ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

By Manoj Bk

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದು, ಇಂಧನ ಬೆಲೆ ಏರಿಕೆಯಿಂದ ಹೈರಣಾಗಿರುವ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಇಂಧನಕ್ಕೆ ಪರ್ಯಾಯವಾದ ವಾಹನಗಳಿಗೆ ಬದಲಾಗುತ್ತಿದ್ದಾರೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಸಿಎನ್‌ಜಿ ಇಂಧನವು ಪೆಟ್ರೋಲ್, ಡೀಸೆಲ್'ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಸಿಎನ್‌ಜಿ ಕಾರುಗಳ ಚಾಲನಾ ವೆಚ್ಚ ಪೆಟ್ರೋಲ್, ಡೀಸೆಲ್ ಕಾರುಗಳಿಗಿಂತ ಕಡಿಮೆಯಾಗಿದೆ. ಆದರೆ ಸಿ‌ಎನ್‌ಜಿ ಕಾರುಗಳಲ್ಲಿ ಬೂಟ್ ಸ್ಪೇಸ್ ಕೊರತೆ ಸೇರಿದಂತೆ ಕೆಲವು ನ್ಯೂನತೆಗಳಿವೆ. ಇವುಗಳನ್ನು ಹೊರತುಪಡಿಸಿದರೆ ಸಿಎನ್‌ಜಿ ಕಾರುಗಳು ಚಾಲನೆಗೆ ಪರಿಪೂರ್ಣ ಆಯ್ಕೆಯಾಗಿವೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಆದರೆ ಸಿಎನ್‌ಜಿ ಕಾರುಗಳ ನಿರ್ವಹಣೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ. ಸಿಎನ್‌ಜಿ ಕಾರುಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈ ಸಲಹೆಗಳು ಬೇಸಿಗೆ ಕಾಲ ಸೇರಿದಂತೆ ಎಲ್ಲಾ ಋತುಗಳಿಗೂ ಅನ್ವಯಿಸುತ್ತವೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಹೈಡ್ರೋ ಟೆಸ್ಟ್:

ಸಿಎನ್‌ಜಿ ಸಿಲಿಂಡರ್‌ಗಳನ್ನು ಮೂರು ವರ್ಷಗಳಿಗೊಮ್ಮೆ ಹೈಡ್ರೋ ಟೆಸ್ಟ್'ಗೆ ಒಳಪಡಿಸಬೇಕು. ಈ ಟೆಸ್ಟ್ ಸಿಲಿಂಡರ್'ಗಳಲ್ಲಿರುವ ನ್ಯೂನತೆಗಳನ್ನು ಪತ್ತೆ ಹಚ್ಚಿ ಸಿಲಿಂಡರ್'ನಲ್ಲಿ ಯಾವುದೇ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಬೇಸಿಗೆಯಲ್ಲಿ ಕಾರುಗಳನ್ನು ಹೆಚ್ಚಿನ ತಾಪಮಾನದಲ್ಲಿ ಚಾಲನೆ ಮಾಡಬೇಕಾಗಿರುವುದರಿಂದ ಆ ಸಮಯದಲ್ಲಿ ಹೈಡ್ರೋ ಟೆಸ್ಟ್ ಮಾಡಿಸುವುದು ಬಹಳ ಮುಖ್ಯವಾಗಿದೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಸಿಎನ್‌ಜಿ ಸಿಲಿಂಡರ್ ಅನ್ನು ಪೂರ್ತಿಯಾಗಿ ಭರ್ತಿ ಮಾಡದಿರಿ:

ಸಿಎನ್‌ಜಿ ಕಾರುಗಳಲ್ಲಿ ಸಿಲಿಂಡರ್'ಗಳಿರುತ್ತವೆ. ಈ ಸಿಲಿಂಡರ್ ಗಳಲ್ಲಿ ಸಿಎನ್‌ಜಿ ಇಂಧನವನ್ನು ಪೂರ್ತಿಯಾಗಿ ತುಂಬಿಸಬಾರದು. ಬೇಸಿಗೆಯಲ್ಲಿ ಥರ್ಮಲ್ ಎಕ್ಸ್ ಪ್ಯಾಂಷನ್ ಆಗುವುದು ಇದಕ್ಕೆ ಕಾರಣ. ಕಾರುಗಳಲ್ಲಿರುವ ಸಿಲಿಂಡರ್‌ ಸಾಮರ್ಥ್ಯ 8 ಲೀಟರ್ ಆದರೆ 7 ಲೀಟರ್ ಸಿ‌ಎನ್‌ಜಿ ಇಂಧನ ತುಂಬಿಸುವುದು ಒಳ್ಳೆಯದು.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಸಿಎನ್‌ಜಿ ಇಂಧನವನ್ನು ಪೂರ್ತಿಯಾಗಿ ತುಂಬಿಸುವುದರಿಂದ ಪ್ರಯಾಣದ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಇಂಧನ ತುಂಬಿಸಲು ಪರದಾಡುವುದು ತಪ್ಪುತ್ತದೆ ಎಂಬ ಅಭಿಪ್ರಾಯ ಸರಿಯಲ್ಲ. ಕೆಲವು ಕಾರುಗಳಲ್ಲಿ ಸಿ‌ಎನ್‌ಜಿ ಜೊತೆಗೆ ಪೆಟ್ರೋಲ್ ಇಂಧನಕ್ಕೆ ಬದಲಿಸಲು ಅವಕಾಶವಿರುತ್ತದೆ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಸಿಲಿಂಡರ್‌ ಮುಕ್ತಾಯ ದಿನಾಂಕವನ್ನು ಗಮನಿಸಿ:

