗಳ ಬ್ಯಾಂಕಿಂಗ್ ಸ್ಟೇಟ್ಮೆಂಟ್
* ಸ್ವಉದ್ಯೋಗ ಲಾಭ ಮತ್ತು ನಷ್ಟ ಖಾತೆಯ ಇತ್ತೀಚಿನ 2 ವರ್ಷದ ಐಟಿಆರ್
* 11 ಚೆಕ್
* ಈ ಹಿಂದಿನ ಕಾರಿನ ಆರ್ ಸಿ ಬುಕ್ ನೆರಳಚ್ಚು ಪ್ರತಿ
* ಈ ಹಿಂದೆ ಮಾಡಿದ ಸಾಲದ ಮಾಹಿತಿ ದಾಖಲೆ
* ಪಾರ್ಟನರ್ಷಿಪ್ ಎಂಒಯು
* ಈ ಹಿಂದೆ ಮಾಡಿದ ಯಾವುದೇ ಸಾಲದ ಮಾಹಿತಿ
ಕಾರು ಖರೀದಿಗೆ ಬೇಕಾದ ದಾಖಲೆಗಳು ಇವು. ಈ ಮಾಹಿತಿಯನ್ನು ಬೆಂಗಳೂರು ಟ್ರಿಡೆಂಟ್ ಹ್ಯುಂಡೈನಿಂದ ಪಡೆದುಕೊಳ್ಳಲಾಗಿದೆ. ಇದರಲ್ಲಿ ಕೆಲವು ದಾಖಲೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರಬಹುದು.
ನಿಮಗೆ ಉಪಯೋಗವಾದೀತು ಎಂಬ ಭಾವನೆಯಿಂದ ಕನ್ನಡದ ಮೊದಲ ವಾಹನ ವೆಬ್ ಸೈಟ್ "ಕನ್ನಡ ಡ್ರೈವ್ ಸ್ಪಾರ್ಕ್" ಈ ಮಾಹಿತಿ ನೀಡಿದೆ. ನಿಮಗೆ ಇನ್ಯಾವ ಮಾಹಿತಿ ಬೇಕಾದರೆ ಕಾಮೆಂಟ್ ಬರೆಯಲು ಮರೆಯದಿರಿ. ನಿಮ್ಮ ವಾಹನ ಚಾಲನೆಯ ಆಸಕ್ತಿಗೆ ಇನ್ನಷ್ಟು ಅಶ್ವಶಕ್ತಿ ನೀಡಲು ಡ್ರೈವ್ ಸ್ಪಾರ್ಕ್ ಯಾವತ್ತಿಗೂ ರೆಡಿ.


Click it and Unblock the Notifications