ಸಿಎನ್‌ಜಿ ಸಿಲಿಂಡರ್ ಮುಕ್ತಾಯ ದಿನಾಂಕವನ್ನು ಹೊಂದಿರುತ್ತದೆ. ಈ ಕಾರಣಕ್ಕೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅವುಗಳ ಎಕ್ಸ್ ಪೈರಿ ಡೇಟ್ ಅನ್ನು ಪರಿಶೀಲಿಸಿ, ಮುಕ್ತಾಯದ ಅವಧಿ ಮುಗಿದಿದ್ದರೆ ಬದಲಿಸುವುದು ಒಳ್ಳೆಯದು.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ನೆರಳಿನಲ್ಲಿ ನಿಲುಗಡೆ:

ಸಿಎನ್‌ಜಿ ಕಾರುಗಳನ್ನು ನೆರಳಿನಲ್ಲಿ ನಿಲ್ಲಿಸುವುದು ಅವಶ್ಯಕ (ಇದು ಸಿಎನ್‌ಜಿ ಅಲ್ಲದ ಕಾರುಗಳಿಗೂ ಅನ್ವಯಿಸುತ್ತದೆ). ಬೇಸಿಗೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇದರಿಂದ ಕಾರಿನ ಕ್ಯಾಬಿನ್ ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕಾರುಗಳನ್ನು ನೆರಳಿನಲ್ಲಿ ಪಾರ್ಕ್ ಮಾಡುವುದು ಉತ್ತಮ.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಧೂಮಪಾನ ಮಾಡದಿರಿ:

ಧೂಮಪಾನದಿಂದ ಆರೋಗ್ಯ ಹದಗೆಟ್ಟು ಸಾವಿಗೂ ಕಾರಣವಾಗುತ್ತದೆ. ಸಿಎನ್‌ಜಿ ಕಾರಿನೊಳಗೆ ಧೂಮಪಾನ ಮಾಡುವುದು ಇನ್ನಷ್ಟು ಅಪಾಯಕಾರಿ.ಸಿಎನ್‌ಜಿ ಕಾರಿನೊಳಗೆ ಧೂಮಪಾನ ಮಾಡದಿರಿ. ಸಿಎನ್‌ಜಿ ಕಾರಿನಲ್ಲಿ ಸುಡುವ ವಸ್ತುಗಳನ್ನು ಕೊಂಡೊಯ್ಯದಿರುವುದು ಒಳ್ಳೆಯದು.

ಸಿ‌ಎನ್‌ಜಿ ಕಾರುಗಳನ್ನು ನಿರ್ವಹಿಸುವ ಸರಳ ವಿಧಾನಗಳಿವು

ಎಂಜಿನ್ ಆಫ್ ಮಾಡಿ:

ಸಿಎನ್‌ಜಿ ಕಾರು ಮಾಲೀಕರು ಪಾಲಿಸಬೇಕಾದ ಪ್ರಮುಖ ಸುರಕ್ಷತಾ ಮುನ್ನೆಚ್ಚರಿಕೆಗಳಲ್ಲಿ ಇದು ಸಹ ಒಂದು. ಸಿಎನ್‌ಜಿಯೊಂದಿಗೆ ಇಂಧನ ತುಂಬುವ ಮುನ್ನ ಕಾರಿನ ಎಂಜಿನ್ ಆಫ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಅಗ್ನಿ ಅನಾಹುತಗಳನ್ನು ತಡೆಯ ಬಹುದು.

Most Read Articles

Kannada
English summary
Easy tips for CNG car maintenance. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X